IND vs PAK: ಭಾರತ- ಪಾಕ್ ತಂಡದ ಪ್ರಮುಖ ಆಟಗಾರರ ಫೇವರಿಟ್ ಆಹಾರಗಳಿವು

Edited By:

Updated on: Aug 22, 2022 | 3:02 PM

Asia Cup 2022: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಹಾರದ ಕ್ರಮದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸುವ ಕ್ರಮವನ್ನು ಕೊಹ್ಲಿ ಅಳವಡಿಸಿಕೊಂಡಿದ್ದಾರೆ.

1 / 6
ಏಷ್ಯಾಕಪ್ (ಏಷ್ಯಾ ಕಪ್ 2022) ಜ್ವರ ಎಲ್ಲೆಡೆ ಹಬ್ಬಲು ಆರಂಭವಾಗಿದ್ದು, ಟೂರ್ನಿಯೂ ಆಗಸ್ಟ್ 27 ರಿಂದ ಪ್ರಾರಂಭವಾಗುತ್ತಿದೆ. ಎಲ್ಲಾ ದೊಡ್ಡ ತಂಡಗಳು ಈ ಪಂದ್ಯಾವಳಿಗಾಗಿ ತಮ್ಮ ಆಟಗಾರರ ಹೆಸರನ್ನು ಘೋಷಿಸಿದ್ದು, ಸಕಲ ತಯಾರಿಯಲ್ಲಿ ತೊಡಗಿವೆ. ಅದರಲ್ಲೂ ಭಾರತ- ಪಾಕ್ ನಡುವಿನ ಕ್ರಿಕೆಟ್ ಕದನಕ್ಕೆ ಎಲ್ಲ ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಪಂದ್ಯಕ್ಕೂ ಮೊದಲು ಈ ಎರಡು ತಂಡದ ಕೆಲವು ಪ್ರಮುಖ ಆಟಗಾರರ ಆಹಾರ ಕ್ರಮದ ಬಗ್ಗೆ ನಾವೀಗ ನಿಮಗೆ ಹೇಳಲಿದ್ದೇವೆ.

2 / 6

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಹಾರದ ಕ್ರಮದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸುವ ಕ್ರಮವನ್ನು ಕೊಹ್ಲಿ ಅಳವಡಿಸಿಕೊಂಡಿದ್ದಾರೆ. ಕೊಹ್ಲಿ ಮೇನ್​ನಲ್ಲಿ ಹೆಚ್ಚಾಗಿ ತರಕಾರಿಗಳು, ಮೊಟ್ಟೆಗಳು ಸೇರಿದಂತೆ ಹಲವು ಆರೋಗ್ಯಕರ ಆಹಾರಗಳು ಒಳಗೊಂಡಿರುತ್ತವೆ. ಇದನ್ನು ಸ್ವತಃ ಕೊಹ್ಲಿಯೇ ತಮ್ಮ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಬಾರಿ ಹಂಚಿಕೊಂಡಿದ್ದಾರೆ.

3 / 6

ಪಾಕಿಸ್ತಾನದ ನಾಯಕ ಬಾಬರ್ ಅಜಮ್​ಗೆ ಬಿರಿಯಾನಿ ಎಂದರೆ ಬಲು ಅಚ್ಚುಮೆಚ್ಚು. ಅಜಮ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, T20 ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಮೆರೆಯುತ್ತಿದ್ದಾರೆ.

4 / 6

ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ವಡಾಪಾವ್ ಎಂದರೆ ಪಂಚಪ್ರಾಣ. ರೋಹಿತ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಪ್ರತಿದಿನ ವಡಾಪಾವ್ ತಿನ್ನುತ್ತಿದ್ದರು ಎಂಬುದನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದರು.

5 / 6

ಪಾಕಿಸ್ತಾನದ ಬ್ಯಾಟ್ಸ್‌ಮನ್ ಇಮಾಮ್-ಉಲ್-ಹಕ್ ಕೂಡ ತಮ್ಮ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆವಹಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಹಣ್ಣು ಮತ್ತು ಮೊಸರು ಮಾತ್ರ ತಿನ್ನುವ ಇಮಾಮ್, ಮುಲ್ತಾನ್ ಕಾ ಸೋಹನ್ ಹಲ್ವಾ ಮತ್ತು ಪಾನಿ ಪುರಿಯನ್ನು ಸಹ ಹೆಚ್ಚು ಇಷ್ಟಪಡುತ್ತಾರೆ.

6 / 6

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆ ಸೇವಿಸಿದ್ದರೆ, ಅವರ ದಿನನಿತ್ಯದ ಆಹಾರದಲ್ಲಿ ಚಿಕನ್ ಮತ್ತು ತರಕಾರಿಗಳು ಇದ್ದೆ ಇರುತ್ತವೆ. ಆದರೆ ಪಾಂಡ್ಯಗೆ ಖಿಚಡಿ ಎಂದರೆ ಬಹಳ ಇಷ್ಟ.

Published On - 3:02 pm, Mon, 22 August 22

Loading...
Unable to load recommendations.
Follow Us