Updated on: Feb 17, 2023 | 2:42 PM
5 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ರವೀಂದ್ರ ಜಡೇಜಾ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ 4 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು. ಇದೀಗ ಜಡೇಜಾ ಎರಡನೇ ಟೆಸ್ಟ್‌ನ ಮೊದಲ ದಿನವೂ ಅದ್ಭುತ ಪ್ರದರ್ಶನ ನೀಡಿದ್ದಾರೆ.
ದೆಹಲಿ ಟೆಸ್ಟ್‌ನ ಮೊದಲ ದಿನವೇ ಅದ್ಭುತ ಪ್ರದರ್ಶನ ನೀಡಿದ ಜಡೇಜಾ, ಪಂದ್ಯದ ಎರಡನೇ ಸೆಷನ್ನಲ್ಲಿ 81 ರನ್‌ಗಳಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆದರು.
ಖವಾಜಾ ಅವರನ್ನು ಔಟ್ ಮಾಡಿದ ತಕ್ಷಣ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಮಾಡಿದ ಜಡೇಜಾ, ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದರು.
ಈ ವಿಕೆಟ್‌ನೊಂದಿಗೆ ಜಡೇಜಾ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ಅಲ್ಲದೆ ಜಡೇಜಾ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 2500 ರನ್ ಮತ್ತು 250 ವಿಕೆಟ್‌ಗಳನ್ನು ಗಳಿಸಿದ ಏಷ್ಯಾದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ.
ಜಡೇಜಾ 62 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಇಮ್ರಾನ್ ಖಾನ್ 64 ಮತ್ತು ಕಪಿಲ್ ದೇವ್ 65 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.