ಭಾರತೀಯ ಅಂಪೈರ್‌ಗಳ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸಿದ ಬಿಸಿಸಿಐ

Updated on: Sep 18, 2026 | 5:42 PM

ಬಿಸಿಸಿಐ ದೇಶೀಯ ಅಂಪೈರ್‌ಗಳ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸಿದೆ. ಅಕ್ಟೋಬರ್ 11 ರಿಂದ ರಣಜಿ ಟ್ರೋಫಿಯಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಲೀಗ್ ಪಂದ್ಯಗಳಿಗೆ ದಿನಕ್ಕೆ 40,000 ರೂ. (ರಣಜಿ ಪಂದ್ಯಕ್ಕೆ 1.6 ಲಕ್ಷ ರೂ.) ಮತ್ತು ನಾಕೌಟ್ ಪಂದ್ಯಗಳಿಗೆ 60,000 ರೂ. ವೇತನ ಪಡೆಯಲಿದ್ದಾರೆ. ಇದು ಹಿಂದಿನದಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆ, ಇದು ಭಾರತೀಯ ಅಂಪೈರ್‌ಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ.

1 / 5
ಭಾರತೀಯ ಅಂಪೈರ್‌ಗಳಿಗೆ ಬಿಸಿಸಿಐ ಮಹತ್ವದ ಉಡುಗೊರೆ ನೀಡಿದೆ. ಎಲ್ಲಾ ದೇಶೀಯ ಅಂಪೈರ್‌ಗಳ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ. ಅಕ್ಟೋಬರ್ 11 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯಿಂದ ಅಂಪೈರ್‌ಗಳು ಹೊಸ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಘೋಷಿಸಿದೆ (PC- PTI).

ಭಾರತೀಯ ಅಂಪೈರ್‌ಗಳಿಗೆ ಬಿಸಿಸಿಐ ಮಹತ್ವದ ಉಡುಗೊರೆ ನೀಡಿದೆ. ಎಲ್ಲಾ ದೇಶೀಯ ಅಂಪೈರ್‌ಗಳ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ. ಅಕ್ಟೋಬರ್ 11 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯಿಂದ ಅಂಪೈರ್‌ಗಳು ಹೊಸ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಘೋಷಿಸಿದೆ (PC- PTI).

2 / 5

ಬಿಸಿಸಿಐ ಅಂಪೈರ್‌ಗಳನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ಶ್ರೇಣಿಗಳಾಗಿ ವಿಂಗಡಿಸಿದೆ. ಹಿರಿಯರ ದೇಶೀಯ ಪಂದ್ಯಾವಳಿಗಳಲ್ಲಿ ಗ್ರೇಡ್ ಎ ಮತ್ತು ಬಿ ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಜೂನಿಯರ್ ಪಂದ್ಯಾವಳಿಗಳಲ್ಲಿ ಗ್ರೇಡ್ ಸಿ ಮತ್ತು ಡಿ ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ(PC- PTI).

3 / 5

ಬಿಸಿಸಿಐನ ಹೊಸ ನಿಯಮಗಳ ಪ್ರಕಾರ, ಲೀಗ್ ಪಂದ್ಯಗಳಿಗೆ ಅಂಪೈರ್‌ಗಳು ಈಗ ದಿನಕ್ಕೆ 40,000 ರೂ. ವೇತನ ಪಡೆಯಲಿದ್ದಾರೆ. ಇದರರ್ಥ ರಣಜಿ ಟ್ರೋಫಿ ಪಂದ್ಯದಲ್ಲಿ ಅಂಪೈರ್​ಗಳು ನಾಲ್ಕು ದಿನಗಳು ಕಾರ್ಯನಿರ್ವಹಿಸುವುದರಿಂದ ಒಂದು ರಣಜಿ ಪಂದ್ಯಕ್ಕೆ 160,000 ರೂ. ವೇತನ ಪಡೆಯಲಿದ್ದಾರೆ(PC- PTI).

4 / 5

ಹಾಗೆಯೇ ನಾಕೌಟ್ ಪಂದ್ಯಗಳಿಗೆ ದಿನಕ್ಕೆ 50,000 ರಿಂದ 60,000 ರೂಪಾಯಿ ವೇತನವನ್ನು ಪಡೆಯಲಿದ್ದಾರೆ. ಇದು ಹಿಂದಿನ ಆವೃತ್ತಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳವಾಗಿದೆ. ಇದರಿಂದಾಗಿ ಇನ್ನು ಮುಂದೆ ಆಟಗಾರರ ಜೊತೆಗೆ ಅಂಪೈರ್‌ಗಳ ಜೇಬು ಕೂಡ ತುಂಬಲಿದೆ(PC- PTI).

5 / 5

ದೇಶಿಯ ಕ್ರಿಕೆಟ್‌ಗೆ ಹೋಲಿಸಿದರೆ, ಐಪಿಎಲ್‌ನಲ್ಲಿ ಅಂಪೈರ್‌ಗಳು ಇನ್ನೂ ಹೆಚ್ಚಿನ ವೇತನ ಪಡೆಯುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಐಪಿಎಲ್​ನಲ್ಲಿ ಅಂಪೈರ್‌ಗಳು ಸಾಮಾನ್ಯವಾಗಿ ಪ್ರತಿ ಪಂದ್ಯಕ್ಕೆ 3 ರಿಂದ 4 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಇದಲ್ಲದೆ ಐಸಿಸಿ ಎಲೈಟ್ ಪ್ಯಾನೆಲ್​ನಲ್ಲಿರುವ ಅಂಪೈರ್‌ಗಳಿಗೆ ಇದಕ್ಕಿಂತ ಹೆಚ್ಚಿನ ವೇತನ ಸಿಗಲಿದೆ(PC- PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us