- Kannada News Photo gallery Cricket photos IPL 2023 MS Dhoni has the Highest strike rate in this year IPL
IPL 2023: ಧೋನಿ ಮುಂದೆ ರೋಹಿತ್, ಕೊಹ್ಲಿ ಲೆಕ್ಕಕ್ಕಿಲ್ಲ! ಸ್ಟ್ರೈಕ್ ರೇಟ್ ವಿಚಾರದಲ್ಲಿ ಯಾರು ಬೆಸ್ಟ್ ಗೊತ್ತಾ?
IPL 2023: ಇದುವರೆಗೆ ಧೋನಿ ಈ ಐಪಿಎಲ್‌ನಲ್ಲಿ ಒಟ್ಟು 10 ಪಂದ್ಯಗಳನ್ನಾಡಿದ್ದು, ಕೇವಲ 6 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಆಡಿದ್ದಾರೆ. ಇದರಲ್ಲಿ 211.42ರ ಸ್ಟ್ರೇಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಧೋನಿ 74 ರನ್ ಕಲೆ ಹಾಕಿದ್ದಾರೆ.
Updated on: May 04, 2023 | 4:42 PM

ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ ಆಟಗಾರರ ಬಗ್ಗೆ ಹೇಳ ಹೊರಟರೆ, ಸಾಮಾನ್ಯವಾಗಿ ಎಲ್ಲರೂ ವಿದೇಶಿ ಆಟಗಾರರ ಕಡೆ ಬೆರಳು ಮಾಡುವುದು ಹೆಚ್ಚು. ಆದರೆ ಈ ಆವೃತ್ತಿಯಲ್ಲಿ ಕಥೆಯೇ ಬೇರೆಯದ್ದಾಗಿದೆ. ಯುವಕರನ್ನು ನಾಚಿಸುವಂತಹ ಪ್ರದರ್ಶನ ನೀಡಿರುವ 41 ವರ್ಷದ ಧೋನಿ ಈ ಬಾರಿ ಐಪಿಎಲ್‌ನಲ್ಲಿ ಆಡಿರುವ ಕೆಲವೇ ಕೆಲವು ಪಂದ್ಯಗಳಲ್ಲಿ ತನ್ನ ಸಾಮಥ್ಯ್ರವನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.

ಇದುವರೆಗೆ ಧೋನಿ ಈ ಐಪಿಎಲ್‌ನಲ್ಲಿ ಒಟ್ಟು 10 ಪಂದ್ಯಗಳನ್ನಾಡಿದ್ದು, ಕೇವಲ 6 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಆಡಿದ್ದಾರೆ. ಇದರಲ್ಲಿ 211.42ರ ಸ್ಟ್ರೇಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಧೋನಿ 74 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಕೇವಲ 2 ಬೌಂಡರಿಗಳು ಮತ್ತು 8 ಸಿಕ್ಸರ್ ಸೇರಿವೆ. ಅಂದರೆ ಬೌಂಡರಿಯಿಂದಲೇ ಧೋನಿ 56 ರನ್ ಬಾರಿಸಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಕೇವಲ ಇಬ್ಬರು ಮಾತ್ರ 200+ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅವರಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ ಅದರೆ ಮತ್ತೊಬ್ಬರು ರಾಹುಲ್ ತೆವಾಟಿಯಾ. 6 ಇನ್ನಿಂಗ್ಸ್‌ಗಳಲ್ಲಿ 63ಕಲೆ ಹಾಕಿರುವ ತೆವಾಟಿಯಾ 203.22 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

ಇನ್ನು ರಾಜಸ್ಥಾನ್ ಪರ ಆಡುತ್ತಿರುವ ಧ್ರುವ್ ಜುರೇಲ್ 191.30 ಸ್ಟ್ರೈಕ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಜಿಂಕ್ ರಹಾನೆ ನಾಲ್ಕನೇ ಸ್ಥಾನದಲ್ಲಿದ್ದು, ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ 190 ಸ್ಟ್ರೈಕ್‌ರೇಟ್‌ನೊಂದಿಗೆ 224 ರನ್ ಕಲೆಹಾಕಿದ್ದಾರೆ.

ಇನ್ನು ಆರ್ಸಿಬಿ ವಿಚಾರವಾಗಿ ಮಾತನಾಡಿದರೆ, ಆರೆಂಜ್ ಕ್ಯಾಪ್ ಪಡೆದುಕೊಂಡಿರುವ ನಾಯಕ ಫಾಫ್ ಡು ಪ್ಲೆಸಿಸ್ 159.58 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

ವಿರಾಟ್ ಕೊಹ್ಲಿಯ ವಿಚಾರಕ್ಕೆ ಬಂದರೆ, ರನ್ ಕಲೆಹಾಕುವಲ್ಲಿ ಮುಂದಿರುವ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಕೇವಲ 137.87 ಆಗಿದೆ. ಹೀಗಾಗಿ ಸ್ಟ್ರೈಕ್ ರೇಟ್ ವಿಚಾರದಲ್ಲಿ ಕೊಹ್ಲಿ 52ನೇ ಸ್ಥಾನದಲ್ಲಿದ್ದಾರೆ.

ಮುಂಬೈ ನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿಗಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದು, ಕೇವಲ 130 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ರನ್ ಬಾರಿಸಿದ್ದಾರೆ.



















