
ಭಾರತದಲ್ಲಿ ವಿವೋ, ರೆಡ್ಮಿ, ಸ್ಯಾಮ್ ಸಂಗ್, ರಿಯಲ್ ಮಿ ಫೋನುಗಳು ಹೆಚ್ಚಾಗಿ ಬಿಡುಗಡೆ ಆಗುತ್ತವೆ. ಈ ಫೋನುಗಳು ಉತ್ತಮ RAM ಮತ್ತು ಶೇಖರಣಾ ಆಯ್ಕೆಗಳನ್ನು ಹೊಂದಿದೆ. ಆದರೆ ಇಂದು ನಾವು 50 ಮೆಗಾಪಿಕ್ಸೆಲ್ ಕ್ಯಾಮೆರಾ ಲೆನ್ಸ್ ನೊಂದಿಗೆ ಬರುವ ಸ್ಮಾರ್ಟ್ಫೋನ್ ಬಗ್ಗೆ ಹೇಳಲಿದ್ದೇವೆ. ಈ ಮೊಬೈಲ್ ಫೋನ್ ಗಳನ್ನು ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸಬಹುದು.

Vivo T1 5G ಭಾರತದಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಈ ಮೊಬೈಲ್ ನ 4GB RAM ಮತ್ತು 128GB ಆಂತರಿಕ ಸ್ಟೋರೆಜ್ ಮಾದರಿಯ ಆರಂಭಿಕ ಬೆಲೆ 15,990 ರೂ. ಈ ಮೊಬೈಲ್ ಬ್ಯಾಕ್ ಪ್ಯಾನೆಲ್ ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.



