ಇದು ಅಪ್ಪಟ ಹಳ್ಳಿಯ ಸೊಗಡು! ಭಲೆ ಬಸವಂದಿರು, ಬಲ ಭೀಮಂದಿರ ಪರಾಕ್ರಮ ಹೇಗಿತ್ತು? ಚಿತ್ರಗಳಲ್ಲಿ ನೋಡಿ

| Updated By: ಸಾಧು ಶ್ರೀನಾಥ್​

Updated on: Jan 23, 2023 | 6:01 PM

ಅಲ್ಲಿ ಭಲೆ ಬಸವಂದಿರು ಬಲ ಭೀಮಂದಿರು ಪರಾಕ್ರಮ ಮೆರೆದಿದ್ರು. ಅವರ ಶಕ್ತಿಸಾಮರ್ಥ್ಯ ಕಂಡು ನೋಡುಗರು ಅಬ್ಬಾ ಎನ್ನುತ್ತಿದ್ದರು. ಮದಗಜಗಳಂತಿದ್ದ ಅವರ ಕಸರತ್ತು ಕಂಡು ಕ್ಷಣಕಾಲ ನಿಬ್ಬೆರಗಾಗುತ್ತಿದ್ದರು. ಅಷ್ಟಕ್ಕೂ ಆ ಶಕ್ತಿ ಪ್ರದರ್ಶಿಸುವ ಭಲೆ ಬಸವಂದಿರ ಕ್ರೀಡೆ ಹೇಗಿತ್ತು? ಇಲ್ಲಿವೆ ಚಿತ್ರಗಳು

1 / 21
ಅಂದಹಾಗೆ ರೈತರ ಮನರಂಜನೆಯೇ... ಈ ಸ್ಪರ್ಧೆಯ ಉದ್ದೇಶವಾಗಿತ್ತು ಎಂದವರು ಆಯೋಜಕರಾದ ಪಾಂಡುರಂಗ.

2 / 21
ಇನ್ನು ಬೆನಕಟ್ಟಿ ಗ್ರಾಮದಲ್ಲಿ  10 ವರ್ಷಗಳಿಂದ ಈ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಭಲೆಬಸವಂದಿರು ತೆರೆದ ಬಂಡಿ ಎಳೆದು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸ್ಪರ್ಧೆಯಲ್ಲಿ ವಿಶೇಷ ಬಹುಮಾನಗಳನ್ನು ಕೂಡ ನಿಗಧಿದಿಮಾಡಲಾಗಿತ್ತು. ಎರಡು ನಿಮಿಷದಲ್ಲಿ ಯಾವ ಎತ್ತು ಹೆಚ್ಚು ದೂರ ಓಡುತ್ತದೋ ಆ ಎತ್ತಿಗೆ ನಗದು ಬಹುಮಾನ ನಿಗದಿ ಮಾಡಲಾಗಿತ್ತು.

3 / 21
ಅವುಗಳು ಚಕ್ಕಡಿ ಬಂಡಿ ಎಳೆಯುವ ಸಾಹಸ ನೋಡುಗರ ಮೈಬೆವರಳಿಯುವಂತಿತ್ತು. ಈ ಕ್ರೀಡೆಗೆ ಅಂತಾನೆ ಎತ್ತುಗಳನ್ನು ರೈತರು ವಿಶೇಷವಾಗಿ ಆರೈಕೆ ಮಾಡುತ್ತಾರೆ. ದಿನಾಲು ನುಚ್ಚು ಗೋಧಿ, ಹುರುಳಿ, ಹಾಲುಣಿಸಿ ಬೆಳೆಸಿದ ಎತ್ತುಗಳು ಅವು. ಕಠಿಣವಾದ ಸ್ಪರ್ಧೆಯನ್ನು ಅತಿ ಸರಳವಾಗಿ ಪೂರ್ಣಗೊಳಿಸಿದ್ವು.

4 / 21
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಎತ್ತುಗಳನ್ನು ನೋಡೋದೆ ಕಣ್ಣಿಗೆ ಹಬ್ಬವೆನ್ನುವಂತಿತ್ತು. ಯಾಕಂದ್ರೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎತ್ತುಗಳು ಸಾಮಾನ್ಯ ಎತ್ತುಗಳಾಗಿರಲಿಲ್ಲ. ಪಕ್ಕಾ ಮದಿಸಿದ ಆನೆಯಂತೆ ಕೊಬ್ಬಿದ ಎತ್ತುಗಳಾಗಿದ್ವು. ಒಂದೊಂದು ಜೋಡಿ ಐದು, ಆರು, ಹತ್ತು, 15 ಲಕ್ಷ ರೂಪಾಯಿ ಕಿಮ್ಮತ್ತಿನ ಎತ್ತುಗಳಿದ್ವು.

