Ashes 2023: ಲಾರ್ಡ್ಸ್​ನಲ್ಲಿ ವಿಶ್ವ ದಾಖಲೆ ನಿರ್ಮಾಣ; ಕ್ರಿಕೆಟ್ ದಿಗ್ಗಜರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್..!

|

Updated on: Jun 29, 2023 | 9:41 AM

Steve Smith: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 31 ರನ್ ಬಾರಿಸಿದ ಕೂಡಲೇ, ಸ್ಮಿತ್ ಟೆಸ್ಟ್‌ನಲ್ಲಿ ಒಂಬತ್ತು ಸಾವಿರ ರನ್‌ಗಳನ್ನು ಪೂರೈಸಿದರು.

1 / 7
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 31 ರನ್ ಬಾರಿಸಿದ ಕೂಡಲೇ, ಸ್ಮಿತ್ ಟೆಸ್ಟ್‌ನಲ್ಲಿ ಒಂಬತ್ತು ಸಾವಿರ ರನ್‌ಗಳನ್ನು ಪೂರೈಸಿದರು.

2 / 7
ತಮ್ಮ ವೃತ್ತಿ ಜೀವನದ 99 ನೇ ಟೆಸ್ಟ್ ಪಂದ್ಯದಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ ಸ್ಟೀವ್ ಸ್ಮಿತ್, ಅತಿ ಕಡಿಮೆ ಟೆಸ್ಟ್‌ಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 101 ಟೆಸ್ಟ್ ಪಂದ್ಯಗಳಲ್ಲಿ 9 ಸಾವಿರ ರನ್ ಪೂರೈಸಿದ್ದ ವೆಸ್ಟ್ ಇಂಡೀಸ್​ನ ಶ್ರೇಷ್ಠ ಬ್ಯಾಟ್ಸ್​ಮನ್ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿತ್ತು.

3 / 7
ಇದೀಗ 34 ವರ್ಷದ ಸ್ಟೀವ್ ಸ್ಮಿತ್ ತಮ್ಮ 99ನೇ ಟೆಸ್ಟ್​ನ 174ನೇ ಇನ್ನಿಂಗ್ಸ್​ನಲ್ಲಿ ಒಂಬತ್ತು ಸಾವಿರ ರನ್ ಪೂರೈಸುವುದರೊಂದಿಗೆ ಶ್ರೀಲಂಕಾದ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ, ಭಾರತದ ಲೆಜೆಂಡರಿ ಜೋಡಿಗಳಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.

4 / 7
ಟೆಸ್ಟ್​ನಲ್ಲಿ 9000 ರನ್ ಪೂರೈಸಲು ಕುಮಾರ ಸಂಗಕ್ಕಾರ 172 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

5 / 7
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 111 ಪಂದ್ಯಗಳಲ್ಲಿ 9 ಸಾವಿರ ಟೆಸ್ಟ್ ರನ್ ಪೂರೈಸಿದ್ದರು.

6 / 7
ಹಾಗೆಯೇ ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 104 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು.

7 / 7
ಇವರೊಂದಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 177 ಇನ್ನಿಂಗ್ಸ್‌ಗಳಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ್ದರು. ಇದೀಗ 99 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತು ಸಾವಿರ ರನ್ ಬಾರಿಸುವುದರೊಂದಿಗೆ ಸ್ಟೀವ್ ಸ್ಮಿತ್ ಈ ದಿಗ್ಗಜರನ್ನು ಹಿಂದಿಕ್ಕಿದ್ದಾರೆ.

Published On - 9:39 am, Thu, 29 June 23