Virat Kohli: ಕ್ಯಾಚ್ ಹಿಡಿದು ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli Records: ಕಿಂಗ್ ಕೊಹ್ಲಿ 277 ಏಕದಿನ ಪಂದ್ಯಗಳಿಂದ ಒಟ್ಟು 143 ಕ್ಯಾಚ್​ಗಳನ್ನು ಹಿಡಿದು ಈ ಸಾಧನೆ ಮಾಡಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ಗಳನ್ನು ಹಿಡಿದ ವಿಶ್ವದ ನಾಲ್ಕನೇ ಫೀಲ್ಡರ್ ಎನಿಸಿಕೊಂಡಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Sep 04, 2023 | 8:31 PM

ಏಷ್ಯಾಕಪ್​ನ 5ನೇ ಪಂದ್ಯದಲ್ಲಿ ಒಂದು ಕ್ಯಾಚ್ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ 3 ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.

1 / 10
ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಆಸಿಫ್ ಶೇಖ್ ಅವರ ಕ್ಯಾಚ್ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ಮಲ್ಟಿ ನೇಷನ್ ಟೂರ್ನಿಗಳಲ್ಲಿ 100 ಕ್ಯಾಚ್​ಗಳನ್ನು ಹಿಡಿದ 2ನೇ ಭಾರತೀಯ ಎನಿಸಿಕೊಂಡರು.

2 / 10
ಅಲ್ಲದೆ ಬಹು ರಾಷ್ಟ್ರಗಳು ಪಾಲ್ಗೊಳ್ಳುವ ಟೂರ್ನಿಯಲ್ಲಿ ​ಅತ್ಯಧಿಕ ಕ್ಯಾಚ್​ ಹಿಡಿದಿದ್ದ ಭಾರತ ತಂಡ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಅವರ ದಾಖಲೆಯನ್ನು ಸರಿಗಟ್ಟಿದರು.

3 / 10
ಅಝರ್ ಬಹು ರಾಷ್ಟ್ರಗಳ ಟೂರ್ನಿಯಲ್ಲಿ 100 ಕ್ಯಾಚ್​ಗಳನ್ನು ಹಿಡಿದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ನೂರು ಕ್ಯಾಚ್​ಗಳನ್ನು ಹಿಡಿಯುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

4 / 10
ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ಗಳನ್ನು ಹಿಡಿದ 2ನೇ ಭಾರತೀಯ ಎಂಬ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲೂ ಅಝರುದ್ದೀನ್ ಅಗ್ರಸ್ಥಾನದಲ್ಲಿದ್ದಾರೆ.

5 / 10
ಮೊಹಮ್ಮದ್ ಅಝರುದ್ದೀನ್ 334 ಏಕದಿನ ಪಂದ್ಯಗಳಲ್ಲಿ ಒಟ್ಟು 156 ಕ್ಯಾಚ್​ಗಳನ್ನು ಹಿಡಿದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನಕ್ಕೇರಿರುವುದು ವಿಶೇಷ.

6 / 10
ಕಿಂಗ್ ಕೊಹ್ಲಿ 277 ಏಕದಿನ ಪಂದ್ಯಗಳಿಂದ ಒಟ್ಟು 143 ಕ್ಯಾಚ್​ಗಳನ್ನು ಹಿಡಿದು ಈ ಸಾಧನೆ ಮಾಡಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ಗಳನ್ನು ಹಿಡಿದ ವಿಶ್ವದ ನಾಲ್ಕನೇ ಫೀಲ್ಡರ್ ಎನಿಸಿಕೊಂಡಿದ್ದಾರೆ.

7 / 10
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಶ್ರೀಲಂಕಾದ ಮಹೇಲ ಜಯವರ್ಧನೆ. ಜಯವರ್ಧನೆ 218 ಕ್ಯಾಚ್​ಗಳನ್ನು ಹಿಡಿದು ಅಗ್ರಸ್ಥಾನದಲ್ಲಿದ್ದರೆ, 160 ಕ್ಯಾಚ್ ಹಿಡಿದಿರುವ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ ಭಾರತದ ಅಝರುದ್ದೀನ್ 156 ಕ್ಯಾಚ್​ಗಳೊಂದಿಗೆ 3ನೇ ಸ್ಥಾನ ಅಲಂಕರಿಸಿದರೆ, 143 ಕ್ಯಾಚ್ ಹಿಡಿದಿರುವ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೇರಿದ್ದಾರೆ.

8 / 10
ಇದೀಗ ಕೇವಲ 277 ಏಕದಿನ ಪಂದ್ಯಗಳ ಮೂಲಕ ಒಟ್ಟು 143 ಕ್ಯಾಚ್ ಹಿಡಿದಿರುವ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಫೀಲ್ಡಿಂಗ್​ನಲ್ಲೂ ಹೊಸ ದಾಖಲೆ ನಿರ್ಮಿಸುವತ್ತ ದಾಪುಗಾಲಿಟ್ಟಿದ್ದಾರೆ.

9 / 10
ಅಂದರೆ ಮುಂಬರುವ ಪಂದ್ಯಗಳಲ್ಲಿ 14 ಕ್ಯಾಚ್​ಗಳನ್ನು ಹಿಡಿದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​​ನಲ್ಲಿ ಅತ್ಯಧಿಕ ಕ್ಯಾಚ್​ಗಳನ್ನು ಹಿಡಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಸದ್ಯ ಏಷ್ಯಾಕಪ್ ಆಡುತ್ತಿರುವ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್​ ಮೂಲಕ ಈ ಸಾಧನೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

10 / 10

Published On - 8:29 pm, Mon, 4 September 23

Follow us