Virat Kohli: ಡೆಲ್ಲಿಯ ವಿರಾಟ್ ಕೊಹ್ಲಿ ಪೆವಿಲಿಯನ್ನಲ್ಲಿ ಕಿಂಗ್ ಕೊಹ್ಲಿ: ವೈರಲ್ ಆಗುತ್ತಿದೆ ಫೋಟೋ
DC vs RCB, IPL 2023: ಆರ್ಸಿಬಿ ತಂಡ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಇದರ ನಡುವೆ ವಿರಾಟ್ ಕೊಹ್ಲಿ ಅಭ್ಯಾಸಕ್ಕೆಂದು ತಮ್ಮ ಹೆಸರಿರುವ ಪೆವಿಲಿಯನ್ ಕಡೆಯಿಂದ ನಡೆದುಕೊಂಡು ಬರುತ್ತಿರುವ ಫೋಟೋ ವೈರಲ್ ಆಗುತ್ತಿದೆ.
1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಮೇ 6 ಶನಿವಾರದಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.
2 / 7
ಈಗಾಗಲೇ ಆರ್ಸಿಬಿ ಆಟಗಾರರು ದೆಹಲಿಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೊಹ್ಲಿ, ಡುಪ್ಲೆಸಿಸ್, ಮ್ಯಾಕ್ಸ್ವೆಲ್ ಸೇರಿದಂತೆ ಇತರೆ ಪ್ಲೇಯರ್ಸ್ ಬ್ಯಾಟಿಂಗ್- ಬೌಲಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
3 / 7
ಇದರ ನಡುವೆ ವಿರಾಟ್ ಕೊಹ್ಲಿ ಅವರು ಅಭ್ಯಾಸಕ್ಕೆಂದು ತಮ್ಮ ಹೆಸರಿರುವ ಪೆವಿಲಿಯನ್ ಕಡೆಯಿಂದ ನಡೆದುಕೊಂಡು ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
4 / 7
ದೆಹಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಒಂದು ಪೆವಿಲಿಯನ್ಗೆ ವಿರಾಟ್ ಕೊಹ್ಲಿ ಹೆಸರು ಇಡಲಾಗಿದೆ. ಇಲ್ಲಿಂದಲೇ ಕೊಹ್ಲಿ ಆರ್ಸಿಬಿ ಜೆರ್ಸಿಯಲ್ಲಿ ನಡೆದುಕೊಂಡು ಬರುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
5 / 7
ಆರ್ಸಿಬಿ ಈ ಬಾರಿಯ ಐಪಿಎಲ್ನಲ್ಲಿ ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಮತ್ತು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್ರೇಟ್ ಹೊಂದಿದೆ. ಹೀಗಾಗಿ ಮುಂಬರುವ ಮ್ಯಾಚ್ಗಳು ಬೆಂಗಳೂರಿಗೆ ಮಹತ್ವದ್ದಾಗಿದೆ.
6 / 7
ಇನ್ನು ಗಾಯದ ಕಾರಣ ಐಪಿಎಲ್ನಿಂದ ಹೊರಬಿದ್ದಿರುವ ಆರ್ಸಿಬಿ ಆಟಗಾರ ಡೇವಿಡ್ ವಿಲ್ಲಿ ಬದಲಿಗೆ ಮೊನ್ನೆಯಷ್ಟೆ ಬೆಂಗಳೂರು ಮ್ಯಾನೇಜ್ಮೆಂಟ್ ಐಪಿಎಲ್ 2023 ರಲ್ಲಿ ಮರಾಠಿ ಕಾಮೆಂಟ್ರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೇದಾರ್ ಜಾಧವ್ ಅವರನ್ನು ಆಯ್ಕೆ ಮಾಡಿದೆ. ಇವರು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
7 / 7
ಆರ್ಸಿಬಿ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ನೆಮ್ಮದಿ ತಂದಿದೆ. ಜೋಶ್ ಹೇಜ್ಲೆವುಡ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ. ಆದರೆ, ಬ್ಯಾಟಿಂಗ್ನಲ್ಲಿ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ. ಇದೀಗ ಜಾಧವ್ ಆಗಮನದಿಂದ ಬ್ಯಾಟಿಂಗ್ ವಿಭಾಗ ಯಾವರೀತಿ ಬದಲಾಗುತ್ತೆ ನೋಡಬೇಕಿದೆ.