ICC Trophies: 15 ತಿಂಗಳಲ್ಲಿ 3 ಐಸಿಸಿ ಟೂರ್ನಿ: ಈ ಸಲ ಕಪ್ ಯಾರದ್ದು?
TV9 Web | Updated By: ಝಾಹಿರ್ ಯೂಸುಫ್
Updated on:
Mar 02, 2024 | 11:31 AM
ICC Trophies: 2013 ರ ಬಳಿಕ ಐಸಿಸಿ ಟ್ರೋಫಿ ಗೆಲ್ಲದ ಭಾರತದ ಮುಂದೆ 3 ಟೂರ್ನಿಗಳಿವೆ. ಈ ಮೂರು ಟೂರ್ನಿಗಳು ಕೇವಲ 15 ತಿಂಗಳುಗಳ ನಡುವೆ ನಡೆಯಲಿದ್ದು, ಈ ಮೂಲಕ 10 ವರ್ಷ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಹೀಗಾಗಿ ಈ ಬಾರಿ ಭಾರತ ತಂಡ ಯಾವ ಕಪ್ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.
1 / 5
ಐಪಿಎಲ್ (IPL 2024) ಆರಂಭಕ್ಕೆ ಕಾತುರದಿಂದ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಮುಂದಿನ 15 ತಿಂಗಳಲ್ಲಿ ಮನರಂಜನೆಯ ರಸದೌತಣವೇ ಸಿಗಲಿದೆ. ಏಕೆಂದರೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಿನ ಹದಿನೈದು ತಿಂಗಳಲ್ಲಿ ಮೂರು ಟೂರ್ನಿಗಳನ್ನು ಆಯೋಜಿಸುತ್ತಿದೆ.
2 / 5
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಯುಎಸ್ಎ-ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯು ಜೂನ್ 1 ರಿಂದ ಜೂನ್ 29 ರವರೆಗೆ ನಡೆಯಲಿದೆ. ಅಂದರೆ ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಜರುಗಲಿದೆ.
3 / 5
ಇನ್ನು 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಈ ಟೂರ್ನಿಯು ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿದೆ. ಅಂದರೆ ಮುಂದಿನ ವರ್ಷರಾಂಭದಲ್ಲೇ 10 ತಂಡಗಳ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ.
4 / 5
ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು ಜೂನ್ 2025 ರಲ್ಲಿ ನಡೆಯಲಿದೆ. ಈ ಪಂದ್ಯವು ಇಂಗ್ಲೆಂಡ್ನಲ್ಲಿ ಜರುಗಲಿದೆ. ಈ ಮೂರು ಐಸಿಸಿ ಟೂರ್ನಿಗಳು ಕೇವಲ 15 ತಿಂಗಳಲ್ಲೇ ನಡೆಯಲಿರುವುದು ವಿಶೇಷ.
5 / 5
ಇತ್ತ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು 10 ವರ್ಷಗಳೇ ಕಳೆದಿವೆ. ಅಂದರೆ 2013 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟೂರ್ನಿ ಗೆದ್ದಿಲ್ಲ. ಹೀಗಾಗಿ ಮುಂದಿನ 15 ತಿಂಗಳಲ್ಲಿ ಭಾರತ ತಂಡ ಯಾವ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬುದೇ ಈಗ ಕುತೂಹಲ.
Published On - 11:09 am, Sat, 2 March 24