T20 World Cup 2024: ಜಿಯೋ ಸಿನಿಮಾ ಅಲ್ಲ; ಟಿ20 ವಿಶ್ವಕಪ್ ಪಂದ್ಯಗಳನ್ನು ಮೊಬೈಲ್‌ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ?

Updated on: May 23, 2024 | 9:09 PM

T20 World Cup 2024: ನೀವು ಮೊಬೈಲ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುವವರಾಗಿದ್ದರೆ, ನೀವು ಡಿಸ್ನಿ ಹಾಟ್ ಸ್ಟಾರ್‌ ಆ್ಯಪ್​​ಗೆ ಹೋಗಬೇಕಾಗುತ್ತದೆ. ಏಕೆಂದರೆ ಟಿ20 ವಿಶ್ವಕಪ್ ಪ್ರಸಾರದ ಹಕ್ಕನ್ನು ಡಿಸ್ನಿ ಹಾಟ್ ಸ್ಟಾರ್‌ ಖರೀದಿಸಿದೆ. ಉಳಿದಂತೆ ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

1 / 7
2024 ರ ಟಿ20 ವಿಶ್ವಕಪ್ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಟಿ20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗಲಿದೆಯಾದರೂ, ಭಾರತೀಯ ಕಾಲಮಾನದ ಪ್ರಕಾರ ಜೂನ್ 2 ರಿಂದ ಪಂದ್ಯಗಳು ಪ್ರಾರಂಭವಾಗಲಿವೆ. ಏಕೆಂದರೆ ಈ ವರ್ಷದ ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ.

2024 ರ ಟಿ20 ವಿಶ್ವಕಪ್ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಟಿ20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗಲಿದೆಯಾದರೂ, ಭಾರತೀಯ ಕಾಲಮಾನದ ಪ್ರಕಾರ ಜೂನ್ 2 ರಿಂದ ಪಂದ್ಯಗಳು ಪ್ರಾರಂಭವಾಗಲಿವೆ. ಏಕೆಂದರೆ ಈ ವರ್ಷದ ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ.

2 / 7

ಭಾರತದಲ್ಲಿನ ಸಮಯಕ್ಕೂ ಅಲ್ಲಿನ ಸಮಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಅದಕ್ಕಾಗಿಯೇ ಸಮಯದಲ್ಲಿ ವ್ಯತ್ಯಾಸವಿರಲಿದೆ. ಆದಾಗ್ಯೂ, ಲೀಗ್ ಆರಂಭಕ್ಕೂ ಮೊದಲು ಅಭ್ಯಾಸ ಪಂದ್ಯಗಳು ಇರುತ್ತವೆ, ಅಲ್ಲಿ ತಂಡಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸುತ್ತವೆ. ಈ ನಡುವೆ ಟಿ20 ವಿಶ್ವಕಪ್ ಪಂದ್ಯಗಳನ್ನು ಟಿವಿ ಹಾಗೂ ಮೊಬೈಲ್‌ನಲ್ಲಿ ಲೈವ್ ಆಗಿ ನೋಡುವುದು ಹೇಗೆ ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲಿ ಮೂಡತೊಡಗಿದೆ.

3 / 7

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳನ್ನು ನಾವು ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಆ್ಯಪ್​ನಲ್ಲಿ ನೋಡುತ್ತಿದ್ದೇವೆ. ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ನಲ್ಲಿ ವೀಕ್ಷಿಸುತ್ತಿದ್ದೇವೆ. ಆದರೆ ಟಿ20 ವಿಶ್ವಕಪ್ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ನೋಡಲು ಸಾಧ್ಯವಿಲ್ಲ.

