Ambati Rayudu: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ಮುಗ್ಗರಿಸಿದ ಅಂಬಟಿ ರಾಯುಡು

|

Updated on: Aug 27, 2023 | 9:27 AM

Ambati Rayudu: ಈ ಪಂದ್ಯದಲ್ಲಿ ರಾಯುಡು ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲು ರಾಯುಡುಗೆ ಸಾಧ್ಯವಾಗಲಿಲ್ಲ. ತಂಡದ ಇನ್ನಿಂಗ್ಸ್ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಬಂದ ರಾಯುಡು, ಇನ್ನಿಂಗ್ಸ್ ನಿಭಾಯಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಗುಡ್ಕೇಶ್ ಮೋತಿ ಅವರ ಸ್ಪಿನ್‌ಗೆ ಸಿಲುಕಿ, 24 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಔಟಾದರು.

1 / 7
ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಅಂಬಟಿ ರಾಯುಡು ತಮ್ಮ ಕಳಪೆ ಪ್ರದರ್ಶನವನ್ನು ಈ ಲೀಗ್​ನಲ್ಲೂ ಮುಂದುವರೆಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಚೆನ್ನೈ ಪರ ಆಡಿದ್ದ ರಾಯುಡು ಲೀಗ್​ನ ಕೊನೆಯ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದರು.

2 / 7
ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿದ ಐಪಿಎಲ್​ಗೂ ವಿದಾಯ ಹೇಳಿದ್ದ ರಾಯುಡು ರಾಜಕೀಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ನಡುವೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ರಾಯುಡುಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ.

3 / 7
ಸಿಪಿಎಲ್‌ನಲ್ಲಿ ರಾಯುಡು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಆಡುತ್ತಿದ್ದಾರೆ. ಆದರೆ ಅವರ ಬ್ಯಾಟ್ ಇನ್ನೂ ಮಿಂಚಿಲ್ಲ. ಅವರು ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು ಇದರಲ್ಲಿ ಕೇವಲ 32 ರನ್ ಗಳಿಸಿದ್ದಾರೆ.

4 / 7
ಸೇಂಟ್ ಕಿಟ್ಸ್ ಮತ್ತು ಅಮೆಜಾನ್ ವಾರಿಯರ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆಜಾನ್ ವಾರಿಯರ್ಸ್ ಏಳು ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೇಂಟ್ ಕಿಟ್ಸ್ ತಂಡ 16.5 ಓವರ್​ಗಳಲ್ಲಿ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು.

5 / 7
ಈ ಪಂದ್ಯದಲ್ಲಿ ರಾಯುಡು ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲು ರಾಯುಡುಗೆ ಸಾಧ್ಯವಾಗಲಿಲ್ಲ. ತಂಡದ ಇನ್ನಿಂಗ್ಸ್ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಬಂದ ರಾಯುಡು, ಇನ್ನಿಂಗ್ಸ್ ನಿಭಾಯಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅವರು ಗುಡ್ಕೇಶ್ ಮೋತಿ ಅವರ ಸ್ಪಿನ್‌ಗೆ ಸಿಲುಕಿ, 24 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಔಟಾದರು.

6 / 7
ಇದಕ್ಕೂ ಮುನ್ನ ಸೇಂಟ್ ಕಿಟ್ಸ್ ತಂಡ, ಜಮೈಕಾ ತಲ್ಲವಾಸ್ ತಂಡವನ್ನು ಎದುರಿಸಿದಾಗ ಆ ಪಂದ್ಯದಲ್ಲೂ ರಾಯುಡು ವಿಫಲರಾಗಿದ್ದರು. ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ತಂಡ ಮೊದಲು ಬ್ಯಾಟ್ ಮಾಡಿತು. ಈ ಪಂದ್ಯದಲ್ಲಿ ರಾಯುಡು ಸಂಪೂರ್ಣ ವಿಫಲರಾಗಿ ಖಾತೆ ತೆರೆಯದೆ ಔಟಾಗಿದ್ದರು.

7 / 7
ಇದಕ್ಕೂ ಮುನ್ನ ಅವರು ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದರು. ಆದರೆ ಈ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅದೇನೆಂದರೆ, ರಾಯುಡು ಇದುವರೆಗೆ ಸಿಪಿಎಲ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ .