ಮದುವೆಯಾಗು ಫಾರ್ಮ್ಗೆ ಬರ್ತಿಯ: ಬಾಬರ್ ಆಝಂಗೆ ಮಾಜಿ ಆಟಗಾರನ ಸಲಹೆ
Babar Azam: ಪಾಕಿಸ್ತಾನ್ ತಂಡದ ಸೀಮಿತ ಓವರ್ಗಳ ತಂಡಗಳ ನಾಯಕರಾಗಿರುವ ಬಾಬರ್ ಆಝಂ ಕಳೆದೊಂದು ವರ್ಷದಿಂದ ಕಳಪೆ ಫಾರ್ಮ್ನಲ್ಲಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ ಎಂದು ವರದಿಯಾಗಿದೆ. ಇದರ ನಡುವೆ ಬಾಬರ್ ಆಝಂ ಫಾರ್ಮ್ ಕಂಡುಕೊಳ್ಳಲು ಮದುವೆಯಾಗಬೇಕೆಂದು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.
1 / 5
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಬಾಬರ್ ಆಝಂ ವಿರುದ್ಧ ಕಟು ಟೀಕೆಗಳು ಕೇಳಿ ಬರುತ್ತಿದೆ. ಈ ಟೀಕೆಗಳ ನಡುವೆ ಎಲ್ಲರ ಗಮನ ಸೆಳೆದಿರುವುದು ಪಾಕಿಸ್ತಾನದ ಮಾಜಿ ಆಟಗಾರ ಬಾಸಿತ್ ಅಲಿ ನೀಡಿರುವ ಸಲಹೆ. ಕಳಪೆ ಫಾರ್ಮ್ನಲ್ಲಿರುವ ಬಾಬರ್ ಮದುವೆಯಾದರೆ ಮತ್ತೆ ಲಯ ಕಂಡುಕೊಳ್ಳಬಹುದು ಎಂದಿದ್ದಾರೆ.
2 / 5
ಬಾಬರ್ ಆಝಂಗೆ ಮದುವೆ ವಯಸ್ಸಾಗಿದೆ. ಹೀಗಾಗಿ ವಿವಾಹವಾಗಲು ಇದು ಸೂಕ್ತ ಸಮಯ. ಏಕೆಂದರೆ ಮದುವೆಯಾದರೆ ಎಲ್ಲರೂ ಬದಲಾಗುತ್ತಾರೆ ಎಂಬ ಮಾತಿದೆ. ಹೀಗಾಗಿ ಕಳಪೆ ಫಾರ್ಮ್ ನಲ್ಲಿರುವ ಬಾಬರ್ ಆಝಂ ಮದುವೆಯಾಗುವುದು ಉತ್ತಮ ಎಂದು ಬಾಸಿತ್ ಅಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
3 / 5
ಬಾಬರ್ ಆಝಂ ತನ್ನ ಹೆತ್ತವರೊಂದಿಗೆ ಮದುವೆಯ ಬಗ್ಗೆ ಮಾತನಾಡಬೇಕು. ವಿವಾಹದ ಬಳಿಕ ನೀವು ವಿಭಿನ್ನ ಬ್ಯಾಟರ್ ಆಗುತ್ತೀರಿ. ವೈಫಲ್ಯಗಳು ಆಟಗಾರನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ನನಗೆ ತಿಳಿದಿದೆ. ಬಾಬರ್‌ನ ತಂದೆ ತಾಯಿಗೆ ಮದುವೆ ಮಾಡುವಂತೆ ನಾನು ವಿನಂತಿಸುತ್ತೇನೆ ಎಂದು ಬಾಸಿತ್ ಅಲಿ ಇದೇ ವೇಳೆ ತಿಳಿಸಿದರು.
4 / 5
29 ವರ್ಷದ ಬಾಬರ್ ಆಝಂ ಪಾಕಿಸ್ತಾನ್ ಪರ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿ ವರ್ಷಗಳೇ ಕಳೆದಿವೆ. 2022 ರಲ್ಲಿ ಕೊನೆಯ ಹಾಫ್ ಸೆಂಚುರಿ ಸಿಡಿಸಿದ್ದ ಬಾಬರ್ ಕಳೆದ 16 ಇನಿಂಗ್ಸ್ ಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಅದರಲ್ಲೂ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 4 ಇನಿಂಗ್ಸ್ ಗಳಿಂದ ಕಲೆಹಾಕಿದ್ದು ಕೇವಲ 62 ರನ್ ಗಳು ಮಾತ್ರ.
5 / 5
ತವರು ಮೈದಾನದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದ ಬಾಬರ್ ಆಝಂ ವಿರುದ್ಧ ಮಾಜಿ ಕ್ರಿಕೆಟಿಗರು ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಈ ಟೀಕೆಗಳ ನಡುವೆ ಮದುವೆಯಾದರೆ ಫಾರ್ಮ್ ಕಂಡುಕೊಳ್ಳಬಹುದು ಎನ್ನುವ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಬಾಸಿತ್ ಅಲಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
Published On - 12:53 pm, Sun, 8 September 24