ಬರೋಬ್ಬರಿ 35 ಸಿಕ್ಸ್: ವಿಸ್ಫೋಟಕ ತ್ರಿಶತಕ ಸಿಡಿಸಿದ ಹರ್ಜಾಸ್ ಸಿಂಗ್

Updated on: Oct 05, 2025 | 7:42 AM

Harjas Singh Triple Century: ಭಾರತೀಯ ಮೂಲದ ಹರ್ಜಾಸ್ ಸಿಂಗ್ 2024 ರಲ್ಲಿ ಆಸ್ಟ್ರೇಲಿಯಾ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ನಡೆದ ಕಿರಿಯ ವಿಶ್ವಕಪ್​ ಫೈನಲ್​ನಲ್ಲಿ ಭಾರತದ ವಿರುದ್ಧ 55 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1 / 6
ಕೆಲವೊಮ್ಮೆ, ಕ್ರಿಕೆಟ್ ಮೈದಾನದಲ್ಲಿನ ಪ್ರದರ್ಶನಗಳು ಇತಿಹಾಸವನ್ನು ಸೃಷ್ಟಿಸುತ್ತವೆ. ಅಂತಹದೊಂದು ಪ್ರದರ್ಶನ ನೀಡಿದ್ದಾರೆ ಆಸ್ಟ್ರೇಲಿಯಾದ ಹರ್ಜಾಸ್ ಸಿಂಗ್ (Harjas Singh). ಸಿಡ್ನಿ ಗ್ರೇಡ್ ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅವರು ಆಡಿದ ಇನ್ನಿಂಗ್ಸ್ ಎಲ್ಲರನ್ನೂ ಬೆರಗುಗೊಳಿಸಿದೆ.

2 / 6
ಸಿಡ್ನಿ ಕ್ರಿಕೆಟ್ ಕ್ಲಬ್ ವಿರುದ್ಧದ ಏಕದಿನ ಪಂದ್ಯದಲ್ಲಿ ವೆಸ್ಟರ್ನ್ ಸಬರ್ಬ್ಸ್ ಪರ ಕಣಕ್ಕಿಳಿದ ಹರ್ಜಾಸ್ ಸಿಂಗ್ ತ್ರಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ತ್ರಿಶತಕ ಬಾರಿಸಲು ತೆಗೆದುಕೊಂಡಿದ್ದು ಕೇವಲ 141 ಎಸೆತಗಳನ್ನು ಎಂಬುದೇ ಅಚ್ಚರಿ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟರ್ನ್ ಸಬರ್ಬ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಜಾಸ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

3 / 6
ಆ ಬಳಿಕ ಸಿಡಿಲಬ್ಬರ ಶುರು ಮಾಡಿದ ಹರ್ಜಾಸ್ ಕೇವಲ 74 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಇನ್ನು ಶತಕದ ಬಳಿಕ ಅಸಲಿ ಆಟ ಶುರು ಮಾಡಿದ್ದಾರೆ. ಸಿಡ್ನಿ ಬೌಲರ್​ಗಳ ಬೆಂಡೆತ್ತಿದ ಹರ್ಜಾಸ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದಿದ್ದಾರೆ. ಪರಿಣಾಮ ಕೇವಲ 103 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು.

4 / 6
ಇನ್ನು ದ್ವಿಶತಕದಿಂದ ತ್ರಿಶತಕ ತಲುಪಲು ತೆಗೆದುಕೊಂಡ ಎಸೆತಗಳ ಸಂಖ್ಯೆ ಕೇವಲ 29 ಮಾತ್ರ. ಅಂದರೆ ಕೇವಲ 132 ಎಸೆತಗಳಲ್ಲಿ ತ್ರಿಪಲ್ ಸೆಂಚುರಿ ಸಿಡಿಸಿ ಇತಿಹಾಸ ಬರೆದಿದ್ದಾರೆ. ಅಂತಿಮವಾಗಿ 141 ಎಸೆತಗಳನ್ನು ಎದುರಿಸಿದ ಹರ್ಜಾಸ್ ಸಿಂಗ್ 35 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಅಜೇಯ 314 ರನ್ ಚಚ್ಚಿದ್ದಾರೆ.

5 / 6
ಈ ಮೂಲಕ ಸಿಡ್ನಿ ಗ್ರೇಡ್ ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ತ್ರಿಶತಕ ಸಿಡಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅತೀ ವೇಗವಾಗಿ ತ್ರಿಪಲ್ ಸೆಂಚುರಿ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

6 / 6
ಹರ್ಜಾಸ್ ಸಿಂಗ್ ಅವರ ವಿಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಈ ಪಂದ್ಯದಲ್ಲಿ ವೆಸ್ಟರ್ನ್ ಸಬರ್ಬ್ಸ್ ತಂಡವು 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 483 ರನ್​ ಕಲೆಹಾಕಿದೆ. ಈ ಪಂದ್ಯದಲ್ಲಿ ಹರ್ಜಾಸ್ ಸಿಂಗ್ ಅವರನ್ನು ಹೊರತುಪಡಿಸಿ ಈ ಪಂದ್ಯದಲ್ಲಿ ವೆಸ್ಟರ್ನಸ್ ಸಬರ್ಸ್ ಪರ ಯಾವುದೇ ಬ್ಯಾಟರ್ ಅರ್ಧಶತಕವನ್ನು ಸಹ ಬಾರಿಸಿಲ್ಲ ಎಂಬುದು ವಿಶೇಷ.