RCB: ‘ನಂಬಲಸಾಧ್ಯ’; ಕಿಂಗ್ ಕೊಹ್ಲಿ- ಕ್ವೀನ್ ಸ್ಮೃತಿ ನಡುವೆ ಎಷ್ಟೊಂದು ಕಾಕತಾಳೀಯ..!

Updated on: Mar 01, 2024 | 9:17 PM

Smriti Mandhana and Virat Kohli: ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ ಅವರ ಹೆಸರನ್ನು ಕೆಳದವರಿಲ್ಲ. ಒಬ್ಬರು ಪುರುಷ ಕ್ರಿಕೆಟ್​ನ ರನ್ ಮಷಿನ್ ಎನಿಸಿಕೊಂಡರೆ, ಇನ್ನೊಬ್ಬರು ಮಹಿಳಾ ಕ್ರಿಕೆಟ್​ನ ಬೆನ್ನೇಲುಬು. ಇಬ್ಬರೂ ಕೂಡ ತಮ್ಮ ತಮ್ಮ ಆಟದಿಂದ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದವರು.

1 / 6
ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ ಅವರ ಹೆಸರನ್ನು ಕೆಳದವರಿಲ್ಲ. ಒಬ್ಬರು ಪುರುಷ ಕ್ರಿಕೆಟ್​ನ ರನ್ ಮಷಿನ್ ಎನಿಸಿಕೊಂಡರೆ, ಇನ್ನೊಬ್ಬರು ಮಹಿಳಾ ಕ್ರಿಕೆಟ್​ನ ಬೆನ್ನೇಲುಬು. ಇಬ್ಬರೂ ಕೂಡ ತಮ್ಮ ತಮ್ಮ ಆಟದಿಂದ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದವರು.

ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ ಅವರ ಹೆಸರನ್ನು ಕೆಳದವರಿಲ್ಲ. ಒಬ್ಬರು ಪುರುಷ ಕ್ರಿಕೆಟ್​ನ ರನ್ ಮಷಿನ್ ಎನಿಸಿಕೊಂಡರೆ, ಇನ್ನೊಬ್ಬರು ಮಹಿಳಾ ಕ್ರಿಕೆಟ್​ನ ಬೆನ್ನೇಲುಬು. ಇಬ್ಬರೂ ಕೂಡ ತಮ್ಮ ತಮ್ಮ ಆಟದಿಂದ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದವರು.

2 / 6

ಈ ಇಬ್ಬರೂ ಭಾರತದ ಟಿ20 ಲೀಗ್​ನಲ್ಲಿ (ಐಪಿಎಲ್, ಡಬ್ಲ್ಯುಪಿಎಲ್) ಕರ್ನಾಟಕದ ಫ್ರಾಂಚೈಸಿಯಾದ ಆರ್​ಸಿಬಿ ಪರ ಕಣಕ್ಕಿಳಿಯುತ್ತಾರೆ. ಈ ಇಬ್ಬರು ಆರ್​ಸಿಬಿ ಪರ ಕಣಕ್ಕಿಳಿಯುವುದಲ್ಲದೆ, ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ.

3 / 6

ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ಇಬ್ಬರ ಜರ್ಸಿ ಸಂಖ್ಯೆ 18 ಆಗಿದೆ. ಇಬ್ಬರೂ ಆಟಗಾರರು ಬೆಂಗಳೂರು ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಡುತ್ತಿದ್ದಾರೆ.

4 / 6

ಬಹಳ ಮುಖ್ಯವಾದದ್ದು.. 2008 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡ ವಿರಾಟ್ ಕೊಹ್ಲಿ ಆ ಆವೃತ್ತಿಯಲ್ಲಿ ಒಂದೇ ಒಂದು ಅರ್ಧ ಶತಕವನ್ನು ಸಿಡಿಸಿರಲಿಲ್ಲ. ಆದರೆ ಐಪಿಎಲ್ ಎರಡನೇ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಬೆಂಗಳೂರಿನ ಮೂರನೇ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 32 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

5 / 6

ಇತ್ತ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನಲ್ಲಿ ಸ್ಮೃತಿ ಮಂಧಾನ ಕೂಡ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಆದರೆ ಎರಡನೇ ಸೀಸನ್​ನ ಮೂರನೇ ಪಂದ್ಯದಲ್ಲಿ ಸ್ಮೃತಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಮೊದಲ ಅರ್ಧಶತಕವನ್ನು ಸಿಡಿಸಿದ್ದಾರೆ.

6 / 6

ಇದರಲ್ಲೇ ಇನ್ನೊಂದು ಸಾಮ್ಯತೆಯೆಂದರೆ.. ವಾಸ್ತವವಾಗಿ, ಈ ಇಬ್ಬರೂ ಆಟಗಾರರ ಚೊಚ್ಚಲ ಅರ್ಧಶತಕದ ಹೊರತಾಗಿಯೂ ತಂಡ ಸೋಲನ್ನು ಎದುರಿಸಬೇಕಾಯಿತು. ಡೆಕ್ಕನ್ ಚಾರ್ಜಸ್ ವಿರುದ್ದ ವಿರಾಟ್ ಸಿಡಿಸಿದ ಅರ್ಧಶತಕ ತಂಡಕ್ಕೆ ಜಯ ತಂದುಕೊಟ್ಟಿರಲಿಲ್ಲ. ಇತ್ತ ಸ್ಮೃತಿ ಮಂಧಾನ ಬಾರಿಸಿದ ಅರ್ಧಶತಕ ಕೂಡ ತಂಡಕ್ಕೆ ಗೆಲುವು ತಂದುಕೊಡಲಿಲ್ಲ

Published On - 9:14 pm, Fri, 1 March 24

Loading...
Unable to load recommendations.
Follow Us