5 / 21
ಎತ್ತುಗಳು ತೆರೆದಬಂಡಿ ಎಳೆಯೋದು ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಎಲ್ಲ ಕಡೆ ನಡೆಯುವಂತೆ ಇಲ್ಲಿಯೂ ಚಕ್ಕಡಿ ಬಂಡಿಯ ಗಾಲಿ ತಿರುಗುತ್ತಿರಲಿಲ್ಲ. ಚಕ್ಕಡಿ ಬಂಡಿ ಗಾಲಿಗೆ ಒಂದು ಮರದ ಕೊಂಬೆ ಅಡ್ಡಲಾಗಿ ಸೇರಿಸಲಾಗಿತ್ತು. ಇದರಿಂದ ಇಡೀ ಚಕ್ಕಡಿ ಬಂಡಿ ಮತ್ತು ಅದರ ಮೇಲೆ ಕೂತ ಇಬ್ಬರ ಭಾರವನ್ನೂ ಎಳೆಯುವ ಎತ್ತುಗಳ ಸಾಹಸ ಗಮನಸೆಳೆಯಿತು.

6 / 21
ಚಕ್ರಕ್ಕೆ ಕಂಬ ಸಿಲುಕಿಸಿದರೂ ಬಂಡಿ ಎಳೆದು ಪರಾಕ್ರಮ. ಒಟ್ಟಾರೆ ಗ್ರಾಮೀಣ ಕ್ರೀಡೆ ನಶಿಸುವ ವೇಳೆ ನಡೆದ ತೆರೆದ ಬಂಡಿ ಸ್ಪರ್ಧೆ, ಎಲ್ಲ ರೈತರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ತೆರೆದ ಬಂಡಿ ಸ್ಪರ್ಧೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಇಂತಹ  ಸ್ಪರ್ಧೆ ಇನ್ನೂ ಹೆಚ್ಚು ಕಾಲ ಉಳಿಯಲಿ, ಬೆಳೆಯಲಿ ಎಂಬುದು ಎಲ್ಲರ ಆಶಯ.

7 / 21
ಬೆನಕಟ್ಟಿ ಗ್ರಾಮದಲ್ಲಿ ವೇಮನ ಜಯಂತಿ ಹಾಗೂ  ಜಾತ್ರಾ ಪ್ರಯುಕ್ತ ಈ ತೆರೆದ ಬಂಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಬಾಗಲಕೋಟೆ ಜಿಲ್ಲೆ ಮತ್ತು ಬೇರೆ ಜಿಲ್ಲೆಗಳಿಂದ ಎತ್ತುಗಳನ್ನು ಕರೆತರಲಾಗಿತ್ತು.

8 / 21
 ಎತ್ತುಗಳು ಓಡೋದಕ್ಕೆ ಶುರುಮಾಡಿದರೆ ರೈತರು ಕೇಕೆ ಹಾಕಿ ಶಿಳ್ಳೆ ಹೊಡೆದು ಹರ್ಷ ಪಟ್ಟರು. ಸತತವಾಗಿ ಹೊಲದಲ್ಲಿ ಕೆಲಸ ಮಾಡಿ ದಣಿದ ರೈತರು ಈ ಗ್ರಾಮೀಣ ಕ್ರೀಡೆ ನೋಡಿ ಮನಸಾರೆ ಖುಷಿಪಟ್ಟಿದ್ದು, ಇದು ನಮಗೆಲ್ಲ ಮನರಂಜನೆ ಅಂತಾರೆ.

9 / 21
ಇಡೀ ಬಂಡಿಯನ್ನು ಎರೆಮಣ್ಣಿನಲ್ಲಿ ಎಳೆದುಕೊಂಡು ಹೋಗುವ ಎತ್ತುಗಳ ಸಾಹಸ ನಿಜಕ್ಕೂ ಅಬ್ಬಾ ಎನ್ನುವಂತಿತ್ತು. ವರ್ಷವಿಡೀ ದುಡಿದ ರೈತರು ಈ ಸ್ಪರ್ಧೆಯನ್ನು ನೋಡಿ ಖುಷಿಪಟ್ಟರು.

10 / 21
ಎತ್ತುಗಳು ತೆರೆದಬಂಡಿ ಎಳೆಯೋದು ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಎಲ್ಲ ಕಡೆ ನಡೆಯುವಂತೆ ಇಲ್ಲಿಯೂ ಚಕ್ಕಡಿ ಬಂಡಿಯ ಗಾಲಿ ತಿರುಗುತ್ತಿರಲಿಲ್ಲ. ಚಕ್ಕಡಿ ಬಂಡಿ ಗಾಲಿಗೆ ಒಂದು ಮರದ ಕೊಂಬೆ ಅಡ್ಡಲಾಗಿ ಸೇರಿಸಲಾಗಿತ್ತು. ಇದರಿಂದ ಇಡೀ ಚಕ್ಕಡಿ ಬಂಡಿ ಮತ್ತು ಅದರ ಮೇಲೆ ಕೂತ ಇಬ್ಬರ ಭಾರವನ್ನೂ ಎಳೆಯುವ ಎತ್ತುಗಳ ಸಾಹಸ ಗಮನಸೆಳೆಯಿತು.

ಎತ್ತುಗಳು ತೆರೆದಬಂಡಿ ಎಳೆಯೋದು ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಎಲ್ಲ ಕಡೆ ನಡೆಯುವಂತೆ ಇಲ್ಲಿಯೂ ಚಕ್ಕಡಿ ಬಂಡಿಯ ಗಾಲಿ ತಿರುಗುತ್ತಿರಲಿಲ್ಲ. ಚಕ್ಕಡಿ ಬಂಡಿ ಗಾಲಿಗೆ ಒಂದು ಮರದ ಕೊಂಬೆ ಅಡ್ಡಲಾಗಿ ಸೇರಿಸಲಾಗಿತ್ತು. ಇದರಿಂದ ಇಡೀ ಚಕ್ಕಡಿ ಬಂಡಿ ಮತ್ತು ಅದರ ಮೇಲೆ ಕೂತ ಇಬ್ಬರ ಭಾರವನ್ನೂ ಎಳೆಯುವ ಎತ್ತುಗಳ ಸಾಹಸ ಗಮನಸೆಳೆಯಿತು.

11 / 21
ಮೊದಲ ಬಹುಮಾನ 30 ಸಾವಿರ, ದ್ವಿತೀಯ 25 ಸಾವಿರ, ತೃತಿಯ 20, ನಾಲ್ಕನೆಯ ಬಹುಮಾನ 15 ಸಾವಿರ, ಐದನೆಯ ಬಹುಮಾನವಾಗಿ 10 ಸಾವಿರ, ಆರನೇ ಬಹುಮಾನ 7 ಸಾವಿರ. ಏಳನೆಯ ಬಹುಮಾನ 5 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಎಲ್ಲ ರೈತರು ಈ ಎತ್ತುಗಳನ್ನು ನೋಡಿ ತಾವು ಕೂಡ ತಮ್ಮ ಎತ್ತುಗಳನ್ನು ಚೆನ್ನಾಗಿ ದಷ್ಟಪುಷ್ಟವಾಗಿ ಬೆಳೆಸಬೇಕು ಎಂದು ಲಕ್ಕಾಚಾರ ಹಾಕಿದ್ದು ಸುಳ್ಳಲ್ಲ.

12 / 21
ಹೌದು ಬೆನಕಟ್ಟಿ ಗ್ರಾಮದಲ್ಲಿ ನಡೆದ ತೆರೆದ ಬಂಡಿ ಓಡಿಸುವ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸ್ತು. ಮದಗಜಗಳಂತೆ ಕೊಬ್ಬಿದ ಎತ್ತುಗಳು ಒಂದಕ್ಕಿಂತ ಒಂದು ದಷ್ಟಪುಷ್ಟವಾಗಿದ್ದು ತೆರೆದ ಬಂಡಿಯನ್ನು ನಾ ಮುಂದೆ ತಾ ಮುಂದೆ ಎನ್ನುವ ರೀತಿ ಎಳೆದವು.

13 / 21
ಈ ಸ್ಪರ್ಧೆಯನ್ನು ನೋಡೋಕೆ ಅಂತಾನೆ ಸುತ್ತಮುತ್ತಲಿನ ಗ್ರಾಮದಿಂದ ಬಂದು ಸೇರಿದ ರೈತರ ದಂಡು, ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ  ಗ್ರಾಮದಲ್ಲಿ.

