Updated on: Aug 22, 2022 | 12:57 PM
ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಯಿಂದ ಹಲವು ತಂಡಗಳ ಆಟಗಾರರು ಹೊರಗುಳಿದಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ವೇಗಿಗಳು ಅಲಭ್ಯರಾಗಿದ್ದಾರೆ.
ಇನ್ನು ಪಾಕಿಸ್ತಾನ್ ತಂಡದ ವೇಗದ ಅಸ್ತ್ರ ಕೂಡ ಗಾಯದ ಕಾರಣ ಹೊರಬಿದ್ದಿದ್ದಾರೆ. ಹಾಗಿದ್ರೆ ಏಷ್ಯಾಕಪ್‌ನಿಂದ ಹೊರಗುಳಿದಿರುವ 5 ಆಟಗಾರರು ಯಾರೆಲ್ಲಾ ನೋಡೋಣ...
ಜಸ್ಪ್ರೀತ್ ಬುಮ್ರಾ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ.
ಹರ್ಷಲ್ ಪಟೇಲ್: ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ವೇಗಿ ಹರ್ಷಲ್ ಪಟೇಲ್ ಕೂಡ ಏಷ್ಯಾಕಪ್ಗೆ ಅಲಭ್ಯರಾಗಿದ್ದಾರೆ.
ಶಾಹೀನ್ ಶಾ ಅಫ್ರಿದಿ: ಪಾಕಿಸ್ತಾನದ ವೇಗ ಬೌಲರ್ ಶಾಹೀನ್ ಅಫ್ರಿದಿ ಮೊಣಕಾಲಿನ ಗಾಯದಿಂದಾಗಿ ಏಷ್ಯಾಕಪ್‌ನಿಂದ ಹಿಂದೆ ಸರಿದಿದ್ದಾರೆ.
ನೂರುಲ್ ಹಸನ್: ಬಾಂಗ್ಲಾದೇಶ ನೂರುಲ್ ಹಸನ್ ಕೂಡ ಬೆರಳಿನ ಗಾಯದ ಕಾರಣ ಏಷ್ಯಾಕಪ್‌ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ದುಷ್ಮಂತ ಚಮೀರಾ: ಶ್ರೀಲಂಕಾ ವೇಗಿ ಚಮೀರಾ ಪಾದದ ಗಾಯದಿಂದ ಬಳಲುತ್ತಿದ್ದು, ಇನ್ನೂ ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
Published On - 12:55 pm, Mon, 22 August 22