Faf Duplessis: ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಬೇಸರದ ಮಾತುಗಳನ್ನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್
DC vs RCB, IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನಾವು ಕಲೆಹಾಕಿದ ರನ್ ಸಾಕಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1 / 8
ಐಪಿಎಲ್ 2023 ರಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಪ್ರದರ್ಶನ ತೋರಿತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಕಳಪೆ ಬೌಲಿಂಗ್ ಪ್ರದರ್ಶಿಸಿದರೆ ವಾರ್ನರ್ ಪಡೆ 7 ವಿಕೆಟ್ಗಳ ಅಮೋಘ ಗೆಲುವು ಕಂಡಿತು.
2 / 8
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನಾವು ಕಲೆಹಾಕಿದ ರನ್ ಸಾಕಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯ ತುಂಬಾ ಕುತೂಹಲ ಕೆರಳಿಸಿತ್ತು. 185 ರನ್ ಗಳಿಸಿದರೆ ಅದು ಉತ್ತಮ ಮೊತ್ತ ಎಂದು ನಾನು ಅಂದುಕೊಂಡಿದ್ದೆ. ಆದರೆ, ಹಾಗಾಗಲಿಲ್ಲ ಎಂದು ಹೇಳಿದ್ದಾರೆ.
3 / 8
ನಮ್ಮ ಸ್ಪಿನ್ನರ್ಗಳ ಎಲ್ಲ ತಂತ್ರವನ್ನು ಇಬ್ಬನಿ ತಲೆಕೆಳಗಾಗಿಸಿತು. ಆದರೆ, ಡೆಲ್ಲಿ ಬ್ಯಾಟರ್ಗಳ ಪ್ರದರ್ಶನಕ್ಕೆ ಕೊಡುಗೆ ಸಲ್ಲಬೇಕು. ಸ್ಪಿನ್ನರ್ಗಳಿಗೆ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರು. ಡ್ಯೂ ಇದ್ದ ಸಂದರ್ಭ ಸರಿಯಾದ ಜಾಗದಲ್ಲಿ ಚೆಂಡನ್ನು ಎಸೆಯ ಬೇಕು ಎಂಬ ಬಗ್ಗೆ ನಿಮಗೆ ತಿಳಿದಿರಬೇಕು - ಫಾಫ್ ಡುಪ್ಲೆಸಿಸ್.
4 / 8
ನಾವು ಕೆಲವು ಕೆಟ್ಟ ಬಾಲ್ಗಳನ್ನು ಎಸೆದಿದ್ದೇವೆ, ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಕೊನೆಯ ಹಂತದ ವರೆಗೂ ಪಂದ್ಯವನ್ನು ಕೊಂಡೊಯ್ಯಲು ಸಾಧ್ಯವಾಗಲಿಲ್ಲ. 185 ಉತ್ತಮ ರನ್ ಎಂದು ಅಂದುಕೊಂಡಿದ್ದೆವು. ಆದರೆ, ಇದನ್ನು 200ರತ್ತ ಸಾಗಿಸಬೇಕಿತ್ತು. ಇಲ್ಲಿ ನಾವು ಎಡವಿದೆವು ಎಂಬುದು ಫಾಫ್ ಮಾತು.
5 / 8
ಮ್ಯಾಕ್ಸ್ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಉತ್ತಮ ಬ್ಯಾಟರ್. ಆದರೆ, ಅವನು ಫಾರ್ಮ್ನಲ್ಲಿದ್ದ ಕಾರಣ ಬೇಗನೆ ಮೂರನೇ ಕ್ರಮಾಂಕದಲ್ಲಿ ಕಳುಹಿಸಿದೆವು. ಅದು ಫೇಲ್ ಆಯಿತು. ಮಹಿಪಾಲ್ ಲುಮ್ರೂರ್ ಕಡೆಯಿಂದ ಅತ್ಯುತ್ತಮ ಆಟ ಬಂದಿದೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
6 / 8
ಸ್ಲೋ ಪಿಚ್ ಆಗಿದ್ದರಿಂದ ಬ್ಯಾಟಿಂಗ್ ಕಷ್ಟವಾಗುತ್ತಿತ್ತು. ಯಾವುದೇ ಪಂದ್ಯದಲ್ಲಿ ಮೊದಲ ಆರು ಓವರ್ಗಳು ಮುಖ್ಯವಾಗುತ್ತದೆ. ಆರಂಭದಲ್ಲಿ ಉತ್ತಮ ಅಡಿಪಾಯ ಹಾಕಿದರೆ ಪಂದ್ಯದಲ್ಲಿ ನೀವು ಯಶಸ್ಸು ಗಳಿಸಬಹುದು - ಫಾಫ್ ಡುಪ್ಲೆಸಿಸ್.
7 / 8
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 55 ರನ್, ಲುಮ್ರೂರ್ 29 ಎಸೆತಗಳಲ್ಲಿ ಅಜೇಯ 54 ಹಾಗೂ ಡುಪ್ಲೆಸಿಸ್ 32 ಎಸೆತಗಳಲ್ಲಿ 45 ರನ್ ಗಳಿಸಿದರು.
8 / 8
ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆದ 16.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿ ಗೆಲುವು ಕಂಡಿತು. ಪಿಲಿಪ್ ಸಾಲ್ಟ್ ಕೇವಲ 45 ಎಸೆತಗಳಲ್ಲಿ 8 ಫೋರ್, 6 ಸಿಕ್ಸರ್ ಸಿಡಿಸಿ 87 ರನ್ ಚಚ್ಚಿದರು. ರಿಲೀ ರುಸ್ಸೋ ಅಜೇಯ 35 ರನ್ ಗಳಿಸಿದರು.