CWG 2022: ಒಂದೇ ದಿನ ನಾಲ್ಕು ಪದಕ: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಭರ್ಜರಿ ಪ್ರದರ್ಶನ

| Updated By: Vinay Bhat

Updated on: Jul 31, 2022 | 8:30 AM

Commonwealth Games: ಬರ್ಮಿಂಗ್ ​​ಹ್ಯಾಮ್​ ನಲ್ಲಿ ನಡೆಯುತ್ತಿರುವ ಕಾಮನ್​ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಎರಡನೇ ದಿನ ಒಟ್ಟು ನಾಲ್ಕು ಪದಕವನ್ನು ಬಾಜಿಕೊಂಡಿದ್ದು, ಇದರಲ್ಲಿ ಒಂದು ಚೆನ್ನ ಕೂಡ ದಕ್ಕಿದೆ.

1 / 8
ಬರ್ಮಿಂಗ್ ​​ಹ್ಯಾಮ್​ ನಲ್ಲಿ ನಡೆಯುತ್ತಿರುವ ಕಾಮನ್​ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಎರಡನೇ ದಿನ ಒಟ್ಟು ನಾಲ್ಕು ಪದಕವನ್ನು ಬಾಜಿಕೊಂಡಿದ್ದು, ಇದರಲ್ಲಿ ಒಂದು ಚೆನ್ನ ಕೂಡ ದಕ್ಕಿದೆ.

2 / 8
ಮೀರಾಬಾಯಿ ಚಾನು ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ ​ನಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಸ್ನ್ಯಾಚ್‌ ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ ನಲ್ಲಿ 113 ಕೆಜಿ ಎತ್ತುವ ಮೂಲಕ ಪ್ರಶಸ್ತಿ ಗೆದ್ದು ದಾಖಲೆ ಕೂಡ ಮಾಡಿದರು.

3 / 8
ಸಂಕೇತ್ ಮಹಾದೇವ್ ಸಾಗರ್ ಕೂಡ ಪುರುಷರ ವೇಟ್‌ ಲಿಫ್ಟಿಂಗ್‌ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಮಹಾರಾಷ್ಟ್ರ ಮೂಲದ ವೇಟ್‌ ಲಿಫ್ಟರ್‌ ಬರೋಬ್ಬರಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

4 / 8
ಕರ್ನಾಟಕದ ವೇಟ್‌ ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಮಿಂಚಿದ್ದಾರೆ. ಇವರು ಈ ಬಾರಿಯ ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಎರಡನೇ ಕ್ರೀಡಾಪಟು. ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಪದಕಕ್ಕೆ ಕೊರಳೊಡ್ಡಿದ್ದಾರೆ.

5 / 8
55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 114 ಕೆಜಿಯ ತನ್ನ ಎರಡನೇ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ ಬಿಂದ್ಯಾರಾಣಿ ವಿಫಲವಾದಾಗ ಕಂಚಿನ ಪದಕದ ನಿರೀಕ್ಷೆಯಿತ್ತು. ಆದರೆ, ಅಂತಿಮ ಲಿಫ್ಟ್​ ನಲ್ಲಿ 116 ಕೆಜಿಯೊಂದಿಗೆ ಎರಡನೇ ಸ್ಥಾನಕ್ಕೇರಿದರು. ಈ ಮೂಲಕ ಬೆಳ್ಳಿ (Silver) ಪದಕವನ್ನು ಬಾಜಿಕೊಂಡರು.

6 / 8
ಸ್ವಿಮ್ಮರ್‌ ಶ್ರೀಹರಿ ನಟರಾಜನ್‌ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು 54:55 ಸೆಕೆಂಡ್ಸ್‌ ನಲ್ಲಿ ಗುರಿ ಮುಟ್ಟಿದರು. 21 ವರ್ಷದ ಶ್ರೀಹರಿ ನಟರಾಜನ್‌ ಹೀಟ್‌ನಲ್ಲಿ 4ನೇ, ಒಟ್ಟಾರೆಯಾಗಿ 7ನೇ ಸ್ಥಾನಿಯಾದರು.

7 / 8
ಅತೀ ಕಿರಿಯ ಕ್ರೀಡಾಪಟು 14 ವರ್ಷದ ಅನಾಹತ್‌ ಸಿಂಗ್‌ ಸ್ಕ್ವಾಷ್‌ ನಲ್ಲಿ ಶುಭಾರಂಭ ಮಾಡಿದ್ದಾ ರೆ. ತಡರಾತ್ರಿ ಆಡಲಾದ ವನಿತಾ ಸಿಂಗಲ್ಸ್‌ “ಎ’ ವಿಭಾಗದ 64ರ ಸುತ್ತಿನ ಪಂದ್ಯದಲ್ಲಿ ಅವರು ಸೇಂಟ್‌ ವಿನ್ಸೆಂಟ್‌ ಆಯಂಡ್‌ ಗ್ರೆನಡಾದ ಜಡಾ ರೋಸ್‌ ವಿರುದ್ಧ 11-5, 11-2, 11-0 ಅಂತರದ ಅಮೋಘ ಗೆಲುವು ಸಾಧಿಸಿದರು.

8 / 8
ಭಾರತದ ಸ್ಟಾರ್‌ ಸ್ಕ್ವಾಷ್‌ ಆಟಗಾರರಾದ ಜೋಶ್ನಾ ಚಿನ್ನಪ್ಪ ಮತ್ತು ಸೌರವ್‌ ಘೋಷಾಲ್‌ ಸುಲಭ ಜಯದೊಂದಿಗೆ ಪ್ರಿ-ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇಬ್ಬರೂ 3-0 ಗೆಲುವು ಸಾಧಿಸಿದರು. 18 ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಜೋಶ್ನಾ ಚಿನ್ನಪ್ಪ ಬಾರ್ಬಡಾಸ್‌ನ ಮೀಗನ್‌ ಬೆಸ್ಟ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ 11-8, 11-9, 12-10ರಿಂದ ಗೆದ್ದು ಬಂದರು.

Published On - 8:30 am, Sun, 31 July 22