BCCI Central Contracts: ಜಡೇಜಾಗೆ ಬಂಪರ್: ವರ್ಷಕ್ಕೆ 7 ಕೋಟಿ ರೂ. ಸ್ಯಾಲರಿ: ಸಂಜು ಸ್ಯಾಮ್ಸನ್​ಗೆ ಎಷ್ಟು ಗೊತ್ತೇ?

|

Updated on: Mar 27, 2023 | 10:56 AM

Team India Players Salary: ಬಿಸಿಸಿಐ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಅವಧಿಯನ್ನು ಪ್ರಕಟಿಸಿದೆ. ಇಂಜುರಿಯಿಂದ ಕಮ್​ಬ್ಯಾಕ್ ಮಾಡಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾಗೆ ಭಡ್ತಿ ನೀಡಲಾಗಿದೆ. ಸಂಜು ಸ್ಯಾಮ್ಸನ್ ಕೂಡ ಪಟ್ಟಿಯಲ್ಲಿದ್ದಾರೆ.

1 / 8
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಅವಧಿಯನ್ನು ಪ್ರಕಟಿಸಿದೆ. ಕೆಲವೊಂದು ಅಚ್ಚರಿ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ. ಐಸಿಸಿ ಏಕದಿನ ವಿಶ್ವಕಪ್ 2023 ದೃಷ್ಟಿಯಿಂದ ಶಿಖರ್ ಧವನ್ ಹಾಗೂ ಸಂಜು ಸ್ಯಾಮ್ಸನ್ ಕಾಂಟ್ರಾಕ್ಟ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

2 / 8
ಈ ಮೂಲಕ ಏಕದಿನ ವಿಶ್ವಕಪ್​ನ ಭಾರತ ತಂಡದಲ್ಲಿ ಧವನ್ ಹಾಗೂ ಸ್ಯಾಮ್ಸನ್ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇವರಿಬ್ಬರು ಉತ್ತಮ ಪ್ರದರ್ಶನ ತೋರಿದರೆ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗುವ ಸಾಧ್ಯತೆ ಇದೆ.

3 / 8
ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಇಂಜುರಿ ಒಂದುಕಡೆಯಾದರೆ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್​ನಲ್ಲಿ ನೀಡಿದ ಕಳಪೆ ಪ್ರದರ್ಶನ ಸಂಜು ಸ್ಯಾಮ್ಸನ್​ಗೆ ವರವಾಗಿ ಪರಿಣಮಿಸಿದೆ ಎಂದೇ ಹೇಳಬಹುದು. ನಂಬರ್ 4 ಕ್ರಮಾಂಕದಲ್ಲಿ ಸಂಜು ಮುಂದಿನ ದಿನಗಳಲ್ಲಿ ಆಡುವ ಸಾಧ್ಯತೆ ಇದೆ.

4 / 8
ಇದರ ನಡುವೆ ಇಂಜುರಿಯಿಂದ ಕಮ್​ಬ್ಯಾಕ್ ಮಾಡಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾಗೆ ಭಡ್ತಿ ನೀಡಲಾಗಿದೆ. ಇವರು A+ ಗ್ರೇಡ್​ನಲ್ಲಿ ಕಾಣಿಸಿಗೊಂಡಿದ್ದು ಬರೋಬ್ಬರಿ 7 ಕೋಟಿ ವರ್ಷಕ್ಕೆ ಪಡೆಯುತ್ತಿದ್ದಾರೆ. ಕೆಎಲ್ ರಾಹುಲ್ ಅವರಿಗೆ ಶಾಕ್ ನೀಡಲಾಗಿದೆ. ಇಲ್ಲಿದೆ ನೋಡಿ ಬಿಸಿಸಿಐ ಬಿಡುಗಡೆ ಮಾಡಿರುವ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿ.

5 / 8
A+ ಗ್ರೇಡ್: 7 ಕೋಟಿ ಪಡೆಯುತ್ತಿರುವ ಆಟಗಾರರು: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

6 / 8
A ಗ್ರೇಡ್: 5 ಕೋಟಿ ಪಡೆಯುತ್ತಿರುವ ಪ್ಲೇಯರ್ಸ್: ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್, ಅಕ್ಷರ್ ಪಟೇಲ್.

7 / 8
B ಗ್ರೇಡ್: 3 ಕೋಟಿ ಪಡೆಯುತ್ತಿರುವ ಆಟಗಾರರು: ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್.

8 / 8
C ಗ್ರೇಡ್: 1 ಕೋಟಿ ಪಡೆಯುತ್ತಿರುವ ಪ್ಲೇಯರ್ಸ್: ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್.

Published On - 10:56 am, Mon, 27 March 23