4 / 7

ನೀವು ಮೊಬೈಲ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುವವರಾಗಿದ್ದರೆ, ನೀವು ಡಿಸ್ನಿ ಹಾಟ್ ಸ್ಟಾರ್‌ ಆ್ಯಪ್​​ಗೆ ಹೋಗಬೇಕಾಗುತ್ತದೆ. ಏಕೆಂದರೆ ಟಿ20 ವಿಶ್ವಕಪ್ ಪ್ರಸಾರದ ಹಕ್ಕನ್ನು ಡಿಸ್ನಿ ಹಾಟ್ ಸ್ಟಾರ್‌ ಖರೀದಿಸಿದೆ. ಉಳಿದಂತೆ ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

5 / 7

ಕ್ರಿಕೆಟ್ ಪ್ರಿಯರಿಗೆ ಸಂತಸದ ಸುದ್ದಿ ನೀಡಿರುವ ಡಿಸ್ನಿ ಹಾಟ್ ಸ್ಟಾರ್‌, ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ ಎಂದು ಘೋಷಿಸಿದೆ. ಇದರರ್ಥ ನೀವು ಇದಕ್ಕಾಗಿ ಚಂದದಾರರಾಗಬೇಕಿಲ್ಲ. ಅಂದರೆ ಮೊಬೈಲ್​ನಲ್ಲಿ ಪಂದ್ಯ ವೀಕ್ಷಿಸಲು ಡಿಸ್ನಿ ಹಾಟ್ ಸ್ಟಾರ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕೇ ಹೊರತು ಬೇರೇ ಯಾವುದೇ ರೀತಿಯಾಗಿ ಹಣ ಪಾವತಿಸಬೇಕಿಲ್ಲ.

6 / 7

ಪಂದ್ಯಗಳ ಸಮಯದ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಕೆಲವು ಪಂದ್ಯಗಳು ಬೆಳಿಗ್ಗೆ 6 ರಿಂದ ಪ್ರಾರಂಭವಾಗುತ್ತವೆ, ಕೆಲವು ಪಂದ್ಯಗಳು ಸಂಜೆ 8 ರಿಂದ ಪ್ರಾರಂಭವಾಗುತ್ತವೆ. ಒಂದು ವೇಳೆ ಟೀಮ್ ಇಂಡಿಯಾ ಸೆಮಿಫೈನಲ್ ಅಥವಾ ಫೈನಲ್‌ಗೆ ತಲುಪಿದರೆ, ಆ ಬಳಿಕ ಪಂದ್ಯ ಆರಂಭದ ಸಮಯ ಬದಲಾವಣೆಯಾಗಲಿದೆ. ಈ ಬಗ್ಗೆ ಆ ನಂತರ ಅಪ್​ಡೇಟ್ ನೀಡಲಾಗುತ್ತದೆ.

7 / 7

ಉಳಿದಂತೆ ಇಷ್ಟು ದಿನ ಜಿಯೋ ಸಿನಿಮಾದಲ್ಲಿ ಐಪಿಎಲ್ ನೋಡುತ್ತಿದ್ದ ನೀವು,​ ಜೂನ್ 26 ರ ನಂತರ ಜಿಯೋ ಸಿನಿಮಾ ಬದಲಿಗೆ ಡಿಸ್ನಿ ಹಾಟ್ ಸ್ಟಾರ್‌ಗೆ ಶಿಫ್ಟ್ ಆಗಬೇಕಾಗುತ್ತದೆ. ಇನ್ನೊಂದು ಸಂತಸದ ಸುದ್ದಿಯೆಂದರೆ ನೀವು ಅಭ್ಯಾಸ ಪಂದ್ಯಗಳನ್ನು ಸಹ ಲೈವ್ ಆಗಿ ವೀಕ್ಷಿಸಬಹುದು. ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಆ ನಂತರ ಟಿ20 ವಿಶ್ವಕಪ್ 2024 ರ ರೋಚಕ ಪ್ರಯಾಣ ಆರಂಭವಾಗಲಿದೆ.

Published On - 9:07 pm, Thu, 23 May 24

Loading...
Unable to load recommendations.
Follow Us