Cheteshwar Pujara: ಚೇತೇಶ್ವರ್ ಪೂಜಾರ 100ನೇ ಟೆಸ್ಟ್ಗೆ ಬಿಗ್ ಸರ್ಪ್ರೈಸ್ ರೆಡಿ ಮಾಡಿದ ಬಿಸಿಸಿಐ: ಏನು ಗೊತ್ತೇ?
India vs Australia 2nd Test: ಇಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರ 100ನೇ ಟೆಸ್ಟ್ ಆಗಿದೆ. ಈ ಮೂಲಕ ಪೂಜಾರ ಶತಕದ ಟೆಸ್ಟ್ ಆಡಿದ ಸಾಧನೆ ಮಾಡಲಿದ್ದಾರೆ.
1 / 7
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಬಾರ್ಡರ್- ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಕಾಂಗರೂ ಪಡೆಗೆ ಈ ಟೆಸ್ಟ್ ಮುಖ್ಯವಾಗಿದೆ. ಇತ್ತ ಭಾರತಕ್ಕೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ದೃಷ್ಟಿಯಿಂದ ಗೆಲ್ಲಬೇಕಿದೆ.
2 / 7
ವಿಶೇಷ ಎಂದರೆ ಇದು ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರ 100ನೇ ಟೆಸ್ಟ್ ಪಂದ್ಯ. ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪೂಜಾರ ಶತಕದ ಟೆಸ್ಟ್ ಆಡಿದ ಸಾಧನೆ ಮಾಡಲಿದ್ದಾರೆ. ಈ ಮೂಲಕ 100 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಾಡಿದ ಭಾರತದ 13ನೇ ಆಟಗಾರ ಎಂಬ ಕೀರ್ತಿಗೆ ಪೂಜಾರ ಭಾಜನರಾಗಲಿದ್ದಾರೆ.
3 / 7
ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪೂಜಾರ ಅವರ 100ನೇ ಟೆಸ್ಟ್ಗೆ ಬಿಗ್ ಸರ್ಪ್ರೈಸ್ ರೆಡಿ ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ಮೈದಾನದಲ್ಲಿ ಪೂಜಾರ ಅವರಿಗೆ ವಿಶೇಷ ಗೌರವ ಸಲ್ಲಿಸಲಿದೆ ಎಂದು ಹೇಳಲಾಗಿದೆ. ''ದ್ವಿತೀಯ ಟೆಸ್ಟ್ನ ಮೊದಲ ದಿನ ಆರಂಭಕ್ಕೂ ಮುನ್ನ ಪೂಜಾರ ಅವರಿಗೆ ವಿಶೇಷ ಗೌರವ ಸೂಚಿಸಲು ನಾವು ತೀರ್ಮಾನಿಸಿದ್ದೇವೆ,'' ಎಂದು ಬಿಸಿಸಿಐ ಮೂಲಗಳ ತಿಳಿಸಿವೆ.
4 / 7
100ನೇ ಟೆಸ್ಟ್ ಬಗ್ಗೆ ಮಾತನಾಡಿದ ಪೂಜಾರ, "ನಾನು ಇನ್ನೂ ಸಾಧಿಸುವುದು ಬಹಳಷ್ಟಿದೆ. ನೂರನೇ ಟೆಸ್ಟ್ ಪಂದ್ಯ ಆಡುವುದಕ್ಕೆ ಉತ್ಸುಕನಾಗಿದ್ದೇನೆ. ಇದೇ ಸಮಯದಲ್ಲಿ ನಾವು ಮಹತ್ವದ ಸರಣಿಯನ್ನೂ ಆಡುತ್ತಿದ್ದೇವೆ. ಈ ಟೆಸ್ಟ್ ಪಂದ್ಯವನ್ನು ನಾವು ಗೆಲ್ಲಬೇಕು. ಗೆಲುವಿನ ಹಾದಿಯತ್ತ ಸಾಗುತ್ತೇವೆ. ಇನ್ನೊಂದು ಟೆಸ್ಟ್ ಪಂದ್ಯ ಗೆದ್ದು ನಾವು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ. ಡಬ್ಲ್ಯೂಟಿಸಿ ಫೈನಲ್ ಅನ್ನು ಭಾರತ ತಂಡಕ್ಕಾಗಿ ಗೆಲ್ಲಿಸುವದು ನನ್ನ ಕನಸು" ಎಂದು ಹೇಳಿದರು.
5 / 7
ಇದೇವೇಳೆ ಪೂಜಾರ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ತನಗೆ ನೆರವಾದ ಕುಟುಂಬ, ಸ್ನೇಹಿತರು ಮತ್ತು ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ಬಾಲ್ಯದಿಂದಲೂ ತನ್ನ ತರಬೇತುದಾರರಾಗಿರುವ ತಂದೆ ಅರವಿಂದ್ ಹಾಗೂ ನನ್ನ ಹೆಂಡತಿ ಶುಕ್ರವಾರ ಮೈದಾನಕ್ಕೆ ಬಂದು, 100ನೇ ಟೆಸ್ಟ್ ಪಂದ್ಯಕ್ಕೆ ವೀಕ್ಷಿಸುವರು ಎಂದು ಪೂಜಾರ ಹೇಳಿದ್ದಾರೆ.
6 / 7
2010ರಲ್ಲಿ ಆಸ್ಟ್ರೇಲಿಯಾ ವಿರುದ್ದ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪೂಜಾರ, ಇದೀಗ 100ನೇ ಟೆಸ್ಟ್ ಪಂದ್ಯವನ್ನೂ ಕೂಡ ಇದೇ ತಂಡದ ವಿರುದ್ಧ ಆಡುತ್ತಿರುವುದು ವಿಶೇಷ. ಇಲ್ಲಿಯವರೆಗೂ 99 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನುಪ್ರತಿನಿಧಿಸಿರುವ ಅವರು 19 ಶತಕಗಳು ಹಾಗೂ 34 ಅರ್ಧಶತಕಗಳೊಂದಿಗೆ 7021 ರನ್‌ಗಳನ್ನು ಗಳಿಸಿದ್ದಾರೆ. ಅಜೇಯ 206* ರನ್ ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.
7 / 7
100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಚೇತೇಶ್ವರ್ ಪೂಜಾರ ಅವರು ಮೊನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭ ಪೂಜಾರಗೆ ಮೋದಿ ಅಭಿನಂದನೆ ಸಲ್ಲಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.