
ಭಾರತದಲ್ಲಿ ಜಿಯೋ ಹಾಗೂ ಏರ್ಟೆಲ್ ಟೆಲಿಕಾಂ ಮಾರುಕಟ್ಟೆಯ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ಸರ್ಕಾರಿ ಒಡೆತನದ ಬಿಎಸ್ ಎನ್ ಎಲ್ ಕಂಪನಿ ತನ್ನ ಬ್ರಾಂಡ್ ಬ್ಯಾಂಡ್ ನಲ್ಲಿ ಆಕರ್ಷಕ ಯೋಜನೆಯನ್ನು ತರುತ್ತಿದೆ. ಇದೀಗ ಅಂಥಹದೆ ಒಂದು ಅಚ್ಚರಿಯ ಪ್ಲಾನ್ ಗ್ರಾಹಕರಿಗಾಗಿ ಪರಿಚಯಿಸಿದೆ. ಹಾಗಾದ್ರೆ ಯಾವುದು ಆ ಯೋಜನೆ?, ಬೆಲೆ ಎಷ್ಟು ಎಂಬ ಬಗೆಗಿನ ಮಾಹಿತಿ ತಿಳಿಯೋಣ.

ಸರ್ಕಾರಿ ಟೆಲಿಕಾಂ ಕಂಪನಿ BSNL ಭಾರತೀಯ ಸಂಚಾರ ನಿಗಮ ಲಿಮಿಟೆಡ್ ಹೊಸ ಬ್ರಾಡ್ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ. ಭಾರತ್ ಫೈಬರ್ ಸೇವಾ ಯೋಜನೆಯಡಿಯಲ್ಲಿ BSNL ನ ಹೊಸ 329 ರೂ. ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಯೊಂದಿಗೆ ಹೆಚ್ಚಿನ ಡೇಟಾವನ್ನು ನೀಡಲಾಗುತ್ತಿದೆ.

BSNL ನ 329 ರೂ. ಯೋಜನೆಯಲ್ಲಿ ಒಟ್ಟು ಬರೋಬ್ಬರಿ 1TB ಅಂದರೆ 1000GB ಇಂಟರ್ನೆಟ್ ಡೇಟಾ ಮತ್ತು ಉಚಿತ ಫಿಕ್ಸೆಡ್ ಲೈನ್ ಧ್ವನಿ ಕರೆಗಳು ಲಭ್ಯವಿರುತ್ತವೆ. ನೀವು ಈ ಯೋಜನೆಯನ್ನು ರೀಚಾರ್ಜ್ ಮಾಡಿದರೆ ಮೊದಲ ತಿಂಗಳಲ್ಲಿ ನಿಮಗೆ 90 ಪ್ರತಿಶತ ರಿಯಾಯಿತಿಯನ್ನು ನೀಡಲಾಗುತ್ತದೆ.

BSNL ನ ಈ ಯೋಜನೆಯಲ್ಲಿ ಗರಿಷ್ಠ ಇಂಟರ್ನೆಟ್ ವೇಗವು 20 Mbps ಆಗಿರುತ್ತದೆ. ಅಲ್ಲದೆ ಈ ಯೋಜನೆಯಲ್ಲಿ ಪ್ರತಿದಿನ 100 SMS ಲಭ್ಯವಿರುತ್ತದೆ.

ಈ ಹಿಂದೆ BSNL 449 ರೂ. ಗೆ ಹೊಸ ಯೋಜನೆಯನ್ನು ಪರಿಚಯಿಸಿತ್ತು. ಇದು ಕೂಡ BSNL ನ ಅತ್ಯಂತ ಕೈಗೆಟುಕುವ ಯೋಜನೆಯಾಗಿದೆ.
Published On - 12:50 pm, Sun, 13 March 22