ರಣಜಿಯಲ್ಲಿ ಮುಂದುವರೆದ ರಹಾನೆ ಶೂನ್ಯ ಸಾಧನೆ; ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಡೌಟ್..!
Ajinkya Rahane: ಹೀಗಾಗಿ ಅಜಿಂಕ್ಯ ರಹಾನೆ ಕೂಡ ಟೀಂ ಇಂಡಿಯಾಕ್ಕೆ ಮರಳುವ ಗುರಿಯೊಂದಿಗೆ ರಣಜಿ ಟ್ರೋಫಿಯಲ್ಲಿ ಅಡುತ್ತಿದ್ದಾರೆ. ಆದರೆ ರಹಾನೆ ಅವರ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ರಣಜಿ ಟ್ರೋಫಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯಲು ರಹಾನೆಗೆ ಸಾಧ್ಯವಾಗಲಿಲ್ಲ.
1 / 7
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ಅಜಿಂಕ್ಯ ರಹಾನೆ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಹೀಗಾಗಿ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿರುವ ರಹಾನೆ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದಾರೆ.
2 / 7
ಆದರೆ ಅಲ್ಲಿಯೂ ಅವರ ಬ್ಯಾಟ್ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದೆ. ಆಡಿರುವ ಪಂದ್ಯಗಳಲ್ಲಿ ಪ್ರಸ್ತುತ ಸತತ ಎರಡು ಬಾರಿ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್‌ಗೆ ವಿಕೆಟ್ ಒಪ್ಪಿಸಿರುವ ರಹಾನೆ ಭಾರತ ತಂಡಕ್ಕೆ ಮರಳುವ ಸಾಧ್ಯತೆ ತೀರ ದಟ್ಟವಾಗಿದೆ.
3 / 7
ಎರಡು ಟೆಸ್ಟ್‌ಗಳ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ರಹಾನೆ ಆಯ್ಕೆಯಾಗಿಲ್ಲ. ಒಂದು ಸಮಯದಲ್ಲಿ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿದ್ದ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧದ
4 / 7
ಸದ್ಯ ಆಯ್ಕೆ ಮಂಡಳಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದ್ದು, ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಉಳಿದ ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ನೀಡಬಹುದು ಎಂದು ಊಹಿಸಲಾಗುತ್ತಿದೆ.
5 / 7
ಹೀಗಾಗಿ ಅಜಿಂಕ್ಯ ರಹಾನೆ ಕೂಡ ಟೀಂ ಇಂಡಿಯಾಕ್ಕೆ ಮರಳುವ ಗುರಿಯೊಂದಿಗೆ ರಣಜಿ ಟ್ರೋಫಿಯಲ್ಲಿ ಅಡುತ್ತಿದ್ದಾರೆ. ಆದರೆ ರಹಾನೆ ಅವರ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ರಣಜಿ ಟ್ರೋಫಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯಲು ರಹಾನೆಗೆ ಸಾಧ್ಯವಾಗಲಿಲ್ಲ.
6 / 7
ಮುಂಬೈ ಮತ್ತು ಕೇರಳ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿದೆ. ಮುಂಬೈನ ಆರಂಭಿಕ ಬ್ಯಾಟ್ಸ್‌ಮನ್ ಜೈ ಗೋಕುಲ್ ಬಿಸ್ತಾ ಮೊದಲ ಎಸೆತದಲ್ಲಿ ಡಕ್‌ಗೆ ಔಟಾದ ಕಾರಣ ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಬೇಗನೆ ಕ್ರೀಸ್‌ಗೆ ಬರಬೇಕಾಯಿತು.
7 / 7
ಆದರೆ ಅಜಿಂಕ್ಯ ರಹಾನೆ ಕೂಡ ಖಾತೆ ತೆರೆಯದೆ ಮೊದಲ ಎಸೆತದಲ್ಲಿಯೇ ಔಟಾಗಿ ಗೋಲ್ಡನ್ ಡಕ್‌ಗೆ ಬಲಿಯಾದರು. ಈ ಹಿಂದೆ ಮುಂಬೈ ಹಾಗೂ ಆಂಧ್ರದ ನಡುವಿನ ಪಂದ್ಯ ನಡೆದಾಗೂ ರಹಾನೆ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅಂದರೆ ಈ ವರ್ಷದ ರಣಜಿ ಟ್ರೋಫಿಯಲ್ಲಿ ಖಾತೆ ತೆರೆಯ ಇಂತಹ ಪರಿಸ್ಥಿತಿಯಲ್ಲಿಲು ಹರಸಾಹಸ ಪಡುತ್ತಿರುವ ರಹಾನೆ ಮತ್ತೆ ಟೀಂ ಇಂಡಿಯಾಕ್ಕೆ ಮರಳುವ ನಿರೀಕ್ಷೆ ಇನ್ನಷ್ಟು ಕಳೆಗುಂದುತ್ತಿದೆ.