Glenn Maxwell: ಏಕಾಏಕಿ ನಾಯಕತ್ವದಿಂದ ಕೆಳಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್..!

|

Updated on: Jan 19, 2024 | 3:26 PM

Glenn Maxwell: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಬಿಗ್ ಬ್ಯಾಷ್ ಟಿ20 ಲೀಗ್ ಇದೀಗ ಅಂತಿಮ ಹಂತವನ್ನು ತಲುಪಿದೆ. ಏತನ್ಮಧ್ಯೆ, ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ಅವಮಾನಕರ ಪ್ರದರ್ಶನದ ನಂತರ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

1 / 7
ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಬಿಗ್ ಬ್ಯಾಷ್ ಟಿ20 ಲೀಗ್ ಇದೀಗ ಅಂತಿಮ ಹಂತವನ್ನು ತಲುಪಿದೆ. ಏತನ್ಮಧ್ಯೆ, ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ಅವಮಾನಕರ ಪ್ರದರ್ಶನದ ನಂತರ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

2 / 7
 2018ರಲ್ಲಿ ಈ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಮ್ಯಾಕ್ಸ್‌ವೆಲ್‌ ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತು ನಾಯಕತ್ವದಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ಈ ಸೀಸನ್​ನ ಲೀಗ್ ಹಂತದಲ್ಲಿ ಮ್ಯಾಕ್ಸ್‌ವೆಲ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಗಳಿಸಿದ್ದು, ಇದು ತಂಡದ ನಿರಸ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

3 / 7
ಈ ಆವೃತ್ತಿಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪಯಣವನ್ನು ನಾವು ನೋಡಿದರೆ, ಆಡಿರುವ 10 ಪಂದ್ಯಗಳ ಪೈಕಿ ಈ ತಂಡ  6 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದರೆ, ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

4 / 7
Cricket.com AU ನ ವರದಿಯ ಪ್ರಕಾರ, ಗ್ಲೆನ್ ಮ್ಯಾಕ್ಸ್‌ವೆಲ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ತಮ್ಮ ತಂಡದ ಆಟಗಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಮ್ಯಾಕ್ಸ್‌ವೆಲ್ ಮುಂದಿನ ಸೀಸನ್​ನಿಂದ ತಂಡದಲ್ಲಿ ಕೇವಲ ಆಟಗಾರನಾಗಿ ಆಡಲಿದ್ದಾರೆ ಎಂದು ವರದಿಯಾಗಿದೆ.

5 / 7
ಹೋಬರ್ಟ್ ಹರಿಕೇನ್ಸ್ ತಂಡದ ವಿರುದ್ಧ 7 ರನ್ ಅಂತರದ ಸೋಲಿನ ನಂತರ ಮ್ಯಾಕ್ಸ್‌ವೆಲ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಸೀಸನ್​ನಲ್ಲಿ ತಂಡವು ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್‌ ರೇಸ್‌ ಅನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಲೀಗ್ ಹಂತದ ಕೊನೆಯ 3 ಪಂದ್ಯಗಳನ್ನು ಸೋಲುವ ಮೂಲಕ ತಂಡವು ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.

6 / 7
ಈ ಆವೃತ್ತಿಯ ಬಿಗ್ ಬ್ಯಾಷ್ ಲೀಗ್​ನ, ಲೀಗ್ ಹಂತದ ಪಂದ್ಯಗಳು ಮುಗಿದ ನಂತರ, ಪ್ಲೇಆಫ್ ಪಂದ್ಯಗಳು ಜನವರಿ 19 ರಿಂದ ಪ್ರಾರಂಭವಾಗುತ್ತವೆ. ಈ ಬಾರಿ ಬ್ರಿಸ್ಬೇನ್ ಹೀಟ್, ಸಿಡ್ನಿ ಸಿಕ್ಸರ್ಸ್, ಪರ್ತ್ ಸ್ಕಾರ್ಚರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ತಂಡಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿವೆ.

7 / 7
ಇದರಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ನಡೆದರೆ, ನಾಕೌಟ್ ಪಂದ್ಯ ಪರ್ತ್ ಸ್ಕಾರ್ಚರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವೆ ನಡೆಯಲಿದೆ. ಈ ಋತುವಿನ ಪ್ರಶಸ್ತಿ ಪಂದ್ಯ ಜನವರಿ 24 ರಂದು ನಡೆಯಲಿದೆ.