IPL 2023: 9 ಪಂದ್ಯ 6 ಬ್ಯಾಟರ್ಸ್​: ಇದುವೇ RCB ತಂಡದ ಅತೀ ದೊಡ್ಡ ಸಮಸ್ಯೆ..!

IPL 2023 Kannada: ಆರ್​ಸಿಬಿ 9 ಪಂದ್ಯಗಳಲ್ಲಿ 6 ಬ್ಯಾಟರ್​ಗಳನ್ನು ಕಣಕ್ಕಿಳಿಸಿದರೂ 3ನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಾಣಲು ಮಾತ್ರ ಸಾಧ್ಯವಾಗಿಲ್ಲ.

| Updated By: ಝಾಹಿರ್ ಯೂಸುಫ್

Updated on: May 04, 2023 | 10:07 PM

IPL 2023: ಐಪಿಎಲ್ ಸೀಸನ್ 16 ರಲ್ಲಿ 9 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವುದು ಕೇವಲ 5 ಪಂದ್ಯಗಳು ಮಾತ್ರ. ಪ್ಲೇಆಫ್ ಹಂತಕ್ಕೆ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯಗಳಲ್ಲಿ ಆರ್​ಸಿಬಿ ತಂಡವು ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

1 / 11
ಏಕೆಂದರೆ ಆರ್​ಸಿಬಿ ಆಡಿರುವ 9 ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ​6 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ ಮ್ಯಾಕ್ಸ್​ವೆಲ್ ಅವರನ್ನು ಹೊರತುಪಡಿಸಿದರೆ ಯಾವುದೇ ಆಟಗಾರ ಯಶಸ್ವಿಯಾಗಿಲ್ಲ ಎಂಬುದು ಅಚ್ಚರಿ.

2 / 11
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 3ನೇ ಕ್ರಮಾಂಕದಲ್ಲಿ ಆಡಿದ್ದರು. ಈ ವೇಳೆ ಡಿಕೆ ಶೂನ್ಯಕ್ಕೆ ಔಟಾಗಿದ್ದರು.

3 / 11
ಇದಾದ ಬಳಿಕ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಮೈಕೆಲ್ ಬ್ರೇಸ್​ವೆಲ್ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಬ್ರೇಸ್​ವೆಲ್ 18 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 19 ರನ್​ ಮಾತ್ರ.

4 / 11
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ ಮ್ಯಾಕ್ಸಿ ಕೇವಲ 29 ಎಸೆತಗಳಲ್ಲಿ 59 ರನ್ ಸಿಡಿಸಿದ್ದರು.

5 / 11
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಹಿಪಾಲ್ ಲೋಮ್ರರ್​ ಅವರನ್ನು ಆರ್​ಸಿಬಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತು. ಆದರೆ 18 ಎಸೆತಗಳಲ್ಲಿ 26 ರನ್ ಬಾರಿಸಿ ಲೋಮ್ರರ್ ಕೂಡ ನಿರಾಸೆ ಮೂಡಿಸಿದ್ದರು. ಹಾಗೆಯೇ ಸಿಎಸ್​ಕೆ ವಿರುದ್ಧ ಲೋಮ್ರರ್ ಶೂನ್ಯಕ್ಕೆ ಔಟಾಗಿದ್ದರು.

6 / 11
ಪಂಜಾಬ್ ಕಿಂಗ್ಸ್ ವಿರುದ್ಧ ಮತ್ತೆ 3ನೇ ಕ್ರಮಾಂಕದಲ್ಲಿ ಬದಲಾವಣೆ ತಂಡ ಆರ್​ಸಿಬಿ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಕಣಕ್ಕಿಳಿಸಿತು. ಆದರೆ ಈ ಪಂದ್ಯದಲ್ಲಿ ಮ್ಯಾಕ್ಸಿ ಶೂನ್ಯಕ್ಕೆ ಔಟಾಗಿದ್ದರು.

7 / 11
ಇದಾದ ಬಳಿಕ 3ನೇ ಕ್ರಮಾಂಕವು ಶಹಬಾಝ್ ಅಹ್ಮದ್ ಪಾಲಾಯಿತು. ರಾಜಸ್ಥಾನ್ ರಾಯಲ್ಸ್ ವಿರುದ್ದ ಒನ್​ಡೌನ್ ಬಳಿಕ ಕಣಕ್ಕಿಳಿದ ಶಹಬಾಝ್ ಕಲೆಹಾಕಿದ್ದು ಕೇವಲ 2 ರನ್​ ಮಾತ್ರ.

8 / 11
ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 9 ರನ್​ ಮಾತ್ರ.

9 / 11
ಅಂದರೆ ಆರ್​ಸಿಬಿ 9 ಪಂದ್ಯಗಳಲ್ಲಿ 6 ಬ್ಯಾಟರ್​ಗಳನ್ನು ಕಣಕ್ಕಿಳಿಸಿದರೂ 3ನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಾಣಲು ಮಾತ್ರ ಸಾಧ್ಯವಾಗಿಲ್ಲ. ಇಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಯಶಸ್ವಿಯಾದರೂ, ಅವರು ಮೇಲಿನ ಕ್ರಮಾಂಕದಲ್ಲಿ ಆಡಿದರೆ ನಾಲ್ಕನೇ ಸ್ಥಾನದಲ್ಲಿ ಮತ್ತದೇ ಸಮಸ್ಯೆ ಎದುರಾಗಲಿದೆ. ಹೀಗಾಗಿ ಆರ್​ಸಿಬಿ ಮ್ಯಾಕ್ಸ್​ವೆಲ್ ಅವರನ್ನು 4ನೇ ಕ್ರಮಾಂಕದಲ್ಲಿ ಮುಂದುವರೆಸುತ್ತಿದೆ.

10 / 11
ಇತ್ತ ಮ್ಯಾಕ್ಸ್​ವೆಲ್ ಅವರನ್ನು ಹೊರತುಪಡಿಸಿದರೆ, 5 ಬ್ಯಾಟರ್​ಗಳು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕಲೆಹಾಕಿದ ಒಟ್ಟು ಸ್ಕೋರ್ 56 ರನ್​ ಮಾತ್ರ. ಆರ್​ಸಿಬಿ ಆಟಗಾರರ ಇಂತಹದೊಂದು ಕಳಪೆ ಬ್ಯಾಟಿಂಗ್ ಪ್ರದರ್ಶನ ಇದೀಗ ತಂಡದ ಚಿಂತೆಯನ್ನು ಹೆಚ್ಚಿಸಿದೆ.

11 / 11
Follow us