ICC Teams 2023: ಐಸಿಸಿ ವರ್ಷದ ತಂಡಗಳಲ್ಲಿ ಒಬ್ಬನೇ ಒಬ್ಬ ಪಾಕ್ ಆಟಗಾರನಿಲ್ಲ! ಗೇಲಿ ಮಾಡಿದ ನೆಟ್ಟಿಗರು
ICC Teams 2023: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಮೂರು ಮಾದರಿಯ ಕ್ರಿಕೆಟ್ನ ವರ್ಷದ ತಂಡಗಳನ್ನು ಪ್ರಕಟಿಸಿದೆ. ಐಸಿಸಿ ಪ್ರಕಟಿಸಿರುವ ವಾರ್ಷಿಕ ತಂಡದಲ್ಲಿ ಒಬ್ಬನೇ ಒಬ್ಬ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಸ್ಥಾನ ಪಡೆದಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು ಪಾಕ್ ಆಟಗಾರರ ಕಾಲೆಳೆಯಲು ಆರಂಭಿಸಿದ್ದಾರೆ.
1 / 7
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಮೂರು ಮಾದರಿಯ ಕ್ರಿಕೆಟ್ನ ವರ್ಷದ ತಂಡಗಳನ್ನು ಪ್ರಕಟಿಸಿದೆ. ಐಸಿಸಿ ಪ್ರಕಟಿಸಿರುವ ವಾರ್ಷಿಕ ತಂಡದಲ್ಲಿ ಒಬ್ಬನೇ ಒಬ್ಬ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಸ್ಥಾನ ಪಡೆದಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು ಪಾಕ್ ಆಟಗಾರರ ಕಾಲೆಳೆಯಲು ಆರಂಭಿಸಿದ್ದಾರೆ.
2 / 7
ವಾಸ್ತವವಾಗಿ ಈ ವರ್ಷ ನಡೆದ ಏಷ್ಯಾಕಪ್, ಏಕದಿನ ವಿಶ್ವಕಪ್ ಸೇರಿದಂತೆ ಪ್ರಮುಖ ಈವೆಂಟ್ಗಳ ಪಾಕ್ ತಂಡ ಸಪ್ಪೆ ಪ್ರದರ್ಶನ ನೀಡಿದೆ. ಹಾಗೆಯೇ ವಿಶ್ವಕಪ್ ಮುಗಿದ ಬಳಿಕ ಆಡಿದ ಎರಡೂ ಸರಣಿಗಳಲ್ಲೂ ಪಾಕ್ ತಂಡ ಹೀನಾಯ ಸೋಲನುಭವಿಸಿದೆ.
3 / 7
ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 4-1 ಅಂತರದ ಸೋಲನ್ನು ಎದುರಿಸಬೇಕಾಯಿತು. ಇದರಿಂದಾಗಿ ಐಸಿಸಿ ತಂಡದಲ್ಲಿ ಪಾಕಿಸ್ತಾನದ ಯಾವೊಬ್ಬ ಆಟಗಾರನೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
4 / 7
2023 ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಷ್ಟು ಉತ್ತಮವಾಗಿರಲಿಲ್ಲ. ಈ ವರ್ಷ ಆಡಿದ ಬಹುತೇಕ ಸರಣಿಗಳಲ್ಲಿ ತಂಡ ಸೋಲು ಕಂಡಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಕೂಡ ಪಾಕಿಸ್ತಾನ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಇದಾದ ನಂತರ ಬಾಬರ್ ಆಝಂ ನಾಯಕತ್ವವನ್ನೂ ಕಳೆದುಕೊಂಡರು.
5 / 7
ಈಗ 2024 ರ ಆರಂಭವು ಪಾಕಿಸ್ತಾನ ತಂಡಕ್ಕೆ ತುಂಬಾ ಕೆಟ್ಟದಾಗಿದೆ. ಹೊಸ ವರ್ಷದ ಆರಂಭದಲ್ಲಿ ಪಾಕಿಸ್ತಾನ ತಂಡ ಇದುವರೆಗೆ ಆಡಿದ ಎರಡು ಸರಣಿಗಳನ್ನು ಕಳೆದುಕೊಂಡಿದೆ. ಇದೀಗ ಐಸಿಸಿ ತಂಡದಲ್ಲಿ ಪಾಕಿಸ್ತಾನದ ಯಾವೊಬ್ಬ ಆಟಗಾರನೂ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಂಡವನ್ನು ಗೇಲಿ ಮಾಡಲಾಗುತ್ತಿದೆ.
6 / 7
ಇತ್ತೀಚೆಗಷ್ಟೇ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಿತ್ತು. ಈ ಸರಣಿಯಲ್ಲಿ ಪಾಕಿಸ್ತಾನ ತಂಡ ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಪಾಕಿಸ್ತಾನ ತಂಡ ಕೊನೆಯ ಪಂದ್ಯವನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಇದರಿಂದಾಗಿ ಪಾಕಿಸ್ತಾನ ತಂಡ 4-1 ಅಂತರದಲ್ಲಿ ಸರಣಿಯಲ್ಲಿ ಸೋಲು ಅನುಭವಿಸಬೇಕಾಯಿತು.
7 / 7
ಇದೆಲ್ಲದರ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಕೋಲಾಹಲ ಎದ್ದಿದ್ದು, ಮಂಡಳಿಯ ಹಾಲಿ ಮುಖ್ಯಸ್ಥ ಝಾಕಾ ಅಶ್ರಫ್ ತಂಡದ ಕಳಪೆ ಪ್ರದರ್ಶನಕ್ಕೆ ಬೇಸತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗೆಯೇ ಪ್ರಮುಖ ಮೂವರು ಕೋಚ್ಗಳು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.