Chia Seeds: ಬೀಜ ಚಿಕ್ಕದಾದರೂ ಪ್ರಯೋಜನ ಅದ್ಭುತ; ನಿಮ್ಮ ಡಯೆಟ್ನಲ್ಲಿರಲಿ ಚಿಯಾ ಸೀಡ್ಸ್
ಚಿಯಾ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಮೆಗ್ನೀಸಿಯಮ್ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಚಿಯಾ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಚಿಯಾ ಸೀಡ್ ಅನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.
1 / 15
ಕೆಲವರು ದೇಹದ ಕೊಬ್ಬು ಕರಗಿಸಲು ಸಾವಿರಾರು ರೂ. ಕೊಟ್ಟು ಜಿಮ್, ಡಯೆಟ್ ಕೋರ್ಸ್ ಎಂದೆಲ್ಲ ಮಾಡುತ್ತಾರೆ. ಆದರೆ, ನಮ್ಮ ಮನೆಯಲ್ಲೇ ಇರುವ ಕೆಲವು ಆಹಾರ ಪದಾರ್ಥಗಳಿಂದ ದೇಹದ ಕೊಬ್ಬು ಕರಗಿಸಬಹುದು.
2 / 15
ಚಿಯಾ ಸೀಡ್ಸ್ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಎಳ್ಳು ಕಾಳಿನಂತೆ ಕಪ್ಪಗೆ, ಸಣ್ಣಗಿರುವ ಈ ಚಿಯಾ ಬೀಜಗಳು ನಮ್ಮ ದೇಹಕ್ಕೆ ಅದ್ಭುತ ಕೊಡುಗೆ ನೀಡಬಲ್ಲವು.
3 / 15
ಇದರಲ್ಲಿರುವ ಫೈಬರ್, ಪ್ರೋಟೀನ್ ಅಂಶಗಳು ತೂಕ ಇಳಿಸಲು ಸಹಾಯ ಮಾಡುತ್ತವೆ. ಚಿಯಾ ಬೀಜಗಳಲ್ಲಿ ಎಲ್ಲಾ ಪೋಷಕಾಂಶಗಳೂ ಸಮೃದ್ಧವಾಗಿದೆ.
4 / 15
ಚಿಯಾ ಬೀಜಗಳನ್ನು ಸ್ಮೂಥಿಯಾಗಿ, ಕೆಲವು ಹಣ್ಣಿನ ಜ್ಯೂಸ್‌ಗಳಲ್ಲಿ, ಏನೂ ಬೇಡವೆಂದರೆ ನೀರಿಗೆ ಹಾಕಿಕೊಂಡು ಕೂಡ ಸೇವಿಸಬಹುದು. ಸುಮಾರು ಎರಡು ಚಮಚ ಚಿಯಾ ಬೀಜಗಳಲ್ಲಿ 9.7 ಗ್ರಾಂ ಫೈಬರ್ ಮತ್ತು 4.6 ಗ್ರಾಂ ಪ್ರೋಟೀನ್ ಇರುತ್ತದೆ.
5 / 15
ಡಯಟ್ ಮಾಡುತ್ತಿರುವವರು ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ಮೊಸರಿನ ಜೊತೆ ಚಿಯಾ ಸೀಡ್ಸ್ ಹಾಕಿಕೊಂಡು ಸೇವಿಸಬಹುದು.
6 / 15
ಪೌಷ್ಟಿಕಾಂಶದ ಶಕ್ತಿ ಕೇಂದ್ರವಾದ ಚಿಯಾ ಬೀಜಗಳನ್ನು ಈಗ ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಮಧುಮೇಹ ಮತ್ತು ಬೊಜ್ಜು ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ರೋಗನಿರೋಧಕ ಕ್ರಮವಾಗಿ ಕಂಡುಹಿಡಿಯಲಾಗುತ್ತಿದೆ.
7 / 15
ಚಿಯಾ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಚಿಯಾ ಸೀಡ್ ಅನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.
