17 ವರ್ಷಗಳ ನಂತರ ಪಾಕ್ ನೆಲಕ್ಕೆ ಕಾಲಿಟ್ಟ ಇಂಗ್ಲೆಂಡ್ ತಂಡ; ಆಂಗ್ಲರಿಗೆ ಪೊಲೀಸ್ ಸರ್ಪಗಾವಲು

Edited By:

Updated on: Sep 15, 2022 | 9:39 PM

PAK vs ENG: ಕಳೆದ ವರ್ಷ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಈ ಸರಣಿಯನ್ನು ಆಡಬೇಕಿತ್ತು. ಆದರೆ ಭದ್ರತೆಯ ಕೊರತೆಯಿಂದಾಗಿ ಇಸಿಬಿ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿತ್ತು.

1 / 6
2005ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟಿತು. ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ 7 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

2005ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟಿತು. ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ 7 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

2 / 6

ಜೋಸ್ ಬಟ್ಲರ್, ಮೊಯಿನ್ ಅಲಿರಾ ಇಂದು ಬೆಳಗ್ಗೆ ಚಾರ್ಟರ್ಡ್ ಫ್ಲೈಟ್ ಮೂಲಕ ಕರಾಚಿ ತಲುಪಿದ್ದಾರೆ. T20 ಸರಣಿಯು ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ.

3 / 6

ವಿಮಾನ ನಿಲ್ದಾಣದಿಂದ ಇಡೀ ತಂಡವನ್ನು ಬಿಗಿ ಭದ್ರತೆಯ ಮೂಲಕ ಬಸ್ ಮೂಲಕ ಕರಾಚಿಯ ಹೋಟೆಲ್‌ಗೆ ಕರೆತರಲಾಯಿತು. ಪಿಸಿಬಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

4 / 6

ವಿಶ್ವಕಪ್‌ಗೆ ಸಿದ್ಧತೆಯಾಗಿ ಬಾಬರ್ ಅಜಮ್ ತಂಡ ಇಂಗ್ಲೆಂಡ್ ವಿರುದ್ಧ ಈ ಸರಣಿಯನ್ನು ಆಡಲಿದೆ. ಎಲ್ಲಾ ಪಂದ್ಯಗಳು ಕರಾಚಿ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ.

5 / 6

ಕಳೆದ ವರ್ಷ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಈ ಸರಣಿಯನ್ನು ಆಡಬೇಕಿತ್ತು. ಆದರೆ ಭದ್ರತೆಯ ಕೊರತೆಯಿಂದಾಗಿ ಇಸಿಬಿ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿತ್ತು.

6 / 6

ಬಳಿಕ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಇಂಗ್ಲೆಂಡ್‌ಗೆ ಸಕಲ ಭದ್ರತೆ ನೀಡುವುದಾಗಿ ಅಭಯ ಹಸ್ತ ನೀಡಿದ್ದರು. ಆ ಬಳಿಕ ಇಂಗ್ಲೆಂಡ್ ತಂಡ ಪಾಕ್​ಗೆ ಬರಲು ಒಪ್ಪಿತು. ಈ ಹಿಂದೆ ಭದ್ರತಾ ಕಾರಣಗಳಿಂದಾಗಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಕೂಡ ಪಾಕಿಸ್ತಾನದಿಂದ ಮತ್ತೆ ದೇಶಕ್ಕೆ ಮರಳಬೇಕಾಯಿತು.

Published On - 9:39 pm, Thu, 15 September 22

Loading...
Unable to load recommendations.
Follow Us