ಸರ್ಕಾರಿ ಕೊಳವೆಯಲ್ಲಿ ಬರುವ ನೀರಿಗಿಂತ, ನಿಸರ್ಗ ಸಹಜ ಝರಿಯ ನೀರು ಶ್ರೇಷ್ಠ, ಆರೋಗ್ಯಕರ ಎನ್ನುತ್ತಿದ್ದಾರೆ ಗಡಿ ಗ್ರಾಮಸ್ಥರು!
TV9 Web | Updated By: ಸಾಧು ಶ್ರೀನಾಥ್
Updated on:
Dec 28, 2022 | 11:31 AM
chamarajanagar: ಇಲ್ಲಿನ ಜನರಿಗೆ ನಲ್ಲಿ ನೀರಿಗಿಂತ ಹೊಳೆಯಲ್ಲಿ ಹರಿಯುವ ನೀರು ಶ್ರೇಷ್ಠ. ಅದನ್ನೇ ನಂಬಿರುವ ಅವರು ಆರೋಗ್ಯವಾಗಿಯೂ ಇದಾರೆ. ನಗರಗಳಲ್ಲಿ ಫಿಲ್ಟರ್ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುವ ಜನರ ನಡುವೆ ಇಲ್ಲಿನ ಜನರ ಜೀವನಶೈಲಿ ಆಶ್ಚರ್ಯ ಹುಟ್ಟಿಸಿರುವುದು ಸುಳ್ಳಲ್ಲ.
1 / 8
ಗ್ರಾಮೀಣ ಭಾಗದ ಪ್ರತಿ ಮನೆಗೂ ಕುಡಿಯುವ ನೀರು ಕಲ್ಪಿಸಬೇಕೆಂದು ಸರ್ಕಾರ ಮನೆ ಮನೆಗೆ ಗಂಗೆ ಹರಿಸಲು ನಲ್ಲಿ ಕೊಳವೆ ಅಳವಡಿಸಿದೆ. ಇದ್ರಿಂದ ಜನರಿಗೆ ಸಾಕಷ್ಟು ಅನುಕೂಲವು ಸಹ ಆಗಿದೆ. ಆದ್ರೆ ಗಡಿ ಜಿಲ್ಲೆ ಚಾಮರಾಜನಗರದ (chamarajanagar) ಈ ಊರಿನ ಜನರಿಗೆ ನಲ್ಲಿ ನೀರಿನ ಅವಶ್ಯಕತೆಯೇ ಇಲ್ಲ. ಹಾಗಾದ್ರೆ ಅವರು ಕುಡಿಯುವ ನೀರಿಗಾಗಿ ಕಂಡುಕೊಂಡಿರುವ ಮಾರ್ಗ ಎಂತದ್ದು ಅಂತಿರಾ.
2 / 8
ಹಾಗಾದ್ರೆ ಈ ಸ್ಟೋರಿ ನೋಡಿ. ಸುತ್ತಲೂ ಹಸಿರು ಹೊದ್ದಿರುವ ಕಾಡು... ಸುಮಾರು 25 ಕಿಲೋ ಮೀಟರ್ ದೂರದ ಕಾಡಿನಿಂದ ಹರಿದು ಬರುತ್ತಿರುವ ಝರಿ ನೀರು (natural water resources). ಈ ದೃಶ್ಯ ಕಂಡುಬರುವುದು ಚಾಮರಾಜನಗರ ತಾಲೂಕಿನ ರಂಗಸಂದ್ರ (ಬೂದಿಪಡಗ) ಗ್ರಾಮದಲ್ಲಿ (border villagers).
3 / 8
ಲಂಬಾಣಿ, ಸೋಲಿಗ ಬುಡಕಟ್ಟು ಸಮುದಾಯದವರೇ ವಾಸಿಸುತ್ತಿರುವ ಈ ಗ್ರಾಮಕ್ಕೆ ಸಿಸಿ ರಸ್ತೆ, ಪ್ರತಿ ಮನೆಗೂ ನಲ್ಲಿ ವ್ಯವಸ್ಥೆಯನ್ನು (tap water) ಸರ್ಕಾರ ಮಾಡಿಕೊಟ್ಟಿದೆ.
