IND vs AUS: ಚಾನ್ಸ್ ಸಿಕ್ಕಿಲ್ಲವೆಂದು ಅರ್ಧದಲ್ಲೇ ತವರಿಗೆ ಮರಳಿದ ಆಸ್ಟ್ರೇಲಿಯಾ ಆಟಗಾರ..!

| Updated By: ಝಾಹಿರ್ ಯೂಸುಫ್

Updated on: Feb 22, 2023 | 9:43 PM

Indiua vs Australia Test: ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಈಗಾಗಲೇ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜೋಶ್ ಹ್ಯಾಝಲ್​ವುಡ್ ಹೊರಗುಳಿದಿದ್ದಾರೆ.

1 / 7
ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಏಕಮುಖದತ್ತ ಸಾಗುತ್ತಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಪ್ರಮುಖ ಆಲ್​ರೌಂಡರ್ ಆಟಗಾರ ಕೈಕೊಟ್ಟಿದ್ದಾರೆ.

2 / 7
ಹೌದು, ಮೊದಲ ಎರಡು ಪಂದ್ಯಗಳ ವೇಳೆ ತಂಡದಲ್ಲಿ ಪ್ರಮುಖ ಸ್ಪಿನ್ ಆಲ್​ರೌಂಡರ್​ ಅಷ್ಟನ್ ಅಗರ್ ಆಸ್ಟ್ರೇಲಿಯಾಗೆ ಮರಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗದಿರುವುದು ಎಂಬ ವಿಷಯ ಇದೀಗ ಬಹಿರಂಗವಾಗಿದೆ.

3 / 7
ಭಾರತ ಪ್ರವಾಸಕ್ಕೂ ಮುನ್ನ ಸಿಡ್ನಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಥನ್ ಲಿಯಾನ್ ಜೊತೆ 2ನೇ ಸ್ಪಿನ್ನರ್ ಆಗಿ ಅಷ್ಟನ್ ಅಗರ್ ಕಣಕ್ಕಿಳಿದಿದ್ದರು. ಅಲ್ಲದೆ ಉತ್ತಮ ಪ್ರದರ್ಶನವನ್ನೂ ಸಹ ನೀಡಿದ್ದರು. ಆದರೆ ನಾಗ್ಪುರ ಟೆಸ್ಟ್​ನಲ್ಲಿ ಅಗರ್ ಅವರನ್ನು ಹೊರಗಿಟ್ಟು, ಟಾಡ್ ಮರ್ಫಿಗೆ ಚಾನ್ಸ್​ ನೀಡಲಾಯಿತು.

4 / 7
ಇನ್ನು ದೆಹಲಿ ಟೆಸ್ಟ್ ಪಂದ್ಯದಿಂದಲೂ ಅಗರ್ ಅವರನ್ನು ಕೈ ಬಿಡಲಾಯಿತು. ಬದಲಾಗಿ ಮ್ಯಾಥ್ಯೂ ಕುಹ್ನೆಮನ್​ಗೆ ಅವಕಾಶ ನೀಡಲಾಗಿತ್ತು. ಇದರಿಂದ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಷ್ಟನ್ ಅಗರ್ ಅಸಮಾಧಾನ ಹೊರಹಾಕಿದ್ದಾರೆ.

5 / 7
ಈ ಬಗ್ಗೆ ಆಸ್ಟ್ರೇಲಿಯಾದ ಆಯ್ಕೆಗಾರ ಟೋನಿ ಡೊಡೆಮೈಡ್ ಅವರೊಂದಿಗೆ ಚರ್ಚಿಸಿರುವ ಅಷ್ಟನ್ ಅಗರ್ ತಮ್ಮ ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಕೋರಿಕೆಯಂತೆ ಇದೀಗ ಆಸ್ಟ್ರೇಲಿಯಾ ತಂಡದಿಂದ ಅನುಭವಿ ಆಲ್​ರೌಂಡರ್ ಅನ್ನು ಕೈ ಬಿಡಲಾಗಿದೆ.

6 / 7
ಭಾರತದಲ್ಲಿ ಬೆಂಚ್ ಕಾಯುವ ಬದಲು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಶೆಫೀಲ್ಡ್ ಶೀಲ್ಡ್ ಮತ್ತು ಮಾರ್ಷ್ ಕಪ್​ನಲ್ಲಿ ಭಾಗವಹಿಸಲು ಅಷ್ಟನ್ ಅಗರ್ ನಿರ್ಧರಿಸಿದ್ದಾರೆ. ಅದರಂತೆ ಇಂದೋರ್ ಟೆಸ್ಟ್​ಗೂ ಮುನ್ನ ಆಸೀಸ್ ತಂಡದ ಪ್ರಮುಖ ಸ್ಪಿನ್ನರ್ ತಂಡದಿಂದ ಹೊರನಡೆದಿರುವುದು ಖಚಿತವಾಗಿದೆ.

7 / 7
ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಈಗಾಗಲೇ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜೋಶ್ ಹ್ಯಾಝಲ್​ವುಡ್ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಈ ಇಬ್ಬರು ಆಟಗಾರರು ತವರಿಗೆ ಮರಳಿದ್ದು, ಹೀಗಾಗಿ ಮುಂದಿನ 2 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಅಗರ್ ಕೂಡ ಹೊರನಡೆದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಲಿದೆ.