RCB ಪರ 3 ವರ್ಷ ಬೆಂಚ್ ಕಾದಿದ್ದ ಫಿನ್ ಅಲೆನ್

Updated on: Mar 05, 2026 | 12:08 PM

Finn Allen: ಟಿ20 ವಿಶ್ವಕಪ್​ ಮೂಲಕ ಫಿನ್ ಅಲೆನ್ ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ ಸೌತ್ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ. ಇಂಟ್ರೆಸ್ಟಿಂಗ್ ವಿಷಯ ಎಂದರೆ ಇದೇ ಫಿನ್ ಅಲೆನ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಇದಾಗ್ಯೂ ಅವರಿಗೆ ಮೂರು ವರ್ಷಗಳ ಕಾಲ ಒಂದೇ ಒಂದು ಚಾನ್ಸ್​ ನೀಡಿರಲಿಲ್ಲ..!

1 / 5
ಅದು,  ಮಾರ್ಚ್ 10, 2021... ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಹೀಗಾಗಿ ಅವರು ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಅತ್ತ ನ್ಯೂಝಿಲೆಂಡ್ ಟಿ20 ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಫಿನ್ ಅಲೆನ್​ಗೆ ಅದೃಷ್ಟ ಖುಲಾಯಿಸಿತು. ಜೋಶ್ ಫಿಲಿಪೆ ಸ್ಥಾನದಲ್ಲಿ ನ್ಯೂಜಿಲೆಂಡ್​ನ ಯುವ ಆಟಗಾರ ಆರ್​ಸಿಬಿ ತಂಡಕ್ಕೆ ಆಯ್ಕೆಯಾದರು.

2 / 5
ಹೀಗೆ ಬದಲಿಯಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದ ಫಿನ್ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು ಎಂದರೆ ನಂಬಲೇಬೇಕು. ಅಂದರೆ ಅಲೆನ್​ಗೆ ಒಂದೇ ಒಂದು ಪಂದ್ಯವಾಡಲು ಆರ್​ಸಿಬಿ ಅವಕಾಶ ನೀಡಿಲ್ಲ ಎಂಬುದೇ ಅಚ್ಚರಿ. ಇದಾಗ್ಯೂ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತಿದ್ದರು, ಆದರೆ ಚಾನ್ಸ್ ಮಾತ್ರ ನೀಡುತ್ತಿರಲಿಲ್ಲ.

3 / 5
ಆ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಝಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರು. ವಿವಿಧ ಲೀಗ್​ಗಳಲ್ಲೂ ಅಬ್ಬರಿಸಿದ್ದರು. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಕೂಡ ಆಡಿದ್ದರು. ಇದಾಗ್ಯೂ ಐಪಿಎಲ್​ಗೆ ಬಂದರೆ ಬೆಂಚ್ ಕಾಯುವುದೇ ಬಂತು.

4 / 5
ಅಚ್ಚರಿ ಎಂದರೆ ಈ ಮೂರು ವರ್ಷಗಳ ನಡುವೆ ಆರ್​ಸಿಬಿ ತಂಡದ ಹಲವು ಆಟಗಾರರು ವಿಫಲರಾದರೂ ಒಂದೇ ಒಂದು ಪಂದ್ಯದಲ್ಲಿ ಅಲೆನ್​ಗೆ ಚಾನ್ಸ್​ ನೀಡಿಲ್ಲ ಎಂಬುದು. ಅದರಲ್ಲೂ 2022 ಮತ್ತು 2023 ರಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆರ್​​ಸಿಬಿ ಸತತ ವೈಫಲ್ಯ ಅನುಭವಿಸಿದರೂ ಟೀಮ್ ಬ್ಯಾಟಿಂಗ್​ ಲೈನಪ್​ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿರಲಿಲ್ಲ. ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಲೆನ್​ ಅವರನ್ನು ಕಣಕ್ಕಿಳಿಸಲು ಅವಕಾಶ ಇದ್ದರೂ, ಅಂತಹ ಪ್ರಯೋಗಕ್ಕೂ ಆರ್​ಸಿಬಿ ಮುಂದಾಗಿರಲಿಲ್ಲ.

5 / 5
ಕುತೂಹಲಕಾರಿ ವಿಷಯ ಎಂದರೆ ಈ ಮೂರು ಸೀಸನ್​ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 45 ಪಂದ್ಯಗಳನ್ನಾಡಿತ್ತು. ಅಂದರೆ ಫಿನ್ ಅಲೆನ್ ಬರೋಬ್ಬರಿ 45 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ 2024 ರಲ್ಲಿ ಫಿನ್ ಅಲೆನ್ ಆರ್​ಸಿಬಿ ತಂಡದಿಂದ ಹೊರಬರುವ ಮೂಲಕ ಈ ಕಾಯುವಿಕೆಗೆ ಬ್ರೇಕ್ ಹಾಕಿದರು. ಇದೀಗ ಅಲೆನ್ ಕೊಲ್ಕತ್ತಾ ನೈಟ್ ರೈಡರ್ಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಕೆಕೆಆರ್ ಪರ ಅಲೆನ್ ಅಬ್ಬರವನ್ನು ನಿರೀಕ್ಷಿಸಬಹುದು.

Follow Us