ಏಷ್ಯಾಕಪ್ನಲ್ಲಿಂದು ಲಂಕಾ-ಅಫ್ಘಾನ್ ಮುಖಾಮುಖಿ: ಸೂಪರ್-4 ನತ್ತ ಶನಕಾ ಪಡೆ
Afghanistan vs Sri Lanka, Asia Cup 2023: ಇಂದು ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಹಶ್ಮತುಲ್ಲ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ಮತ್ತು ದಸುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡ ಮುಖಾಮುಖಿ ಆಗುತ್ತಿದೆ. ಲಂಕಾ ಬಹುತೇಕ ಸೂಪರ್-4 ಹಂತಕ್ಕೆ ಪ್ರವೇಶಿಸಿದೆ. ಆದರೆ, ಲಂಕಾ ವಿರುದ್ಧ ಅಫ್ಘಾನ್ ಇಂದಿನ ಪಂದ್ಯವನ್ನು ದೊಡ್ಡ ಮೊತ್ತದ ಅಂತರದಲ್ಲಿ ಗೆದ್ದರಷ್ಟೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಸಾಧ್ಯ.
1 / 8
ಏಷ್ಯಾಕಪ್ 2023 ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಈಗಾಗಲೇ ಗ್ರೂಪ್ ಎ ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಸೂಪರ್-4 ಹಂತಕ್ಕೆ ತೇರ್ಗಡೆ ಆಗಿದೆ. ಗ್ರೂಪ್ ಬಿ ಯಿಂದ ಯಾವ ತಂಡಗಳು ಎಂಬುದು ಇಂದು ನಿರ್ಧಾರವಾಗಲಿದೆ. ಗ್ರೂಪ್ ಬಿಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳಿದೆ.
2 / 8
ಇಂದು ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಹಶ್ಮತುಲ್ಲ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ಮತ್ತು ದಸುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡ ಮುಖಾಮುಖಿ ಆಗುತ್ತಿದೆ. ಲಂಕಾ ಬಹುತೇಕ ಸೂಪರ್-4 ಹಂತಕ್ಕೆ ಪ್ರವೇಶಿಸಿದೆ. ಆದರೆ, ಲಂಕಾ ವಿರುದ್ಧ ಅಫ್ಘಾನ್ ಇಂದಿನ ಪಂದ್ಯವನ್ನು ದೊಡ್ಡ ಮೊತ್ತದ ಅಂತರದಲ್ಲಿ ಗೆದ್ದರಷ್ಟೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಸಾಧ್ಯ.
3 / 8
ಶ್ರೀಲಂಕಾ ತಂಡ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಓಪನರ್ಗಳು ಕೈಕೊಟ್ಟರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ಗಳು ಕೈಹಿಡಿಯುತ್ತಿದ್ದಾರೆ. ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಮಥೀಶಾ ಪಥಿರನಾ ಮಾರಕವಾಗಿದ್ದು, ತೀಕ್ಷಣ, ರಜಿತಾ, ದುನಿತ್ ಕೂಡ ಪರಿಣಾಮಕಾರಿಯಾಗಿ ಗೋಚರಿಸಿದ್ದಾರೆ.
4 / 8
ಇತ್ತ ಅಫ್ಘಾನ್ ತಂಡ ಕೂಡ ದುರ್ಬಲ ಎಂದು ಹೇಳಲು ಸಾಧ್ಯವಿಲ್ಲ. ಇಬ್ರಾಹಿಂ ಝದ್ರಾನ್, ನಾಯಕ ಹಶ್ಮತುಲ್ಲಾ ಶಾಹಿದಿ, ರೆಹಮತ್ ಷಾ, ರಶೀದ್ ಖಾನ್ ಬ್ಯಾಟಿಂಗ್ನಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ, ರಶೀದ್ ಬೌಲಿಂಗ್ ಚೆನ್ನಾಗಿ ಕೆಲಸ ಮಾಡುತ್ತಿಲ್ಲ. ಮಜೀಬ್, ಫಾರುಖ್, ನಬಿ ಕೂಡ ಬೌಲಿಂಗ್ನಲ್ಲಿ ಮಿಂಚಬೇಕಿದೆ.
5 / 8
ಅಫ್ಘಾನ್-ಲಂಕಾ ಪಂದ್ಯ ನಡೆಯಲಿರುವ ಲಾಹೋರ್ ಪಿಚ್ ವೇಗದ ಬೌಲರ್‌ಗಳಿಗೆ ಬೌನ್ಸ್ ಅನ್ನು ನೀಡುವುದಿಲ್ಲ. ಇಲ್ಲಿ ಪರಿಣಾಮಕಾರಿಯಾಗಲು, ಬೌಲರ್‌ಗಳು ತಮ್ಮ ಎಸೆತಗಳಲ್ಲಿ ಬದಲಾವಣೆ ಮಾಡಬೇಕಿದೆ. ಸ್ಥಿರವಾದ ಲೈನ್ ಮತ್ತು ಲೆಂಗ್ತ್ ಅನ್ನು ಹಾಕಬೇಕು. ಪಿಚ್ ನಿಧಾನವಾಗಿದ್ದು, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಮಾರಕವಾಗಬಹುದು. ಲಾಹೋರ್‌ನಲ್ಲಿ, ಆಫ್-ಸ್ಪಿನ್ನರ್‌ಗಳಿಗೆ ಹೋಲಿಸಿದರೆ ಲೆಗ್-ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ.
6 / 8
ಅಫ್ಘಾನಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ಎಚ್‌ಡಿ). ಇದಲ್ಲದೆ, ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನ ಮೊಬೈಲ್‌ನಲ್ಲಿಯೂ ಉಚಿತವಾಗಿ ವೀಕ್ಷಿಸಬಹುದು.
7 / 8
ಅಫ್ಘಾನಿಸ್ತಾನ ತಂಡ: ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್-ಕೀಪರ್), ಇಬ್ರಾಹಿಂ ಝದ್ರಾನ್, ರೆಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ಸಿ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರುಖ್, ರಿಕ್ರಾಮ್ ಅಲ್ಸ್ಸಿನ್, ರಿಕ್ರಾಮ್ ಅಲ್ಸ್ಸಿನ್ ರೆಹಮಾನ್, ಶರಫುದ್ದೀನ್ ಅಶ್ರಫ್, ನೂರ್ ಅಹ್ಮದ್, ಸುಲಿಮಾನ್ ಸಫಿ.
8 / 8
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್(ವಿಕೆಟ್-ಕೀಪರ್), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ(ಸಿ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಕಸುನ್ ರಜಿತಾ, ಮಥೀಶಾ ಪಥಿರನಾ, ಕುಸಲ್ ಪೆರೆರಾ, ಪ್ರಮೋದ್ ಮದುಶನ್, ದುಶನ್ ಹೇಮಂತ.