
ಭಾರತ ತಂಡದ ಸ್ಟಾರ್ ವೇಗದ ಬೌಲರ್ ದೀಪಕ್ ಚಹಾರ್ ಜೂನ್ 1 ರಂದು ಆಗ್ರಾದ ಪಂಚತಾರಾ ಹೋಟೆಲ್‌ನಲ್ಲಿ ವೈಭವದಿಂದ ವಿವಾಹವಾದರು. ದೀಪಕ್ ತಮ್ಮ ಬಹುದಿನಗಳ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ಸಪ್ತಪದಿ ತುಳಿದರು. ದೀಪಕ್-ಜಯಾ ಕುಟುಂಬಸ್ಥರು ಹಾಗೂ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಇಂದು ನಡೆದ ಆರತಕ್ಷತೆಯಲ್ಲಿ ಚಹಾರ್ ಅವರ ಅನೇಕ ಸಹ ಆಟಗಾರರು ಕಾಣಿಸಿಕೊಂಡರು.

ದೀಪಕ್ ಚಹಾರ್ ಮತ್ತು ಜಯಾ ಅವರ ಆರತಕ್ಷತೆ ದೆಹಲಿಯಲ್ಲಿ ನಡೆಯಿತು, ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅನೇಕ ಸ್ಟಾರ್ ಆಟಗಾರರು ಕಾಣಿಸಿಕೊಂಡರು. ಈ ಸಮಾರಂಭದಲ್ಲಿ ಒಂದು ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಪುನರ್ಮಿಲನ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಚಿತ್ರಗಳು ಸಾಕಷ್ಟು ವೈರಲ್ ಆಗುತ್ತಿವೆ.



Published On - 3:24 pm, Sat, 4 June 22