
ಆಗಸ್ಟ್ 27 ರಿಂದ 15ನೇ ಬಾರಿಯ ಏಷ್ಯಾಕಪ್ಗೆ ಚಾಲನೆ ಸಿಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಪಾಕಿಸ್ತಾನ್ ವಿರುದ್ದ ಆಡಲಿದೆ.
ಈ ಹಿಂದೆ ಏಕದಿನ ಮಾದರಿಯಲ್ಲಿ ನಡೆಯುತ್ತಿದ್ದ ಏಷ್ಯಾಕಪ್ 2016 ರಿಂದ ಟಿ20 ಸ್ವರೂಪದಲ್ಲಿ ಆಡಲಾಗುತ್ತಿದೆ. ಹಾಗೆಯೇ ಕಳೆದ 14 ಸೀಸನ್ನ ಒಟ್ಟಾರೆ ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ ಇದುವರೆಗೆ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗಿದ್ರೆ ಭಾರತಕ್ಕೆ ಏಷ್ಯಾಕಪ್ ತಂದುಕೊಟ್ಟ ನಾಯಕರುಗಳು ಯಾರೆಲ್ಲಾ ನೋಡೋಣ...
1- ಸುನಿಲ್ ಗಾವಸ್ಕರ್ (1984)
2- ದಿಲೀಪ್ ವೆಂಗ್ಸರ್ಕಾರ್ (1988)
3- ಮೊಹಮ್ಮದ್ ಅಜರುದ್ದೀನ್ (1991)
4- ಮೊಹಮ್ಮದ್ ಅಜರುದ್ದೀನ್ (1995)
5- ಮಹೇಂದ್ರ ಸಿಂಗ್ ಧೋನಿ (2010)
6- ಮಹೇಂದ್ರ ಸಿಂಗ್ ಧೋನಿ (2016)
7- ರೋಹಿತ್ ಶರ್ಮಾ (2018)