BBL 2021: ಬಿಗ್ ಬ್ಯಾಷ್ ಲೀಗ್​ನಲ್ಲಿ ದಾಖಲೆ ಬರೆದ ಘಾತಕ ವೇಗಿ

| Updated By: ಝಾಹಿರ್ ಯೂಸುಫ್

Updated on: Dec 21, 2021 | 6:06 PM

Sean Abbott: 2014 ರ ಕಹಿ ಘಟನೆಯ ಬಳಿಕ ಸೀನ್ ಅಬಾಟ್ ಅವರನ್ನು ಘಾತಕ ವೇಗಿ ಎಂದೇ ಗುರುತಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯಲ್ಲಿ ನಡೆದ ಪಂದ್ಯದ ವೇಳೆ ಅಬಾಟ್ ಎಸೆದ ಚೆಂಡು ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು.

1 / 5
ಸೀನ್ ಅಬಾಟ್....ಈ ಹೆಸರು ಕೇಳಿದೊಡನೆ ಎಲ್ಲರಿಗೂ 2014ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕಹಿ ಘಟನೆಯೊಂದು ಕಣ್ಮುಂದೆ ಬರುತ್ತೆ. ಹೌದು, ಸೀನ್ ಅಬಾಟ್ ಬೌನ್ಸರ್ ಎಸೆತದಿಂದಾಗಿ ಆಸೀನ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಪ್ರಾಣ ಬಿಡುವಂತಾಗಿತ್ತು. ಈ ಕಹಿ ಘಟನೆಯ ಬಳಿಕ ಅಬಾಟ್ ಕೆಲ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು.

2 / 5
ಆ ಬಳಿಕ ಕಂಬ್ಯಾಕ್ ಮಾಡಿದ ಸೀನ್ ಅಬಾಟ್ ಇದೀಗ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬಿಬಿಎಲ್​​ನಲ್ಲಿ ಸಿಡ್ನಿ ಸಿಕ್ಸರ್ ಪರ ಆಡುತ್ತಿರುವ ಅಬಾಟ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ 4 ಓವರ್‌ಗಳಲ್ಲಿ 24 ರನ್‌ಗಳಿಗೆ 3 ವಿಕೆಟ್ ಉರುಳಿಸಿ ಮಿಂಚಿದರು.

3 / 5
ಇದರೊಂದಿಗೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಸೀನ್ ಅಬಾಟ್ ತಮ್ಮದಾಗಿಸಿಕೊಂಡರು. ಅಬಾಟ್ ಇದುವರೆಗೆ 112 ವಿಕೆಟ್‌ಗಳನ್ನು ಪಡೆದು ಬಿಬಿಎಲ್​ನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

4 / 5
ಇದಕ್ಕೂ ಮುನ್ನ ಈ ದಾಖಲೆ ಬೆನ್​ ಲಾಫ್ಲಿನ್ ಹೆಸರಿನಲ್ಲಿತ್ತು. ಲಾಫ್ಲಿನ್ 96 ಪಂದ್ಯಗಳಲ್ಲಿ 111 ವಿಕೆಟ್ ಪಡೆದಿದ್ದರು. ಇದೀಗ ಕೇವಲ 83 ಪಂದ್ಯಗಳನ್ನು ಆಡಿರುವ ಸೀನ್ ಅಬಾಟ್ 112 ವಿಕೆಟ್ ಉರುಳಿಸಿ ಬಿಗ್ ಬ್ಯಾಷ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ   ಸಿಡ್ನಿ ಸಿಕ್ಸರ್ಸ್ ಪರ 100 ವಿಕೆಟ್ ಪೂರೈಸಿದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

5 / 5
ಅಂದಹಾಗೆ 2014 ರ ಕಹಿ ಘಟನೆಯ ಬಳಿಕ ಸೀನ್ ಅಬಾಟ್ ಅವರನ್ನು ಘಾತಕ ವೇಗಿ ಎಂದೇ ಗುರುತಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯಲ್ಲಿ ನಡೆದ ಪಂದ್ಯದ ವೇಳೆ ಅಬಾಟ್ ಎಸೆದ ಚೆಂಡು ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ತಕ್ಷಣವೇ ಕುಸಿದು ಬಿದ್ದಿದ್ದ ಹ್ಯೂಸ್ ಕೋಮಾಕ್ಕೆ ಜಾರಿದ್ದರು. ಇದಾಗಿ 2 ದಿನಗಳ ನಂತರ ಆಸ್ಪತ್ರೆಯಲ್ಲಿ ಫಿಲಿಪ್ ಹ್ಯೂಸ್ ನಿಧನರಾಗಿದ್ದರು. ಆ ಕಹಿ ಘಟನೆಯ ಬಳಿಕ ಕ್ರಿಕೆಟ್​ ಅಂಗಳದಿಂದ ದೂರ ಉಳಿದಿದ್ದ ಸೀನ್ ಅಬಾಟ್ ಆ ಬಳಿಕ ಫಿಲಿಪ್ ಹ್ಯೂಸ್ ಅವರ ಕುಟುಂಬಸ್ಥರ ಕ್ಷಮೆಯಾಚಿಸಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಹಿಂತಿರುಗಿದ್ದರು.