Updated on: Sep 10, 2022 | 8:00 AM
ಪರ್ವತಗಳು, ನದಿಗಳು, ಸಮುದ್ರಗಳು, ಮರುಭೂಮಿ ಸೇರಿದಂತೆ ಅನೇಕ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಕೊಡುತ್ತಾರೆ. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಭೇಟಿಕೊಡಬೇಕಾದ ಕೆಲವು ಅದ್ಭುತ ಸ್ಥಳಗಳಿವೆ. ಅವುಗಳು ಈ ಕೆಳಗಿನಂತಿವೆ.
ಪಶ್ಚಿಮ ಘಟ್ಟ ಪರ್ವತಗಳು: ಪಶ್ಚಿಮ ಘಟ್ಟ ಪರ್ವತಗಳನ್ನು ಸಹ್ಯಾದ್ರಿ ಪರ್ವತಗಳು ಎಂದೂ ಕರೆಯುತ್ತಾರೆ. ಈ ಪರ್ವತ ಶ್ರೇಣಿಯು ಗುಜರಾತ್ ಗಡಿಯಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿದೆ. ಈ ಪರ್ವತಗಳ ಜೀವವೈವಿಧ್ಯವು ಪ್ರಪಂಚದ ಇತರ ಪ್ರವಾಸಿ ತಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಪರ್ವತ ಶ್ರೇಣಿಯ ಒಡಲಲ್ಲಿ ಬೆಳೆದು ನಿಂತಿರುವ ಎಷ್ಟೋ ಅಜ್ಞಾತ ಸಸ್ಯಗಳು ಮತ್ತು ಮರಗಳ ಒಳಗೆ ವಾಸಿಸುವ ಪ್ರಾಣಿಗಳನ್ನು ನೋಡುವಾಗ ಬೆರಗು ಮೂಡಿಸದೆ ಇರಲಾರದರು.
Best Tourist Places Best places in India that you must visit in your lifetime