Updated on: May 04, 2023 | 6:42 PM
16ನೇ ಆವೃತ್ತಿಯ ಐಪಿಎಲ್ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ. ತಂಡವೊಂದು 200ಕ್ಕೂ ಹೆಚ್ಚು ರನ್ ಗಳಿಸಿ ಸೋಲನುಭವಿಸಿರುವುದು ಒಂದು ಸೀಸನ್ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹಿಂದೆಂದೂ ಸಂಭವಿಸಿಲ್ಲ.
ಈ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಬಾರಿಸಿದ್ದರೂ 5 ತಂಡಗಳು ಸೋತಿವೆ. ಇತ್ತೀಚೆಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ 214 ರನ್ ಟಾರ್ಗೆಟ್ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡ ಹೀನಾಯ ಸೋಲನುಭವಿಸಿತ್ತು. ಮುಂಬೈ ಇಂಡಿಯನ್ಸ್ ಈ ಗುರಿಯನ್ನು 7 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು.
ಈ ತಂಡಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಮುಂಬೈ ಇಂಡಿಯನ್ಸ್ ವಿರುದ್ಧ 212 ರನ್ಗಳ ಗುರಿ ನೀಡಿತ್ತು. ಆದರೂ ಕೂಡ ಆ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಸೋಲಬೇಕಾಯಿತು.
ಇದೇ ಐಪಿಎಲ್ನಲ್ಲಿ ಏಪ್ರಿಲ್ 10 ರಂದು ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, ಲಕ್ನೋ ವಿರುದ್ಧ 212 ರನ್ಗಳ ಗುರಿ ನಿಗಧಿ ಮಾಡಿತ್ತು. ಈ ಗುರಿಯನ್ನು ಲಕ್ನೋ ಕೊನೆಯ ಎಸೆತದಲ್ಲಿ ಮುಟ್ಟಿತ್ತು.
ಏಪ್ರಿಲ್ 9 ರಂದು ಗುಜರಾತ್ ಟೈಟಾನ್ಸ್ ತಂಡ ಕೆಕೆಆರ್ ವಿರುದ್ಧ 204 ರನ್ ಬಾರಿಸಿತ್ತಾದರೂ ಸೋಲನುಭವಿಸಿತ್ತು.
ಹಾಗೆಯೇ ಏಪ್ರಿಲ್ 30 ರಂದು 200 ರನ್ ಗಳಿಸಿದ್ದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ವಿರುದ್ಧ ಸೋಲೊಪ್ಪಿಕೊಂಡಿತ್ತು.