Updated on:Sep 09, 2022 | 6:32 PM
ಆಸ್ಟ್ರೇಲಿಯಾದ ODI ಮತ್ತು T20 ನಾಯಕ ಆರೋನ್ ಫಿಂಚ್ ನಿವೃತ್ತಿಗೆ ಮುಂದಾಗಿದ್ದಾರೆ. ಈ ದಿಗ್ಗಜ ಬಲಗೈ ಬ್ಯಾಟ್ಸ್‌ಮನ್ ಏಕದಿನ ಮಾದರಿಗೆ ವಿದಾಯ ಹೇಳುವ ಮನಸ್ಸು ಮಾಡಿದ್ದಾರೆ. ಆಸ್ಟ್ರೇಲಿಯಾ ವೆಬ್‌ಸೈಟ್ ನ್ಯೂಸ್ ಕಾರ್ಪ್‌ನ ಸುದ್ದಿ ಪ್ರಕಾರ, ಕಳಪೆ ಫಾರ್ಮ್‌ನಿಂದಾಗಿ ಫಿಂಚ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಆರನ್ ಫಿಂಚ್ ಅತ್ಯಂತ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದು, ಫಿಂಚ್ ಈ ವರ್ಷ 13 ODI ಇನ್ನಿಂಗ್ಸ್‌ಗಳಲ್ಲಿ ಕೇವಲ 13 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಜೊತೆಗೆ ಈ ಕ್ಯಾಲೆಂಡರ್ ವರ್ಷದಲ್ಲಿ ಫಿಂಚ್ ಬರೋಬ್ಬರಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ODIನಲ್ಲಿ, ಆರನ್ ಫಿಂಚ್ 0 ರನ್ ಗಳಿಸಿ ಔಟಾದರು ಮತ್ತು ಇದರೊಂದಿಗೆ ಅವರು ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯನ್ನು ಮಾಡಿದರು. ಫಿಂಚ್ ಒಂದು ಕ್ಯಾಲೆಂಡರ್ ವರ್ಷದಲ್ಲಿ 0 ಗೆ ಹೆಚ್ಚು ಬಾರಿ ಔಟಾದ ಆಸ್ಟ್ರೇಲಿಯಾದ ನಾಯಕ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಅಂದಹಾಗೆ, ಏಕದಿನ ಮಾತ್ರವಲ್ಲದೆ ಟಿ20ಯಲ್ಲೂ ಫಿಂಚ್ ಕಳಪೆ ಪ್ರದರ್ಶನ ಮುಂದುವರಿದಿದೆ. ಈ ಬಲಗೈ ಓಪನರ್ ಆರಂಭಿಕರಾಗಿ ಅತಿ ಹೆಚ್ಚು ಬಾರಿ 0 ಗೆ ಔಟಾದ ನಾಯಕ ಎನಿಸಿಕೊಂಡಿದ್ದಾರೆ. ನಾಯಕನಾಗಿ ಫಿಂಚ್ 6 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಆಸೀಸ್ ನಾಯಕನ ನಂತರ ಬಾಬರ್ ಆಜಮ್ 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಟಿ 20 ವಿಶ್ವಕಪ್‌ಗೆ ಮೊದಲು, ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೂಡ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅತಿಯಾದ ಕ್ರಿಕೆಟ್ ನಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಟೋಕ್ಸ್ ಹೇಳಿದ್ದರು.
Published On - 6:32 pm, Fri, 9 September 22