Cheteshwar Pujara: ದಾಖಲೆಯ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರ
TV9 Web | Updated By: ಝಾಹಿರ್ ಯೂಸುಫ್
Updated on:
Jan 07, 2024 | 1:36 PM
Cheteshwar Pujara: ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಚೇತೇಶ್ವರ ಪೂಜಾರ ಆ ಬಳಿಕ ರನ್ಗಳಿಸುತ್ತಾ ಸಾಗಿದರು. ಅಲ್ಲದೆ 2ನೇ ದಿನದಾಟದ ಮುಕ್ತಾಯದ ವೇಳೆಗೆ 239 ಎಸೆತಗಳಲ್ಲಿ 157 ರನ್ ಬಾರಿಸಿ ಅಜೇಯರಾಗುಳಿದರು.
1 / 6
ರಾಜ್ಕೋಟ್ನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಜಾರ್ಖಂಡ್ ವಿರುದ್ಧದ ಈ ಪಂದ್ಯದಲ್ಲಿ ಸೌರಾಷ್ಟ್ರ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂಜಾರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
2 / 6
ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಪೂಜಾರ ಆ ಬಳಿಕ ರನ್ಗಳಿಸುತ್ತಾ ಸಾಗಿದರು. ಅಲ್ಲದೆ 2ನೇ ದಿನದಾಟದ ಮುಕ್ತಾಯದ ವೇಳೆಗೆ 239 ಎಸೆತಗಳಲ್ಲಿ 157 ರನ್ ಬಾರಿಸಿ ಅಜೇಯರಾಗುಳಿದರು.
3 / 6
ಮೂರನೇ ದಿನದಾಟದ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ 317 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ದ್ವಿಶತಕದೊಂದಿಗೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಪೂಜಾರ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
4 / 6
ಈ ಪಟ್ಟಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 37 ದ್ವಿಶತಕ ಬಾರಿಸಿರುವ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮ್ಯಾನ್ ಅಗ್ರಸ್ಥಾನದಲ್ಲಿದ್ದರೆ, 36 ಡಬಲ್ ಸೆಂಚುರಿ ಸಿಡಿಸಿರುವ ಇಂಗ್ಲೆಂಡ್ನ ವಾಲಿ ಹ್ಯಾಮಂಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ 22 ದ್ವಿಶತಕ ಸಿಡಿಸಿರುವ ಇಂಗ್ಲೆಂಡ್ನ ಪ್ಯಾಟ್ಸಿ ಹೆಂಡ್ರೆನ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
5 / 6
ಇದೀಗ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 17ನೇ ದ್ವಿಶತಕ ಬಾರಿಸುವ ಮೂಲಕ ಚೇತೇಶ್ವರ ಪೂಜಾರ ಟಾಪ್-4 ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಫಸ್ಟ್ ಕ್ಲಾಸ್ ಕ್ರಿಕೆಟ್ನ ಭಾರತದ ದ್ವಿಶತಕ ವೀರ ಎನಿಸಿಕೊಂಡಿದ್ದಾರೆ.
6 / 6
ಇನ್ನು ಚೇತೇಶ್ವರ ಪೂಜಾರ (243) ಅವರ ಈ ಅಜೇಯ ದ್ವಿಶತಕದ ನೆರವಿನಿಂದ ಸೌರಾಷ್ಟ್ರ ತಂಡವು 4 ವಿಕೆಟ್ ನಷ್ಟಕ್ಕೆ 578 ರನ್ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಜಾರ್ಖಂಡ್ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 435 ರನ್ಗಳ ಮುನ್ನಡೆ ಸಾಧಿಸಿದೆ.