Asia Cup 2023: ಕಿಂಗ್ ಕೊಹ್ಲಿಯ ವಿಶ್ವದಾಖಲೆ ಮುರಿದ ಪಾಕ್ ನಾಯಕ ಬಾಬರ್..!
Asia Cup 2023: ಕಳೆದ ವಾರ ಮುಲ್ತಾನ್‌ನಲ್ಲಿ ನಡೆದ ನೇಪಾಳ ವಿರುದ್ಧದ ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ 151 ರನ್ಗಳ ಇನ್ನಿಂಗ್ಸ್ ಆಡಿದ್ದ ಬಾಬರ್, ಬಾಂಗ್ಲಾದೇಶದ ವಿರುದ್ಧ 22 ಎಸೆತಗಳಲ್ಲಿ 17 ರನ್ ಗಳಿಸಿ ಏಕದಿನ ಇತಿಹಾಸದಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.
1 / 8
ಪ್ರಸ್ತುತ ಏಷ್ಯಾಕಪ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ನಡೆದ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
2 / 8
ಈ ಪಂದ್ಯದಲ್ಲಿ ತಂಡದ ಪರ ಕೇವಲ 17 ರನ್ಗಳ ಇನ್ನಿಂಗ್ಸ್ ಆಡಿದ ನಾಯಕ ಬಾಬರ್ ಆಝಂ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವಿಶ್ವ ದಾಖಲೆಯನ್ನು ಪುಡಿ ಮಾಡಿದ್ದಾರೆ.
3 / 8
ವಾಸ್ತವವಾಗಿ ಏಕದಿನ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ. 1 ಸ್ಥಾನ, ಟಿ20ಯಲ್ಲಿ ನಂ. 3 ಮತ್ತು ಟೆಸ್ಟ್ನಲ್ಲಿ 4 ನೇ ಸ್ಥಾನದಲ್ಲಿರುವ ಬಾಬರ್, ತಮ್ಮ ನಾಯಕತ್ವದಿಂದ ಪಾಕ್ ತಂಡವನ್ನು ಏಕದಿನ ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿಸಿದ್ದಾರೆ.
4 / 8
ಇನ್ನು ಕಳೆದ ವಾರ ಮುಲ್ತಾನ್‌ನಲ್ಲಿ ನಡೆದ ನೇಪಾಳ ವಿರುದ್ಧದ ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ 151 ರನ್ಗಳ ಇನ್ನಿಂಗ್ಸ್ ಆಡಿದ್ದ ಬಾಬರ್, ಬಾಂಗ್ಲಾದೇಶದ ವಿರುದ್ಧ 22 ಎಸೆತಗಳಲ್ಲಿ 17 ರನ್ ಗಳಿಸಿ ಏಕದಿನ ಇತಿಹಾಸದಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.
5 / 8
ಈ ಮೈಲಿಗಲ್ಲನ್ನು ತಲುಪಲು ಬಾಬರ್ 31 ಇನ್ನಿಂಗ್ಸ್ ತೆಗೆದುಕೊಂಡರೆ, ಧೋನಿ ಬಳಿಕ ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡಿದ್ದ ವಿರಾಟ್ 36 ಇನ್ನಿಂಗ್ಸ್‌ಗಳಲ್ಲಿ ಭಾರತದ ಏಕದಿನ ತಂಡದ ನಾಯಕರಾಗಿ 2000 ರನ್ ಪೂರೈಸಿದ್ದರು.
6 / 8
ಇನ್ನು ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (41 ಇನ್ನಿಂಗ್ಸ್) ಮತ್ತು ಆಸ್ಟ್ರೇಲಿಯಾದ 2015 ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಮೈಕಲ್ ಕ್ಲಾರ್ಕ್ 947 ಇನ್ನಿಂಗ್ಸ್) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
7 / 8
ಮೇ 31, 2015 ರಂದು ಜಿಂಬಾಬ್ವೆ ವಿರುದ್ಧ ಇದೇ ಮೈದಾನದಲ್ಲಿ ಪಾಕಿಸ್ತಾನ ಪರ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಾಬರ್, 106 ಏಕದಿನ ಇನ್ನಿಂಗ್ಸ್‌ಗಳಲ್ಲಿ 19 ಶತಕಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಪಾಕ್ ತಂಡದ ಪರ ಅತಿ ಹೆಚ್ಚು ಏಕದಿನ ಶತಕಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
8 / 8
ಇನ್ನು ತಂಡದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ನಿರ್ಮಿಸಿದ 20 ಏಕದಿನ ಶತಕಗಳ ಸಾರ್ವಕಾಲಿಕ ಪಾಕಿಸ್ತಾನಿ ದಾಖಲೆಯನ್ನು ಸರಿಗಟ್ಟಲು ಬಾಬರ್ಗೆ ಇನ್ನು ಒಂದು ಶತಕದ ಅಗತ್ಯವಿದೆ.