ಭಾರತದ ಮಾಜಿ ಮಹಿಳಾ ಕ್ರಿಕೆಟರ್ ಸೇರಿದಂತೆ ಮೂವರು ದಿಗ್ಗಜರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
ICC Hall of Fame: ಐಸಿಸಿಯ ಆಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಮೂವರು ಮಾಜಿ ಕ್ರಿಕೆಟಿಗರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್‌ನ ಅಲೆಸ್ಟರ್ ಕುಕ್ ಹಾಗೂ ಭಾರತದ ವನಿತಾ ತಂಡದ ಅನುಭವಿ ಆಟಗಾರ್ತಿ ನೀತು ಡೇವಿಡ್ ಸೇರಿದ್ದಾರೆ.
1 / 8
ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ನಡುವೆ ಐಸಿಸಿ ಮಹತ್ವದ ಘೋಷಣೆ ಮಾಡಿದ್ದು, ವಿಶ್ವ ಕ್ರಿಕೆಟ್ನ ಮೂವರು ಮಾಜಿ ಕ್ರಿಕೆಟಿಗರನ್ನು ಐಸಿಸಿ ತನ್ನ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳಿಸಿದೆ. ಈ ಗೌರವಕ್ಕೆ ಪಾತ್ರರಾದ ಮೂವರು ಲೆಜೆಂಡರಿ ಕ್ರಿಕೆಟಿಗರ ಪೈಕಿ ಭಾರತ ವನಿತಾ ತಂಡದ ಮಾಜಿ ಮಹಿಳೆ ಕ್ರಿಕೆಟರ್ ಕೂಡ ಸೇರಿದ್ದಾರೆ.
2 / 8
ಐಸಿಸಿಯ ಈ ಗೌರವಕ್ಕೆ ಪಾತ್ರರಾದ ಮೂವರು ಮಾಜಿ ಕ್ರಿಕೆಟಿಗರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್‌ನ ಅಲೆಸ್ಟರ್ ಕುಕ್ ಹಾಗೂ ಭಾರತದ ವನಿತಾ ತಂಡದ ಅನುಭವಿ ಆಟಗಾರ್ತಿ ನೀತು ಡೇವಿಡ್ ಸೇರಿದ್ದಾರೆ.
3 / 8
2009 ರಿಂದ ಆರಂಭವಾದ ಈ ಐಸಿಸಿ ಗೌರವಕ್ಕೆ ಭಾಜನರಾದವರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಆಲಿಸ್ಟರ್ ಕುಕ್ 113ನೇ, ನೀತು ಡೇವಿಡ್ 114ನೇ ಹಾಗೂ ಡಿವಿಲಿಯರ್ಸ್ 115ನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನ ಅಂತಿಮ ಹಂತದಲ್ಲಿ ಈ ಮೂವರಿಗೆ ಗೌರವ ಸೂಚಕವಾಗಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗುತ್ತದೆ.
4 / 8
ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ನೀತು ಡೇವಿಡ್ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರ್ಪಡೆಗೊಂಡ ಭಾರತದ ಎರಡನೇ ಮಹಿಳಾ ಆಟಗಾರ್ತಿಯಾಗಿದ್ದಾರೆ. ಟೀಂ ಇಂಡಿಯಾದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದ ನೀತು ಅವರು ತಂಡದ ಪರ 97 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 141 ಏಕದಿನ ವಿಕೆಟ್ ಹಾಗೂ 41 ಟೆಸ್ಟ್ ವಿಕೆಟ್ಗಳನ್ನು ಪಡೆದಿದ್ದಾರೆ.
5 / 8
ಅಷ್ಟೇ ಅಲ್ಲ, ಏಕದಿನದಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1995 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಮಾಡಿದ್ದ ನೀತು, 2008 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅಂದರೆ ನೀತು ಅವರ ವೃತ್ತಿಜೀವನ 13 ವರ್ಷಗಳ ಕಾಲ ನಡೆಯಿತು.
6 / 8
ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದಲೇ ವಿಶ್ವ ಕ್ರಿಕೆಟ್ನ ಮನ ಗೆದ್ದಿದ್ದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಮೈದಾನದ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದರು. ಅದಕ್ಕಾಗಿಯೇ ಅವರನ್ನು ಮಿ. 360 ಎಂದೂ ಕರೆಯಕಲಾಗುತ್ತಿತ್ತುರ. ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಪರಿಗಣಿಸಿ, ಐಸಿಸಿ ಅವರನ್ನು ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರಿಸಿದೆ.
7 / 8
ಸುಮಾರು 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಡಿವಿಲಿಯರ್ಸ್ ಎಲ್ಲಾ ಮೂರು ಮಾದರಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 114 ಟೆಸ್ಟ್‌ಗಳಲ್ಲಿ 50 ಸರಾಸರಿಯಲ್ಲಿ 8765 ರನ್ ಬಾರಿಸಿರುವ ಎಬಿಡಿ, 228 ಏಕದಿನದಲ್ಲಿ 53 ರ ಸರಾಸರಿಯಲ್ಲಿ 9577 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 26 ರ ಸರಾಸರಿಯಲ್ಲಿ 1672 ರನ್ ಗಳಿಸಿದ್ದಾರೆ.
8 / 8
ಐಸಿಸಿ ಈ ವರ್ಷದ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಅಲೆಸ್ಟರ್ ಕುಕ್ ಅವರನ್ನು ಕೂಡ ಸೇರಿಸಿದೆ. ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಕುಕ್ ತಮ್ಮ 12 ವರ್ಷಗಳ ವೃತ್ತಿಜೀವನದಲ್ಲಿ, 161 ಟೆಸ್ಟ್ ಪಂದ್ಯಗಳಲ್ಲಿ 45 ರ ಸರಾಸರಿಯಲ್ಲಿ 12472 ರನ್, 92 ಏಕದಿನ ಪಂದ್ಯಗಳಲ್ಲಿ 3204 ರನ್ ಹಾಗೂ 4 ಟಿ20 ಪಂದ್ಯಗಳಲ್ಲಿ 15ರ ಸರಾಸರಿಯಲ್ಲಿ 61 ರನ್ ಗಳಿಸಿದ್ದಾರೆ.
Published On - 4:36 pm, Wed, 16 October 24