Duleep Trophy: ನಾಯಕತ್ವವನ್ನೂ ತಿರಸ್ಕರಿಸಿ ದೇಶೀ ಟೂರ್ನಿಯಿಂದ ಹಿಂದೆ ಸರಿದ ಇಶಾನ್ ಕಿಶನ್..!

|

Updated on: Jun 15, 2023 | 1:09 PM

Ishan Kishan, Duleep Trophy 2023: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದ ಭಾರತದ ಯುವ ಕ್ರಿಕೆಟಿಗ ಇಶಾನ್ ಕಿಶನ್ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

1 / 7
ಜೂನ್ 28 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯೊಂದಿಗೆ ಭಾರತದ ದೇಶೀ ಟೂರ್ನಿಗಳ ಸೀಸನ್​ಗೆ ಚಾಲನೆ ಸಿಗಲಿದೆ. ಮುಂದಿನ ತಿಂಗಳು ಭಾರತ, ವಿಂಡೀಸ್ ಪ್ರವಾಸ ಮಾಡುತ್ತಿರುವುದರಿಂದ ಅನೇಕ ಯುವ ಪ್ರತಿಭೆಗಳಿಗೆ ಈ ಪಂದ್ಯಾವಳಿ ಪ್ರಮುಖವಾಗಿದೆ. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಹಲವು ಆಟಗಾರರು ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಒಂದು ಅವಕಾಶವಾಗಿದೆ.

2 / 7
ಆದಾಗ್ಯೂ, ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದ ಭಾರತದ ಯುವ ಕ್ರಿಕೆಟಿಗ ಇಶಾನ್ ಕಿಶನ್ ಮಾತ್ರ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ವಾಸ್ತವವಾಗಿ ಕಿಶನ್ ಅವರನ್ನು ಪೂರ್ವ ವಲಯ ತಂಡದ ನಾಯಕನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು.

3 / 7
ಆದರೆ ಕಿಶನ್ ಯಾವುದೇ ಇಂಜುರಿ ಇಲ್ಲದೆ ಇಡೀ ಪಂದ್ಯಾವಳಿಯಿಂದ ಹಿಂದೆ ಸರಿದಿರುವುದು ಹಲವಾರು ಅನುಮಾನಕ್ಕೆ ದಾರಿಯಾಗಿದೆ. ಏಕೆಂದರೆ, ಈ ದೇಶೀ ಟೂರ್ನಿಯಲ್ಲಿ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದರೆ, ಅವರಿಗೆ ವಿಂಡೀಸ್ ಪ್ರವಾಸದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿತ್ತು. ಅಲ್ಲದೆ ಇವರೊಂದಿಗೆ ಡಬ್ಲ್ಯುಟಿಸಿ ಆಡಿದ್ದ ಭರತ್ ದಕ್ಷಿಣ ವಲಯ ತಂಡದ ಪರ ಆಡುತ್ತಿರುವಾಗ, ಕಿಶನ್ ಹಿಂದೆ ಸರಿದಿದ್ದು, ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ.

4 / 7
ಟೀಂ ಇಂಡಿಯಾದಲ್ಲಿ ಸಧ್ಯಕ್ಕೆ ವಿಕೆಟ್ ಕೀಪಿಂಗ್ ಜವಬ್ದಾರಿ ಹೊತ್ತಿರುವ ಕೆಎಸ್ ಭರತ್ ಅವರು ಇದುವರೆಗೆ ಆಡಿದ ಐದು ಟೆಸ್ಟ್‌ಗಳಲ್ಲಿ ಬ್ಯಾಟ್‌ನೊಂದಿಗೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಹೀಗಾಗಿ ಕಿಶನ್ ಕೆರಿಬಿಯನ್‌ನಲ್ಲಿ ಪಾದಾರ್ಪಣೆ ಮಾಡುವ ಎಲ್ಲಾ ಅವಕಾಶಗಳಿದ್ದವು.

5 / 7
ಇಶಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಅವರಿಗೆ ನಾಯಕತ್ವ ನೀಡಬಹುದೇ ಎಂದು ವಲಯ ಆಯ್ಕೆ ಸಮಿತಿ ಸಂಚಾಲಕ ದೇಬಾಶಿಶ್ ಚಕ್ರವರ್ತಿ ಅವರನ್ನು ಕೇಳಿದ್ದವು. ಆ ಬಳಿಕ ದೇಬಶಿಶ್ ಅವರು ಇಶಾನ್ ಅವರೊಂದಿಗೆ ಮಾತನಾಡಿ, ದೇಶೀ ಟೂರ್ನಿಯಲ್ಲಿ ಆಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಇಶಾನ್, ದುಲೀಪ್ ಟ್ರೋಫಿಯಲ್ಲಿ ಆಡುವುದಿಲ್ಲ ಎಂದಿದ್ದಾರೆ ಎಂಬುದನ್ನು ದೇಬಶಿಶ್ ನಮಗೆ ತಿಳಿಸಿದ್ದಾರೆ ಎಂದು ಪೂರ್ವ ವಲಯ ಆಯ್ಕೆ ಸಮಿತಿ ಹೇಳಿದೆ ಎಂದು ವರದಿಯಾಗಿದೆ.

6 / 7
ಕಿಶನ್ ದುಲೀಪ್ ಟ್ರೋಫಿಯಲ್ಲಿ ಆಡಲು ನಿರಾಕರಿಸಿದ್ದರಿಂದ, ಅಭಿಮನ್ಯು ಈಶ್ವರನ್ ಅವರನ್ನು ಪೂರ್ವ ವಲಯ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಈ ತಂಡದಲ್ಲಿ ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಿದ ರಿಯಾನ್ ಪರಾಗ್, ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್ ಮತ್ತು ಅಭಿಷೇಕ್ ಪೊರೆಲ್ ಅವರಂತಹ ಆಟಗಾರರೂ ಇದ್ದಾರೆ.

7 / 7
ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಶಂತನು ಮಿಶ್ರಾ, ಸುದೀಪ್ ಘರಾಮಿ, ರಿಯಾನ್ ಪರಾಗ್, ಎ. ಮಜುಂದಾರ್, ಬಿಪಿನ್ ಸೌರಭ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕೆ ಕುಶಾಗ್ರಾ (ವಿಕೆಟ್ ಕೀಪರ್), ಎಸ್ ನದೀಮ್ (ಉಪನಾಯಕ), ಶಹಬಾಜ್ ಅಹ್ಮದ್, ಮುಖೇಶ್ ಕುಮಾರ್, ಆಕಾಶ್ ದೀಪ್, ಅನುಕುಲ್ ರಾಯ್, ಎಂ ಮುರಾ ಸಿಂಗ್, ಇಶಾನ್ ಪೊರೆಲ್.