4 / 8
ಆದ್ರೆ ಈ ನಲ್ಲಿ ನೀರು ಈ ಜನರಿಗೆ ಬೇಡವಾಗಿದೆ. ಕಾಡಿನಿಂದ ಝರಿ ರೂಪದಲ್ಲಿ ಹರಿದುಬರುವ ತಣ್ಣನೆಯ ನೀರನ್ನೆ ಬಳಸುತ್ತಾರೆ. ನಿತ್ಯ ಬೆಳಗ್ಗೆ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೊಗುವ ಅವರು ಅಡುಗೆ ಮತ್ತು ಕುಡಿಯಲು ಸಹ ಬಳಸ್ತಾರೆ. ನಲ್ಲಿ ನೀರನ್ನು ಪಾತ್ರೆ, ಬಟ್ಟೆ ತೊಳೆಯಲಷ್ಟೇ ಬಳಸ್ತಾರೆ.
5 / 8
ಇದಕ್ಕೆ ಕಾರಣಗಳು ಹತ್ತು ಹಲವಾರು. ಕಾಡಿನಿಂದ ಬರುವ ನೀರಿನಲ್ಲಿ ಗಿಡಮೂಲಿಕೆಗಳ ಮಿಶ್ರಣವಿದೆ. ಅದನ್ನ ಸೇವಿಸಿದರೆ ಯಾವುದೇ ರೋಗ ಬರುವುದಿಲ್ಲ. ಹೀಗಾಗಿ ನಲ್ಲಿ ನೀರಿಗಿಂತ ಝರಿಯ ನೀರೆ ಶ್ರೇಷ್ಠ ಎನ್ನುತ್ತಾರೆ ಸ್ಥಳೀಯರು.
6 / 8
ಇನ್ನು ತಾತ ಮುತ್ತಾತರ ಕಾಲದಿಂದಲೂ ಹೊಳೆ ನೀರನ್ನೇ ಸೇವಿಸುತ್ತಿದ್ದು ನಲ್ಲಿ ನೀರು ಆರೋಗ್ಯಕ್ಕೆ ಒಗ್ಗುವುದಿಲ್ಲ. ವರ್ಷದ 12 ತಿಂಗಳು ಹೊಳೆ ಹರಿಯುತ್ತೆ. ಬೇಸಿಗೆ ಸಂದರ್ಭದಲ್ಲಿ ಹಳ್ಳ ತೆಗೆದು ನೀರು ತಗೋತಿವಿ.
7 / 8
ನಮಗೆ ಪ್ರಕೃತಿ ಮಡಿಲಲ್ಲಿ ಹರಿದು ಬರುವ ನೀರು ಶ್ರೇಷ್ಠ. ಅರಣ್ಯ ಇಲಾಖೆ ಅಧಿಕಾರಿಗಳು ಸಹ ಪರೀಕ್ಷೆಗಾಗಿ ನೀರನ್ನು ತೆಗೆದುಕೊಂಡು ಹೋಗಿದ್ರು. ಈ ನೀರಲ್ಲಿ ಯಾವುದೇ ಕಲ್ಮಶವಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ..
8 / 8
ಒಟ್ಟಾರೆ, ಇಲ್ಲಿನ ಜನರಿಗೆ ನಲ್ಲಿ ನೀರಿಗಿಂತ ಹೊಳೆಯಲ್ಲಿ ಹರಿಯುವ ನೀರು ಶ್ರೇಷ್ಠ. ಅದನ್ನೇ ನಂಬಿರುವ ಅವರು ಆರೋಗ್ಯವಾಗಿಯೂ ಇದಾರೆ. ನಗರಗಳಲ್ಲಿ ಫಿಲ್ಟರ್ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುವ ಜನರ ನಡುವೆ ಇಲ್ಲಿನ ಜನರ ಜೀವನಶೈಲಿ ಆಶ್ಚರ್ಯ ಹುಟ್ಟಿಸಿರುವುದು ಸುಳ್ಳಲ್ಲ. ವರದಿ: ದಿಲೀಪ್ ಚೌಡಹಳ್ಳಿ, ಟಿ ವಿ 9, ಚಾಮರಾಜನಗರ