ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದವರಲ್ಲಿ ಬಾಲಿವುಡ್ ನಿರ್ಮಾಪಕ ಪುತ್ರ
ಅಗ್ನಿ ಚೋಪ್ರಾ ಬಾಲಿವುಡ್ನ ಪ್ರಸಿದ್ಧ ನಿರ್ಮಾಪಕ/ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಪುತ್ರ. ಮುನ್ನಾಭಾಯ್ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯ್, ಪಿಕೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಅದರಲ್ಲೂ ಕಳೆದ ವರ್ಷದ ಬ್ಲಾಕ್ ಬಸ್ಟರ್ ಬಾಲಿವುಡ್ ಚಿತ್ರ 12th ಫೇಲ್ ಚಿತ್ರವನ್ನು ನಿರ್ದೇಶಿಸಿದ್ದು ವಿಧು ವಿನೋದ್ ಚೋಪ್ರಾ.
1 / 6
2024 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಅಗ್ನಿ ಚೋಪ್ರಾ. ಚೋಪ್ರಾ ಹೆಸರು ಕೇಳುತ್ತಿದ್ದಂತೆ ಈ ಹೆಸರಿಗೂ ಬಾಲಿವುಡ್ಗೂ ನಂಟಿದೆಯಾ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ... ಹೌದು, ಅಗ್ನಿ ಚೋಪ್ರಾ ಬಾಲಿವುಡ್ನ ಖ್ಯಾತ ನಿರ್ಮಾಪಕ/ನಿರ್ದೇಶಕರಾದ ವಿನು ವಿನೋಧ್ ಚೋಪ್ರಾ ಅವರ ಸುಪುತ್ರ.
2 / 6
ಮುನ್ನಾಭಾಯ್ ಎಂಬಿಬಿಎಸ್, 3 ಇಂಡಿಯನ್ಸ್ನಂತಹ ಸೂಪರ್ ಚಿತ್ರಗಳ ನಿರ್ಮಾಪಕರೇ ವಿನು ವಿನೋಧ್ ಚೋಪ್ರಾ. ಅಲ್ಲದೆ ಬ್ಲಾಕ್ ಬ್ಲಾಸ್ಟರ್ ಹಿಟ್ 12ನೇ ಫೇಲ್ ಚಿತ್ರವನ್ನು ಅವರು ನಿರ್ದೇಶಿಸಿದ್ದಾರೆ. ಆದರೆ ತಂದೆಯ ಹಾದಿಯನ್ನು ತುಳಿಯದೇ ಅಗ್ನಿ ಚೋಪ್ರಾ ಕ್ರಿಕೆಟ್ ಅಂಗಳದಲ್ಲಿ ಸಾಧನೆ ಮಾಡಲು ಹೊರಟ್ಟಿದ್ದಾರೆ.
3 / 6
ಅದರ ಮೊದಲ ಹೆಜ್ಜೆಯಾಗಿ ಇದೀಗ 2024 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಹಾಗೂ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಟಾಪ್-2 ನಲ್ಲಿರುವ ಆಟಗಾರರೆಂದರೆ....
4 / 6
ಜೋ ರೂಟ್: 2024 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 22 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ನ ಜೋ ರೂಟ್ 39 ಇನಿಂಗ್ಸ್ಗಳ ಮೂಲಕ 1998 ರನ್ ಕಲೆಹಾಕಿದ್ದಾರೆ. ಈ ವೇಳೆ 8 ಶತಕ ಮತ್ತು 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ 2024 ರಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕೆಲಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
5 / 6
ಡೇವಿಡ್ ಗೈ ಬೆಡಿಂಗ್ಹ್ಯಾಮ್: ಸೌತ್ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಗೈ ಬೆಡಿಂಗ್ಹ್ಯಾಮ್ ಕಳೆದ ವರ್ಷ 22 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಈ ವೇಳೆ 38 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದೇ ವೇಳೆ 7 ಶತಕ ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 1918 ರನ್ ಕಲೆಹಾಕಿದ್ದಾರೆ.
6 / 6
ಅಗ್ನಿ ಚೋಪ್ರಾ: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕಳೆದ ವರ್ಷ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಅಗ್ನಿ ಚೋಪ್ರಾ. ಮಿಝೋರಂ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯುತ್ತಿರುವ ಅಗ್ನಿ 20 ಇನಿಂಗ್ಸ್ಗಳಿಂದ 1804 ರನ್ ಕಲೆಹಾಕಿದ್ದಾರೆ. ಈ ವೇಳೆ ಅಗ್ನಿ ಚೋಪ್ರಾ 9 ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ 2024 ರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.