ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯ..!

Updated on: Apr 15, 2026 | 6:54 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಅನ್ನು ನಾಲ್ಕು ಬಾರಿ ವಿದೇಶದಲ್ಲಿ ಆಯೋಜಿಸಲಾಗಿದೆ. 2009 ರಲ್ಲಿ ಭಾರತದಲ್ಲಿನ ಸಾರ್ವತ್ರಿಕ ಚುನಾವಣೆ ಹಿನ್ನಲೆ ಐಪಿಎಲ್​ ಅನ್ನು ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2014 ರ ಲೋಕಸಭಾ ಚುನಾವಣೆ ನಿಮಿತ್ತ ಐಪಿಎಲ್​ನ ಮೊದಲ ಹಂತದ ಪಂದ್ಯಗಳು ಯುಎಇ ನಲ್ಲಿ ನಡೆದಿದ್ದವು. ಇನ್ನು 2020 ಹಾಗೂ 2021 ರಲ್ಲಿ ಕೋವಿಡ್ ಕಾರಣ ಐಪಿಎಲ್ ಅನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಮುಂದೆ ಬಂದಿದೆ.

1 / 5
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಸಪ್ತಸಾಗರದಾಚೆ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಅಂದರೆ 2027ರ ಐಪಿಎಲ್ ಆವೃತ್ತಿಯ ಕೆಲವು ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.

2 / 5
ಸೌತ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ (SACA) ಮತ್ತು ಅಡಿಲೇಡ್ ಓವಲ್ ಮ್ಯಾನೇಜ್‌ಮೆಂಟ್ ಜಂಟಿಯಾಗಿ ಈ ಯೋಜನೆಯನ್ನು ರೂಪಿಸಿವೆ. 2027ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಕನಿಷ್ಠ ಒಂದು ಐಪಿಎಲ್ ಪಂದ್ಯವನ್ನಾದರೂ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಸಲು SACA ಉತ್ಸುಕರಾಗಿದ್ದಾರೆ.

3 / 5
ಈ ಪ್ರಸ್ತಾವನೆಯ ವಿಶೇಷವೆಂದರೆ ಇದು ಕೇವಲ ಏಕಮುಖ ನಿರ್ಧಾರವಲ್ಲ. ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯ ನಡೆದರೆ, ಪ್ರತಿಯಾಗಿ ಭಾರತದ ಚೆನ್ನೈನಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ಪಂದ್ಯವೊಂದನ್ನು ಆಯೋಜಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಮೂಲಕ ಉಭಯ ದೇಶಗಳು ಕ್ರಿಕೆಟ್ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿ ಇಟ್ಟುಕೊಂಡಿದೆ.

4 / 5
ವಿಶೇಷ ಎಂದರೆ ಅಡಿಲೇಡ್ ಓವಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದು. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದವರನ್ನು ಐಪಿಎಲ್​ ಆಯೋಜನೆಯ ಮೂಲಕ ಈ ಕ್ರೀಡಾಂಗಣಕ್ಕೆ ಸೆಳೆಯುವುದು ಸುಲಭ. ಹೀಗಾಗಿಯೇ ಈ ಇಂತಹದೊಂದು ಪ್ಲ್ಯಾನ್ ಅನ್ನು ರೂಪಿಸಲಾಗುತ್ತಿದೆ.

5 / 5
ಇತ್ತ 2027ರಲ್ಲಿ ಐಪಿಎಲ್​​ ಪಂದ್ಯಗಳ ಸಂಖ್ಯೆಯನ್ನು 74 ರಿಂದ 94ಕ್ಕೆ ಏರಿಸುವ ಯೋಜನೆಯಿದೆ. ಈ ಸಂದರ್ಭದಲ್ಲಿ ಲೀಗ್‌ನ ಒಂದು ಭಾಗವನ್ನು ವಿದೇಶದಲ್ಲಿ ನಡೆಸುವುದು ಪ್ರಾಯೋಗಿಕವಾಗಿ ಹೇಗೆ ಸಾಧ್ಯ ಎಂಬುದು ಚರ್ಚೆಯ ವಿಷಯ. ಇದಾಗ್ಯೂ ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯ ನಡೆಯುವುದು ಕೇವಲ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ ಮಾತ್ರವಲ್ಲ, ಇದು ಜಾಗತಿಕವಾಗಿ ಕ್ರಿಕೆಟ್ ಆರ್ಥಿಕತೆಯನ್ನು ಬಲಪಡಿಸುವ ಹೆಜ್ಜೆಯಾಗಬಹುದು. ಹೀಗಾಗಿ ಎರಡು ಕ್ರಿಕೆಟ್ ಬೋರ್ಡ್ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow Us