Australia T20 squad: ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ ಪ್ರಕಟ: ಜೇಕ್ ಪ್ರೇಸರ್​ಗೆ ಇಲ್ಲ ಸ್ಥಾನ

| Updated By: ಝಾಹಿರ್ ಯೂಸುಫ್

Updated on: May 01, 2024 | 9:22 AM

T20 World Cup 2024: ಜೂನ್ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಯುವ ಸ್ಪೋಟಕ ದಾಂಡಿಗ ಜೇಕ್​ ಫ್ರೇಸರ್ ಮೆಕ್​ಗುರ್ಕ್​ಗೆ ಸ್ಥಾನ ಲಭಿಸಿಲ್ಲ. ಹಾಗೆಯೇ ತಂಡದಿಂದ ಸ್ಟೀವ್ ಸ್ಮಿತ್ ಕೂಡ ಹೊರಬಿದ್ದಿದ್ದಾರೆ.

1 / 5
T20 World Cup 2024: ಮುಂಬರುವ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತಂಡವನ್ನು (Australia T20 squad) ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಆಲ್​ರೌಂಡರ್ ಮಿಚೆಲ್ ಸ್ಟಾರ್ಕ್​ ಮುನ್ನಡೆಸಲಿದ್ದಾರೆ. ಇನ್ನು ಮಾಜಿ ನಾಯಕ ಪ್ಯಾಟ್ ಕಮಿನ್ಸ್ ಕೂಡ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2 / 5
ಆದರೆ ಈ ಬಾರಿಯ ಐಪಿಎಲ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಜೇಕ್ ಫ್ರೇಸರ್ ಮೆಕ್​ಗುರ್ಕ್​ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಹಾಗೆಯೇ ಹಿರಿಯ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಕೂಡ ಆಯ್ಕೆಗೆ ಪರಿಗಣಿಸಲಾಗಿಲ್ಲ.

3 / 5
ಇನ್ನು ಕಳೆದ 18 ತಿಂಗಳಿಂದ ಟಿ20 ತಂಡದಿಂದ ಹೊರಗುಳಿದಿದ್ದ ಕ್ಯಾಮರೋನ್ ಗ್ರೀನ್​ ಹಾಗೂ ಅಷ್ಟನ್ ಅಗರ್​ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಐಪಿಎಲ್​ನಿಂದ ಹೊರಗುಳಿದಿರುವ ಜೋಶ್ ಹ್ಯಾಝಲ್​ವುಡ್ ಟಿ20 ವಿಶ್ವಕಪ್​ ಮೂಲಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

4 / 5
ಆಸೀಸ್ ಬಳಗದಲ್ಲಿ ಸ್ಟಾರ್ ಬ್ಯಾಟರ್​ಗಳಾಗಿ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್​ವೆಲ್, ಮಿಚೆಲ್ ಸ್ಟಾರ್ಕ್​, ಮಾರ್ಕಸ್ ಸ್ಟೊಯಿನಿಸ್ ಕಾಣಿಸಿಕೊಂಡಿದ್ದು, ಇವರ ಜೊತೆ ವೇಗಿಗಳಾಗಿ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್​ವುಡ್, ನಾಥನ್ ಎಲ್ಲಿಸ್ ತಂಡದಲ್ಲಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ ಈ ಕೆಳಗಿನಂತಿದೆ...

5 / 5
ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ: ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.