Ashes 2023: ಉಭಯ ತಂಡಗಳಿಗೂ ತಲಾ 2 ಅಂಕ ಕಡಿತಗೊಳಿಸಿದ ಐಸಿಸಿ..! ಆಟಗಾರರಿಗೂ ಭಾರಿ ದಂಡ

|

Updated on: Jun 21, 2023 | 2:13 PM

Ashes 2023: ಉಭಯ ತಂಡಗಳ ನಡುವಿನ ಮೊದಲ ಆಶಸ್ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಎರಡೂ ತಂಡಗಳಗೂ ಐಸಿಸಿ, ತಲಾ ಎರಡು ಅಂಕಗಳನ್ನು ಕಡಿತಗೊಳಿಸಿದೆ.

1 / 7
ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಆಶಸ್ ಟೆಸ್ಟ್‌ನಲ್ಲಿ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಭಾಝ್ ಬಾಲ್ ಕ್ರಿಕೆಟ್​ಗೆ ಹೆಚ್ಚಿನ ಒತ್ತು ನೀಡಿದ ಇಂಗ್ಲೆಂಡ್ ತಾನು ಮಾಡಿದ ತಪ್ಪಿನಿಂದಾಗಿ ಸೋಲಿನ ಆಘಾತಕ್ಕೊಳಗಾಗಿದೆ. ಆದರೆ ಈ ನಡುವೆ ಈ 2 ತಂಡಗಳಿಗೂ ಐಸಿಸಿ ದಂಡದ ಬರೆ ಎಳೆದಿದೆ.

2 / 7
ಉಭಯ ತಂಡಗಳ ನಡುವಿನ ಮೊದಲ ಆಶಸ್ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಎರಡೂ ತಂಡಗಳಗೂ ಐಸಿಸಿ, ತಲಾ ಎರಡು ಅಂಕಗಳನ್ನು ಕಡಿತಗೊಳಿಸಿದೆ. ಇದು ಸಾಲದೆಂಬಂತೆ ಎರಡೂ ಕಡೆಯ ಆಟಗಾರರು ತಮ್ಮ ಪಂದ್ಯದ ಶುಲ್ಕದ ಶೇಕಡಾ 40 ರಷ್ಟು ದಂಡವನ್ನಾಗಿ ಪಾವತಿಸಲು ಆದೇಶಿಸಿದೆ.

3 / 7
ನಿಧಾನಗತಿಯ ಓವರ್‌ರೇಟ್ ನಿಯಮದಡಿಯಲ್ಲಿ ಉಭಯ ತಂಡಗಳು ನಿಗದಿತ ಸಮಯಕ್ಕಿಂತ ಎರಡು ಓವರ್ ಹಿಂದೆ ಇದ್ದವು ಎಂದು ತೀರ್ಪು ನೀಡಿದ ನಂತರ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ದಂಡ ವಿಧಿಸಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

4 / 7
ಐಸಿಸಿ ನಿಯಮದ ಪ್ರಕಾರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಗೆಲುವು ಸಾಧಿಸಿದ ತಂಡಕ್ಕೆ 12 ಅಂಕಗಳನ್ನು ನೀಡಲಾಗುತ್ತದೆ. ಅಂದರೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಆಸ್ಟ್ರೇಲಿಯಾಕ್ಕೆ 12 ಅಂಕಗಳು ಲಭಿಸಿವೆ. ಆದರೆ ಐಸಿಸಿ ವಿಧಿಸಿರುವ ದಂಡದ ಪ್ರಕಾರ ಇದೀಗ ಆಸ್ಟ್ರೇಲಿಯಾ 2 ಅಂಕಗಳನ್ನು ಕಳೆದುಕೊಳ್ಳಲಿದೆ.  ಹೀಗಾಗಿ ಈ ಪಂದ್ಯದಲ್ಲಿ ಆಸೀಸ್​ಗೆ ಕೇವಲ 10 ಅಂಕಗಳು ಮಾತ್ರ ಲಭಿಸಿವೆ.

5 / 7
ಹಾಗೆಯೇ ಇಂಗ್ಲೆಂಡ್ ಕೂಡ 2 ಅಂಕಗಳನ್ನು ಕಳೆದುಕೊಂಡಿದೆ. ಆದರೆ ಈ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡಿರುವ ಇಂಗ್ಲೆಂಡ್ ಆ ಪಂದ್ಯದಲ್ಲೂ ಸೋಲನುಭವಿಸಿದೆ. ಹೀಗಾಗಿ ಇಂಗ್ಲೆಂಡ್ ಬಳಿ ಯಾವುದೇ ಅಂಕಗಳಲ್ಲಿ. ಆದ್ದರಿಂದ ಐಸಿಸಿ ವಿಧಿಸಿರುವ ದಂಡದ ಪ್ರಕಾರ ಇಂಗ್ಲೆಂಡ್ ಈಗ -2 ಅಂಕವನ್ನು ಹೊಂದಿದೆ. ಇದರರ್ಥ ಇಂಗ್ಲೆಂಡ್ ಮುಂದೆ ಗೆಲುವ ಟೆಸ್ಟ್ ಪಂದ್ಯದಲ್ಲಿ 2 ಅಂಕಗಳನ್ನುಕಡಿತಗೊಳಿಸಲಾಗುತ್ತದೆ.

6 / 7
ಇಂಗ್ಲೆಂಡ್ ಆಟಗಾರರು ಟೆಸ್ಟ್ ಆಡಲು 15 ಲಕ್ಷ ರೂಪಾಯಿಗಳನ್ನು ಪಂದ್ಯ ಶುಲ್ಕವನ್ನಾಗಿ ಪಡೆಯುತ್ತಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ತಂಡದ ಆಟಗಾರರು ಒಂದು ಟೆಸ್ಟ್‌ಗೆ 16 ಲಕ್ಷ ರೂ. ಪಡೆಯುತ್ತಾರೆ. ಈಗ ಶೇ.40 ದಂಡದ ಪ್ರಕಾರ ಇಂಗ್ಲೆಂಡ್‌ಗೆ 6 ಲಕ್ಷ ರೂ., ಆಸ್ಟ್ರೇಲಿಯಾದ ಆಟಗಾರರಿಗೆ 6 ಲಕ್ಷದ 40 ಸಾವಿರ ಕಡಿತವಾಗಲಿದೆ.

7 / 7
ಇಂಗ್ಲೆಂಡ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಸ್ಲೋ ಓವರ್ ರೇಟ್‌ಗೆ ಬಲಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಭಾರತ ವಿರುದ್ಧ ಆಡಿದ್ದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಇದೇ ಕಾರಣಕ್ಕೆ ದಂಡ ವಿಧಿಸಲಾಗಿದ್ದು, ಪಂದ್ಯ ಶುಲ್ಕದಲ್ಲಿ ಶೇ.80ರಷ್ಟು ಕಡಿತಗೊಳಿಸಲಾಗಿತ್ತು.

Published On - 2:12 pm, Wed, 21 June 23