14 / 21
ಎತ್ತುಗಳು ಓಡೋದನ್ನು ನೋಡುತ್ತಾ ಕೇಕೆ ಹಾಕಿ ಸಂಭ್ರಮಿಸುತ್ತಿರುವ ರೈತರು.

15 / 21
ಆನೆಯಾಕಾರದ ಎತ್ತುಗಳನ್ನು ಹಿಡಿದು ಬಂಡಿಗೆ ಕಟ್ಟೋದಕ್ಕೆ ಹರಸಾಹಸ. ಕೊಸರಿಕೊಂಡು ಒಡೋಕೆ ಮುಂದಾದ ಎತ್ತುಗಳು.
ಮದಗಜಗಳಂತೆ ಮೈತುಂಬಿಕೊಂಡು ಚಕ್ಕಡಿಯನ್ನು ಎಳೆಯುತ್ತಾ ಓಡುತ್ತಿರುವ ಬಲಶಾಲಿಗಳು.

ಆನೆಯಾಕಾರದ ಎತ್ತುಗಳನ್ನು ಹಿಡಿದು ಬಂಡಿಗೆ ಕಟ್ಟೋದಕ್ಕೆ ಹರಸಾಹಸ. ಕೊಸರಿಕೊಂಡು ಒಡೋಕೆ ಮುಂದಾದ ಎತ್ತುಗಳು. ಮದಗಜಗಳಂತೆ ಮೈತುಂಬಿಕೊಂಡು ಚಕ್ಕಡಿಯನ್ನು ಎಳೆಯುತ್ತಾ ಓಡುತ್ತಿರುವ ಬಲಶಾಲಿಗಳು.

16 / 21
ಬಲಭೀಮರಂತಿದ್ದ ಭಲೆ ಬಸವರ ಕಂಡು ರೋಮಾಂಚನಗೊಂಡ ರೈತರು..

17 / 21
ಮದಗಜಗಳಂತಿದ್ದ ಎತ್ತುಗಳ ಶಕ್ತಿ ಸಾಮರ್ಥ್ಯ ಕಂಡು ನೋಡುಗರೆ ಸುಸ್ತು..

18 / 21
ಚಕ್ರಕ್ಕೆ ಕಂಬ ಸಿಲುಕಿಸಿದರೂ ಬಂಡಿ ಎಳೆದು ಪರಾಕ್ರಮ..

19 / 21
ಯಾಕೆಂದರೆ ಅವರು ಮಾಡಿದ ಸಾಹಸ ಎಲ್ಲರ ಹುಬ್ಬೇರುವಂತಿತ್ತು. ಅಷ್ಟಕ್ಕೂ ಆ ಶಕ್ತಿ ಪ್ರದರ್ಶಿಸುವ ಭಲೆ ಬಸವಂದಿರ ಕ್ರೀಡೆ ಹೇಗಿತ್ತು? ಅವರು ಮಾಡಿದ ಸಾಹಸ ಕಾರ್ಯ ಏನು? ಇಲ್ಲಿದೆ ನೋಡಿ ಡಿಟೇಲ್ಸ್. ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ

20 / 21
ಅಲ್ಲಿ ಭಲೆ ಬಸವಂದಿರು ಬಲ ಭೀಮಂದಿರು ಪರಾಕ್ರಮ ಮೆರೆದಿದ್ರು. ಅವರ ಶಕ್ತಿಸಾಮರ್ಥ್ಯ ಕಂಡು ನೋಡುಗರು ಅಬ್ಬಾ ಎನ್ನುತ್ತಿದ್ದರು. ಮದಗಜಗಳಂತಿದ್ದ ಅವರ ಕಸರತ್ತು ಕಂಡು ಕ್ಷಣಕಾಲ ನಿಬ್ಬೆರಗಾಗುತ್ತಿದ್ದರು. ಅವರ ಪವರ್ ಕಂಡು ಮುಕ್ತ ಕಂಠದಿಂದ ಭಲೆ ಭೇಷ್ ಎನ್ನುತ್ತಿದ್ದರು.

21 / 21
ಭಲೆ ಬಸವಂದಿರು, ಬಲ ಭೀಮಂದಿರ ಪರಾಕ್ರಮ ಹೇಗಿತ್ತು? ಚಿತ್ರಗಳಲ್ಲಿ ನೋಡಿ