Happy Birthday AB de Villiers: 40 ನೇ ವಸಂತಕ್ಕೆ ಕಾಲಿಟ್ಟ ಆರ್ಸಿಬಿ ಆಪತ್ಭಾಂದವ..!
Happy Birthday AB de Villiers: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್ಸಿಬಿ ತಂಡದ ಆಪತ್ಭಾಂದವ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಶನಿವಾರ 40 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
1 / 7
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್ಸಿಬಿ ತಂಡದ ಆಪತ್ಭಾಂದವ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಶನಿವಾರ 40 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಎಬಿ ಡಿವಿಲಿಯರ್ಸ್ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ.
2 / 7
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮಾಡಿರುವ ಡಿವಿಲಿಯರ್ಸ್, ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ ಅರ್ಧಶತಕ, ಶತಕ ಹಾಗೂ 150 ರನ್ ಪೂರೈಸಿದ ದಾಖಲೆಯನ್ನು ಬರೆದಿದ್ದಾರೆ.
3 / 7
ಕ್ರಿಕೆಟ್‌ನ ಸವ್ಯಸಾಚಿ ಎನಿಸಿಕೊಂಡಿರುವ ಡಿವಿಲಿಯರ್ಸ್ 2015 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವೇಗದ ಶತಕ ಸಿಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆ ಪಂದ್ಯದಲ್ಲಿ ಅವರು ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
4 / 7
ಕುತೂಹಲಕಾರಿಯಾಗಿ ಡಿವಿಲಿಯರ್ಸ್ ತಮ್ಮ ಎಲ್ಲಾ 25 ಏಕದಿನ ಶತಕಗಳನ್ನು 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದಾರೆ. ಡಿವಿಲಿಯರ್ಸ್ 2015 ರ ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 150 ರನ್ ಸಿಡಿಸಿದ ದಾಖಲೆ ನಿರ್ಮಿಸಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 63 ಎಸೆತಗಳಲ್ಲಿ 150 ರನ್ ಕಲೆಹಾಕಿದ್ದರು.
5 / 7
ದಕ್ಷಿಣ ಆಫ್ರಿಕಾ ಪರ ಮೂರು ಮಾದರಿಯ ಕ್ರಿಕೆಟ್ನಲ್ಲೂ ಆಡಿರುವ ಎಬಿಡಿ ಏಕದಿನದಲ್ಲಿ 53.5 ಸರಾಸರಿಯಲ್ಲಿ 9597 ರನ್ ಕಲೆಹಾಕಿದ್ದರೆ, ಟೆಸ್ಟ್‌ನಲ್ಲಿ 53.5 ಸರಾಸರಿಯಲ್ಲಿ 8765 ರನ್ ಸಿಡಿಸಿದ್ದಾರೆ. ಡಿವಿಲಿಯರ್ಸ್ ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದು, ಬರೋಬ್ಬರಿ 5162 ರನ್ ಸಿಡಿಸಿದ್ದಾರೆ.
6 / 7
ಆರ್ಸಿಬಿ ಪರ 11 ಐಪಿಎಲ್ ಆವೃತ್ತಿಗಳನ್ನು ಆಡಿದ ಎಬಿ ಡಿವಿಲಿಯರ್ಸ್ ತಂಡದ ಪರವಾಗಿ 184 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 151 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಹಾಗೂ 40 ಕ್ಕಿಂತ ಅಧಿಕ ಸರಾಸರಿಯಲ್ಲಿ 5000 ರನ್ ಕಲೆಹಾಕಿದ್ದರು.
7 / 7
ಅಲ್ಲದೆ ಡಿವಿಲಿಯರ್ಸ್ 1480 ದಿನಗಳ ಕಾಲ ಐಸಿಸಿಯ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದರು. ಅವರ ಅಂಕಿಅಂಶಗಳು ಅವರು ಎಂತಹ ಶ್ರೇಷ್ಠ ಆಟಗಾರರಾಗಿದ್ದರು ಎಂಬುದನ್ನು ತೋರಿಸುತ್ತದೆ.