ಇಂಗ್ಲೆಂಡ್ ತಂಡಕ್ಕೆ ಮೇಜರ್ ಸರ್ಜರಿ: ನಾಲ್ವರು ಸ್ಟಾರ್ ಆಟಗಾರರಿಗೆ ಗೇಟ್ ಪಾಸ್

|

Updated on: Aug 27, 2024 | 11:54 AM

England Squad: ಸೆಪ್ಟೆಂಬರ್ 11 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ತಂಡಗಳನ್ನು ಘೋಷಿಸಲಾಗಿದೆ. ಈ ತಂಡಗಳಲ್ಲಿ ಹೊಸಮುಖಗಳಾಗಿ ಜೋರ್ಡಾನ್ ಕಾಕ್ಸ್, ಜಾಕೋಬ್ ಬೆಥೆಲ್ ಡಾನ್ ಮೌಸ್ಲಿ ಜೋಶ್ ಹಲ್ ಮತ್ತು ಜಾನ್ ಟರ್ನರ್ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ನಾಲ್ವರು ಸ್ಟಾರ್ ಆಟಗಾರರು ಇಂಗ್ಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ.

1 / 7
ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಿಂದ ಸ್ಟಾರ್ ಆಟಗಾರರನ್ನು ಕೈ ಬಿಟ್ಟಿರುವುದು ವಿಶೇಷ. ಅಂದರೆ ಇಂಗ್ಲೆಂಡ್ ತಂಡದ ಖಾಯಂ ಸದಸ್ಯರಾಗಿದ್ದ ನಾಲ್ವರು ಆಟಗಾರರಿಗೆ ಮುಂಬರುವ ಸರಣಿಯಿಂದ ಗೇಟ್ ಪಾಸ್ ನೀಡಲಾಗಿದೆ. ಅಲ್ಲದೆ ಐವರು ಹೊಸ ಮುಖಗಳಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಣೆ ಹಾಕಿದೆ. ಅದರಂತೆ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿರುವ ಸ್ಟಾರ್ ಆಟಗಾರರು ಯಾರೆಂದರೆ...

2 / 7
ಜೋ ರೂಟ್: ಏಕದಿನ ವಿಶ್ವಕಪ್ 2023ರ ವೇಳೆ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜೋ ರೂಟ್ ಅವರನ್ನು ಮುಂಬರುವ ಸರಣಿಯಿಂದ ಕೈ ಬಿಡಲಾಗಿದೆ. ಇಂಗ್ಲೆಂಡ್ ಪರ 171	 ಏಕದಿನ ಪಂದ್ಯಗಳನ್ನಾಡಿರುವ ರೂಟ್ 16 ಶತಕಗಳೊಂದಿಗೆ 6522 ರನ್ ಕಲೆಹಾಕಿದ್ದಾರೆ. ಅಂದರೆ ಇಂಗ್ಲೆಂಡ್ ಪರ ಏಕದಿನ ಅತ್ಯಧಿಕ ರನ್ ಕಲೆಹಾಕಿದವರಲ್ಲಿ ರೂಟ್ 2ನೇ ಸ್ಥಾನದಲ್ಲಿದ್ದಾರೆ. ಇದಾಗ್ಯೂ 33 ವರ್ಷದ ಜೋ ರೂಟ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

3 / 7
ಮೊಯೀನ್ ಅಲಿ: ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಮೊಯೀನ್ ಅಲಿ ಕೂಡ ಏಕದಿನ ಮತ್ತು ಟಿ20 ತಂಡಗಳಿಂದ ಹೊರಬಿದ್ದಿದ್ದಾರೆ. 138 ಏಕದಿನ ಪಂದ್ಯಗಳನ್ನಾಡಿರುವ ಮೊಯೀನ್ 2355 ರನ್​ಗಳು ಹಾಗೂ 111 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ 1229 ರನ್ ಹಾಗೂ 51 ವಿಕೆಟ್ ಪಡೆದಿದ್ದಾರೆ. ಇದಾಗ್ಯೂ ಆಸೀಸ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ.

4 / 7
ಜಾನಿ ಬೈರ್​ಸ್ಟೋವ್: ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್​ಸ್ಟೋವ್ ಕೂಡ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ. 107 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿರುವ ಬೈರ್​ಸ್ಟೋವ್ 3868 ರನ್ ಕಲೆಹಾಕಿದ್ದಾರೆ. ಇನ್ನು ಟಿ20 ಕ್ರಿಕೆಟ್​ನಲ್ಲಿ 1671 ರನ್​ ಗಳಿಸಿದ್ದಾರೆ. ಇದಾಗ್ಯೂ ಆಸ್ಟ್ರೇಲಿಯಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗಳಿಂದ ಬೈರ್​ಸ್ಟೋವ್​ ಅವರನ್ನು ಕೈ ಬಿಡಲಾಗಿದೆ.

5 / 7
ಕ್ರಿಸ್ ಜೋರ್ಡನ್: ಇಂಗ್ಲೆಂಡ್ ತಂಡದ ಆಲ್​ರೌಂಡರ್ ಕ್ರಿಸ್ ಜೋರ್ಡನ್ ಅವರನ್ನು ಸಹ ಆಸ್ಟ್ರೇಲಿಯಾ ಸರಣಿಯಿಂದ ಹೊರಗಿಡಲಾಗಿದೆ. ಇಂಗ್ಲೆಂಡ್ ಪರ 96 ಟಿ20 ಪಂದ್ಯಗಳನ್ನಾಡಿರುವ ಜೋರ್ಡನ್ 453 ರನ್ ಹಾಗೂ 108 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಈ ಬಾರಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂಬುದು ವಿಶೇಷ.

6 / 7
ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೋಶ್ ಹಲ್, ವಿಲ್ ಜಾಕ್ಸ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮಿ ಸ್ಮಿತ್, ರೀಸ್ ಟೋಪ್ಲಿ, ಜಾನ್ ಟರ್ನರ್. (ಸಾಂದರ್ಭಿಕ ಚಿತ್ರ)

7 / 7
ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋರ್ಡನ್ ಕಾಕ್ಸ್, ಸ್ಯಾಮ್ ಕರನ್, ಜೋಶ್ ಹಲ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಮಹಮೂದ್, ಡಾನ್ ಮೌಸ್ಲಿ, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜಾನ್ ಟರ್ನರ್. (ಸಾಂದರ್ಭಿಕ ಚಿತ್ರ)