8 / 15
ಚಿಯಾ ಸೀಡ್ಸ್ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಚಿಯಾ ಬೀಜಗಳು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಸಹ ಒಳಗೊಂಡಿರುತ್ತವೆ. ಇದು ಮೂಳೆ ಸಾಂದ್ರತೆಯನ್ನು ಸುಧಾರಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
9 / 15
ಚಿಯಾ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಮೆಗ್ನೀಸಿಯಮ್ ಮಧುಮೇಹದ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
10 / 15
ಒಂದು ಬಾಟಲ್ ನೀರಿಗೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಬೇಕು. 1 ಗಂಟೆಯ ಬಳಿಕ ಇದನ್ನು ಸೇವಿಸಬೇಕು. ಇದಕ್ಕೆ ಲಿಂಬೆ ರಸವನ್ನು ಕೂಡ ಸೇರಿಸಬಹುದು.
11 / 15
ಚಿಯಾ ಬೀಜಗಳು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಬೀಜಗಳಲ್ಲಿರುವ ಕರಗುವ ಮತ್ತು ಕರಗದ ನಾರುಗಳು ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಬಲ್ಲದು. ಮೂತ್ರಪಿಂಡದ ಕಲ್ಲುಗಳು ಮತ್ತು ಚಯಾಪಚಯ ಕ್ರಿಯೆಯ ಅಸ್ವಸ್ಥತೆಗಳನ್ನು ನಿರ್ವಹಿಸುವಲ್ಲಿ ಇದರ ಪಾತ್ರ ಮುಖ್ಯವಾದುದು.
12 / 15
ಸಲಾಡ್‌ಗಳು ಮತ್ತು ಸ್ಮೂಥಿಗಳ ಮೇಲೆ ಚಿಯಾ ಬೀಜಗಳನ್ನು ಹಾಕುವುದರಿಂದ ರುಚಿಕರವಾದ ಆಹಾರಗಳು ಇನ್ನಷ್ಟು ಆರೋಗ್ಯಕರವಾಗುತ್ತದೆ.
13 / 15
ಇದರಲ್ಲಿರುವ ಹೆಚ್ಚಿನ ಫೈಬರ್ ತೂಕ ಕಳೆದುಕೊಳ್ಳಲು ಪ್ರಯತ್ನ ಮಾಡುತ್ತಿರುವವರಿಗೆ ಬೆಸ್ಟ್ ಎಂದೇ ಹೇಳಬಹುದು. ಚಿಯಾ ಬೀಜಗಳು ಥಯಾಮಿನ್ ಮತ್ತು ರೈಬೋಫ್ಲಾವಿನ್‌ನಂತಹ ಬಿ ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ. ಆದ್ದರಿಂದ, ಅವುಗಳ ಸೇವನೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
14 / 15
ಚಿಯಾ ಬೀಜಗಳು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಸ್ವತಂತ್ರ ರಾಡಿಕಲ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಮತ್ತು ವಯಸ್ಸಾದ, ಆಲ್ಝೈಮರ್, ಪಾರ್ಕಿನ್ಸನ್ ಕಾಯಿಲೆ ಮತ್ತು ಉರಿಯೂತಗಳಿಗೆ ಕಾರಣವಾಗುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಅವೆಲ್ಲ ಸಮಸ್ಯೆಗಳಿಂದ ಕೊಂಚ ಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದು.
15 / 15
ತೂಕ ಇಳಿಕೆಯ ಜೊತೆಗೆ ಖಿನ್ನತೆ, ಉರಿಯೂತ, ಅಲರ್ಜಿ ಸಮಸ್ಯೆ, ಹೃದ್ರೋಗದ ಅಪಾಯವನ್ನು ಚಿಯಾ ಸೀಡ್ಸ್ ಕಡಿಮೆ ಮಾಡುತ್ತವೆ. ಚಿಯಾ ಸೀಡ್ಸ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.