Castor Leaves And Oil: ಕೈ-ಕಾಲು, ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಎಣ್ಣೆ ಉತ್ತಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2024 | 1:50 PM

ಹರಳೆಣ್ಣೆಯನ್ನು ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಹರಳೆಣ್ಣೆ ಮಾತ್ರವಲ್ಲ ಅದರ ಎಲೆಗಳು ಮತ್ತು ಕಾಯಿಗಳಲ್ಲಿಯೂ ಔಷಧೀಯ ಗುಣವಿದ್ದು ಅನೇಕ ಪ್ರಯೋಜನಗಳಿವೆ. ಇವುಗಳನ್ನು ಪ್ರಾಚೀನ ಕಾಲದಿಂದಲೂ ಬಳಸುತ್ತಿದ್ದು, ಅನೇಕ ರೀತಿಯ ರೋಗಗಳಿಗೆ ರಾಮಬಾಣವಾಗಿದೆ. ಜೊತೆಗೆ ಹರಳೆಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಕೂಡ ಹೇಳುತ್ತಾರೆ. ಹಾಗಾದರೆ ಇದರ ಉಪಯೋಗವೇನು? ಇಲ್ಲಿದೆ ಮಾಹಿತಿ.

1 / 6
ಹರಳೆಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಈ ಎಣ್ಣೆಯನ್ನು ಆಯುರ್ವೇದದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಗಾಯಗಳನ್ನು ಗುಣಪಡಿಸುವುದರಿಂದ ಹಿಡಿದು ಮಲಬದ್ಧತೆಯನ್ನು ನಿವಾರಿಸುವವರೆಗೆ ಇದರ ಔಷಧೀಯ ಗುಣಗಳು ಬಹಳ ಉಪಯೋಗಕಾರಿಯಾಗಿದೆ.

2 / 6
ಆದರೆ ನಿಮಗೆ ಹರಳೆಣ್ಣೆ ಮಾತ್ರವಲ್ಲ ಇದರ ಎಲೆಗಳು ಮತ್ತು ಕಾಯಿಗಳಲ್ಲಿಯೂ ಔಷಧೀಯ ಗುಣವಿದ್ದು ಅನೇಕ ರೀತಿಯ ರೋಗಗಳಿಗೆ ರಾಮಬಾಣವಾಗಿದೆ. ಕಾಲು, ಕೈ, ಮೊಣಕಾಲು, ಬೆನ್ನು, ಕುತ್ತಿಗೆ, ಭುಜದಲ್ಲಿ ನೋವಿದ್ದಲ್ಲಿ ಅದನ್ನು ತಕ್ಷಣ ನಿವಾರಣೆ ಮಾಡುತ್ತದೆ.

3 / 6
ಹರಳೆಣ್ಣೆ ಗಿಡದ ಒಂದು ಐದಾರು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸಣ್ಣಗೆ ಕತ್ತರಿಸಿ ಅದನ್ನು ನೋವಿನ ಎಣ್ಣೆಯಲ್ಲಿ ಹುರಿದು ನಂತರ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬಳಿಕ ಎಣ್ಣೆಯ ಜೊತೆಗೆ ಹುರಿದ ಹರಳಿನ ಎಲೆಯಿರುವ ಬಟ್ಟೆಯನ್ನು ನೋವಿರುವ ಕಡೆ ಇಡಬೇಕು.

4 / 6
ಹೊಟ್ಟೆಯಲ್ಲಿ ಕ್ರಿಮಿ ಆಗುತ್ತಿದ್ದರೆ ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ 10ml ನಷ್ಟು ಉಪಯೋಗಿಸಬೇಕು. ನಿಯಮಿತವಾಗಿ ಉಪಯೋಗಿಸುವುದರಿಂದ, ಹೊಟ್ಟೆ ಹುಳದ ಸಮಸ್ಯೆ, ಮೋಷನ್ ಗಟ್ಟಿಯಾಗುವುದು, ಪೈಲ್ಸ್ ಮುಂತಾದ ಸಮಸ್ಯೆಗಳಿಗೂ ಕೂಡಾ ಹರಳೆಣ್ಣೆಯು ಪರಿಣಾಮಕಾರಿಯಾಗಿದೆ.

5 / 6
ಇದೆಲ್ಲದರ ಜೊತೆಗೆ ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿಯೇ ಇದನ್ನು ಕ್ಲೆನ್ಸರ್ ಗಳು, ಲೋಷನ್ ಗಳು, ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

6 / 6
ಈ ಹರಳೆಣ್ಣೆಯು ಸಣ್ಣ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಯಾವುದೇ ಸಮಸ್ಯೆಯಿಲ್ಲದೆ ಉಪಯೋಗಿಸಬಹುದು. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಅಥವಾ ಇದನ್ನು ಬಳಸುವ ಮುನ್ನ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

Published On - 11:45 am, Thu, 4 July 24