CSK vs RCB: ಸೋಲಿಗೆ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ನೀಡಿದ ಕಾರಣವೇನು ಗೊತ್ತೇ?: ಪೋಸ್ಟ್ ಮ್ಯಾಚ್ ಟಾಕ್ ಇಲ್ಲಿದೆ

|

Updated on: Mar 23, 2024 | 7:35 AM

Faf Du Plessis post match presentation, CSK vs RCB: ಐಪಿಎಲ್ 2024ರ ಮೊದಲ ಪಂದ್ಯದಲ್ಲೇ ಸಿಎಸ್​ಕೆ ವಿರುದ್ಧ ಸೋಲು ಕಂಡ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ಮಾತುಗಳನ್ನು ಆಡಿದ್ದಾರೆ. ಮುಖ್ಯವಾಗಿ ತಂಡದ ಸೋಲಿಗೆ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

1 / 6
ಹೊಸ ಅಧ್ಯಾಯ ಎಂದು ಹೇಳಿ ಐಪಿಎಲ್ 2024 ರಲ್ಲಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 176 ರನ್ ಗಳಿಸಿದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿಎಸ್​ಕೆ 6 ವಿಕೆಟ್​ಗಳ ಜಯ ಸಾಧಿಸಿತು.

2 / 6
ಆರ್​ಸಿಬಿಗೆ ಮತ್ತೊಮ್ಮೆ ಕಂಟಕವಾಗಿದ್ದು ಬೌಲರ್​ಗಳು. ಬ್ಯಾಟಿಂಗ್​ನಲ್ಲಿ ಡೆಪ್ತ್ ಇದ್ದರೂ ಆರ್​ಸಿಬಿ ಬೌಲಿಂಗ್ ದುರ್ಬಲ ಎಂಬುದು ಸಾಭೀತಾಯಿತು. ಹೇಳಿಕೊಳ್ಳುವಂತಹ ಸ್ಟಾರ್ ಬೌಲರ್ ತಂಡದಲ್ಲಿ ಇಲ್ಲ. ಆದರೆ, ತನ್ನ ಆಟಗಾರರನ್ನು ನಾಯಕ ಬಿಟ್ಟು ಕೊಡಲಿಲ್ಲ. ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ದಾರೆ ನೋಡಿ.

3 / 6
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನೀವು ಯಾವಾಗಲೂ ಆಡುವಾಗ, ಆರು ಓವರ್‌ಗಳ ನಂತರ ಸ್ವಲ್ಪ ಡಿಪ್ ಪಡೆಯುತ್ತೀರಿ. ಈ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ಚೆನ್ನೈ ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಅವರು ತಮ್ಮ ಸ್ಪಿನ್ನರ್‌ಗಳಿಂದ ಹಿಡಿತ ಸಾಧಿಸಿದರು ಎಂದು ಹೇಳಿದ್ದಾರೆ.

4 / 6
ಬಹುಶಃ ನಾವು ಸುಮಾರು 15 ರಿಂದ 20 ರನ್ ಕಡಿಮೆ ಹೊಡೆದೆವು, ಇದು ಸೋಲಿಗೆ ಕಾರಣವಾಯಿತು. ಪಿಚ್ ನಾವು ಮೊದಲ 10 ಓವರ್‌ಗಳಲ್ಲಿ ಆಡಿದಷ್ಟು ಕೆಟ್ಟದಾಗಿರಲಿಲ್ಲ. ಅವರು ಚೇಸಿಂಗ್‌ನಲ್ಲಿ ಮುಂದಿದ್ದರು, ನಾವು ಅವರನ್ನು ಕಟ್ಟಿ ಹಾಕಲು ಮತ್ತು ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಿದೆವು, ಆದರೆ ಕೊನೆಯಲ್ಲಿ ನಮ್ಮ ಬಳಿ ಸಾಕಷ್ಟು ರನ್ ಇರಲಿಲ್ಲ ಎಂಬುದು ಡುಪ್ಲೆಸಿಸ್ ಮಾತು.

5 / 6
ಈ ಪಿಚ್‌ನಲ್ಲಿ ಯಾವಾಗಲೂ ಮೊದಲು ಬ್ಯಾಟ್ ಮಾಡುವುದು ಉತ್ತಮ. ಕಳೆದ ವರ್ಷ, ಮೊದಲು ಬ್ಯಾಟ್ ಮಾಡಿದ ತಂಡಗಳು ಉತ್ತಮ ದಾಖಲೆ ಹೊಂದಿತ್ತು. ಚೆಂಡು ನಮ್ಮ ಸ್ಪಿನ್ನರ್‌ಗಳಿಗೆ ನೆರವಾಗುತ್ತಿತ್ತು. ದಿನೇಶ್ ಕಾರ್ತಿಕ್ ಉತ್ತಮ ಆಡಿದ್ದಾರೆ. ಹೆಚ್ಚು ಕ್ರಿಕೆಟ್ ಆಡದ ಕಾರ್ತಿಕ್ ಒಳ್ಳೆಯ ಕೊಡುಗೆ ನೀಡಿದ್ದಾರೆ. ಅಂತೆಯೆ ಅನುಜ್ ಭರವಸೆಯನ್ನು ತೋರಿಸಿದ್ದಾರೆ - ಫಾಫ್ ಡುಪ್ಲೆಸಿಸ್.

6 / 6
ಮೊದಲ ಪಂದ್ಯದಲ್ಲಿ ಸೋಲುಂಡ ಆರ್​ಸಿಬಿ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಬೇಕಿದೆ. ದ್ವಿತೀಯ ಪಂದ್ಯವನ್ನು ಫಾಫ್ ಪಡೆ ಪಂಜಾಬ್ ಕಿಂಗ್ಸ್ ವಿರುದ್ಧ ಮಾರ್ಚ್ 25 ಸೋಮವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

Published On - 7:34 am, Sat, 23 March 24