ಬಿಬಿಎಲ್​​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ ಲಿನ್

Updated on: Jan 05, 2026 | 9:47 AM

ಬಿಗ್ ಬ್ಯಾಷ್ ಲೀಗ್​ನಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಕ್ರಿಸ್ ಲಿನ್ ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ 226 ಸಿಕ್ಸ್​ ಹಾಗೂ 336 ಫೋರ್​​ಗಳನ್ನು ಬಾರಿಸುವ ಮೂಲಕ. ಈ ಸಿಡಿಲಬ್ಬರದ ಬ್ಯಾಟಿಂಗ್​​​ನೊಂದಿಗೆ ಕ್ರಿಸ್ ಲಿನ್ ಬಿಬಿಎಲ್​ ಟೂರ್ನಿಯಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ದಾಖಲೆ ನಿರ್ಮಿಸಿದ್ದಾರೆ.

1 / 5
Big Bash 2026: ಬಿಗ್ ಬ್ಯಾಷ್​ ಲೀಗ್​​ನಲ್ಲಿ ಸ್ಪೋಟಕ ದಾಂಡಿಗ ಕ್ರಿಸ್ ಲಿನ್ (Chris Lynn) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ ಕಣಕ್ಕಿಳಿಯುತ್ತಿರುವ ಲಿನ್ ಈವರೆಗೆ ಒಟ್ಟು 111 ರನ್ ಕಲೆಹಾಕಿದ್ದಾರೆ.

2 / 5
ಈ ರನ್​​ಗಳೊಂದಿಗೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ 4 ಸಾವಿರ ರನ್​ಗಳನ್ನು ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಬಿಬಿಎಲ್​​ನಲ್ಲಿ ಈವರೆಗೆ 132 ಪಂದ್ಯಗಳನ್ನಾಡಿರುವ ಕ್ರಿಸ್ ಲಿನ್ 1 ಶತಕ ಹಾಗೂ 32 ಅರ್ಧಶತಕಗಳೊಂದಿಗೆ 4066 ರನ್​ ಕಲೆಹಾಕಿದ್ದಾರೆ.

3 / 5
ವಿಶೇಷ ಎಂದರೆ ಕ್ರಿಸ್ ಲಿನ್ ಅವರನ್ನು ಹೊರತುಪಡಿಸಿ ಬಿಗ್ ಬ್ಯಾಷ್ ಲೀಗ್​​ನಲ್ಲಿ ಯಾವುದೇ ಬ್ಯಾಟರ್ 4 ಸಾವಿರ ರನ್​​ಗಳ ಗಡಿ ತಲುಪಿಲ್ಲ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್​.

4 / 5
ಮೆಲ್ಬೋರ್ನ್ ರೆನೆಗೇಡ್ಸ್ ಪರ ಬರೋಬ್ಬರಿ 107 ಪಂದ್ಯಗಳನ್ನಾಡಿರುವ ಆರೋನ್ ಫಿಂಚ್ 105 ಇನಿಂಗ್ಸ್​​​ಗಳ ಮೂಲಕ 2 ಭರ್ಜರಿ ಶತಕ ಹಾಗೂ 26 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಒಟ್ಟು 3311 ರನ್​​ಗಳಿಸಿ ಬಿಗ್ ಬ್ಯಾಷ್ ಲೀಗ್​​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5
ಇದೀಗ 130 ಇನಿಂಗ್ಸ್​​ಗಳ ಮೂಲಕ ಕ್ರಿಸ್ ಲಿನ್ ಒಟ್ಟು 4066 ರನ್​​ಗಳಿಸಿದ್ದಾರೆ. ಈ ಮೂಲಕ ಬಿಬಿಎಲ್​​ನಲ್ಲಿ 4 ಸಾವಿರ ರನ್​ಗಳಿಸಿದ ಮೊದಲ ಬ್ಯಾಟ್ಸ್​​ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬ್ಯಾಷ್ ಲೀಗ್​​ನಲ್ಲಿ 200 ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಪ್ರಥಮ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಕ್ರಿಸ್ ಲಿನ್ ಪಾತ್ರರಾಗಿದ್ದಾರೆ.